ವೀರಾಜಪೇಟೆ, ಆ. ೨೧: ೨೦೨೧-೨೨ ಸಾಲಿನಲ್ಲಿ ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಚಾಣಕ್ಯ ಕೋಚಿಂಗ್ ಸೆಂಟರ್‌ನ ವತಿಯಿಂದ ಉಚಿತ ಕಾರ್ಯಾಗಾರವನ್ನು ಆನ್‌ಲೈನ್‌ನಲ್ಲಿ ತಾ. ೨೨ ರಿಂದ (ಇಂದಿನಿAದ) ಆಯೋಜಿಸಲಾಗಿದೆ ಎಂದು ಚಾಣಕ್ಯ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷೆ ಕವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ. ೨೨ ರಿಂದ ನಡೆಯಲಿರುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಕುರಿತು ದೂ.ಸಂ: ೮೨೭೭೪೯೬೦೦೭, ೯೪೪೯೭೬೬೫೦೫ ಅನ್ನು ಸಂಪರ್ಕಿಸುವAತೆ ಕೋರಿದ್ದಾರೆ.