ಮಡಿಕೇರಿ, ಆ. ೨೦: ಭಾರತ ಸಂವಿಧಾನದ ಪರಿಚ್ಛೇದ ೩೭೧ ರಲ್ಲಿ, ಗುರುತಿಸಲ್ಪಟ್ಟ ಪ್ರದೇಶಗಳಿಗೆ ವಿಶೇಷ ಮಾನ್ಯತೆ ನೀಡುವ ಅವಕಾಶವಿದ್ದು ಈ ಸಂಬAಧ ಇದುವರೆಗೆ ೩೭೧ ಎ,ಬಿ,ಸಿ..… ರಂತೆ ರಾಷ್ಟçದ ಹಲವಾರು ಪ್ರದೇಶಗಳಿಗೆ ವಿಶೇಷ ಮಾನ್ಯತೆ ದೊರೆತಿದೆ. ೩೭೧-ಜೆ ಮೂಲಕ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸರಕಾರ ವಿಶೇಷ ಮಾನ್ಯತೆ ನೀಡಿದೆ. ಅದೇ ರೀತಿ ಕೊಡಗಿಗೂ ಪ್ರಾತಿನಿದ್ಯ ಮಡಿಕೇರಿ, ಆ. ೨೦: ಭಾರತ ಸಂವಿಧಾನದ ಪರಿಚ್ಛೇದ ೩೭೧ ರಲ್ಲಿ, ಗುರುತಿಸಲ್ಪಟ್ಟ ಪ್ರದೇಶಗಳಿಗೆ ವಿಶೇಷ ಮಾನ್ಯತೆ ನೀಡುವ ಅವಕಾಶವಿದ್ದು ಈ ಸಂಬAಧ ಇದುವರೆಗೆ ೩೭೧ ಎ,ಬಿ,ಸಿ..… ರಂತೆ ರಾಷ್ಟçದ ಹಲವಾರು ಪ್ರದೇಶಗಳಿಗೆ ವಿಶೇಷ ಮಾನ್ಯತೆ ದೊರೆತಿದೆ. ೩೭೧-ಜೆ ಮೂಲಕ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸರಕಾರ ವಿಶೇಷ ಮಾನ್ಯತೆ ನೀಡಿದೆ. ಅದೇ ರೀತಿ ಕೊಡಗಿಗೂ ಪ್ರಾತಿನಿದ್ಯ ಇಂದು ಮೂರ್ನಾಡಿನ ಕಾಫಿ ಕೂರ್ಗ್ ಕ್ಯಾಸಲ್ ರೆಸಾರ್ಟ್ನಲ್ಲಿ ಕೊಡವರ ಬೇಡಿಕೆಗಳು ಹಾಗೂ ಹಕ್ಕೊತ್ತಾಯಗಳ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟçದ ವಿವಿಧ ಪ್ರದೇಶಗಳಿಗೆ ಈ ಪರಿಚ್ಛೇದದಡಿಯಲ್ಲಿ ವಿಶೇಷ ಸ್ಥಾನಮಾನ ದೊರೆಯುತ್ತದೆ. ಪರಿಚ್ಛೇದ ೩೭೦ ರಲ್ಲಿ ಕಾಶ್ಮೀರವನ್ನು ಪರಿಗಣಿಸಲಾಗಿತ್ತು. ಆದರೆ ಇದೀಗ ಅದನ್ನು ಕಸಿದುಕೊಳ್ಳಲಾಗಿದೆ. ಇನ್ನುಳಿದಂತೆ ಪರಿಚ್ಛೇದ ೩೭೧ ರಲ್ಲಿ ಸಿಕ್ಕಿಮ್, ಅರುಣಾಚಲಪ್ರದೇಶ, ಮಿಜೋರಾಮ್ ಹಾಗೂ ಇತರ ರಾಜ್ಯಗಳ ನಿವಾಸಿಗಳಿಗೆ ಸರಕಾರದಿಂದ ಬಹಳಷ್ಟು ಸೌಲಭ್ಯಗಳು ದೊರಕುತ್ತಿವೆ. ಇದೇ ರೀತಿ ಕೊಡವರ ವಿಶೇಷ ಪರಂಪರೆ, ಪದ್ಧತಿ, ಜೀವನಶೈಲಿ ಅನುಸಾರ ಕೊಡಗಿಗೆ ಅನ್ವಯವಾಗುವಂತೆ ಪರಿಚ್ಛೇದ

೩೭೧-ಕೆ ತರಬೇಕಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಸಂವಿಧಾನವೇ ಗ್ರಂಥ

ಭಾರತೀಯರು ಎನಿಸಿ ಕೊಳ್ಳಬೇಕಾದರೆ, ಸಂವಿಧಾನವನ್ನೇ ಪವಿತ್ರ ಗ್ರಂಥ ಎಂದು ಭಾವಿಸಬೇಕು. ಇದರಲ್ಲಿನ ೪೦೫ ಪರಿಚ್ಛೇದಗಳ ಬಗ್ಗೆ ಅರಿತಿರಬೇಕು ಎಂದು ಹೇಳಿದರು. ಕೊಡವರಿಗೆ ಲಭಿಸಬೇಕಾದ ಬುಡಕಟ್ಟು ಸ್ಥಾನಮಾನದ ಬಗ್ಗೆ ಹಾಗೂ ಕೊಡವ ಭಾಷೆಯನ್ನು ೮ನೇ ಶೆಡ್ಯೂಲ್‌ಗೆ ಸೇರಿಸುವ ಸಲುವಾಗಿ ಸಂಸತ್‌ನಲ್ಲಿ ಚರ್ಚಿಸಿ ದಾಖಲಿಸಲಾಗಿದೆ. ತಾವು ಕೊಡವನಲ್ಲದಿದ್ದರೂ ಕೊಡವರ ಪರ ಸಂಸತ್ತಿನಲ್ಲಿ ಯಾರೂ ಚರ್ಚಿಸಲು ಇಲ್ಲದಿದ್ದು, ಸಾಂವಿಧಾನ್ವಿಕವಾಗಿ ಕೊಡವರ ಪರ ತಾವು ವಾದ ಮಾಡಿರುವುದಾಗಿ ತಿಳಿಸಿದರು.

ಕೋವಿ-ಹಕ್ಕು ವಿನಾಯಿತಿ ಮುಂದುವರಿಯಲಿ

ಉತ್ತರಪ್ರದೇಶ ರಾಜ್ಯದಲ್ಲಿ ಕೋವಿ ಬಳಕೆ ಸಂಬAಧ ಕಠಿಣ ನಿಯಮವಿದ್ದರೂ ರಾಷ್ಟçದಲ್ಲೇ ಅತ್ಯಂತ ಹೆಚ್ಚು ಅಪರಾಧ ಪ್ರಕರಣಗಳು ಈ ರಾಜ್ಯದಲ್ಲಿ ಸಂಭವಿಸುತ್ತವೆ. ಆದರೆ ಕೊಡಗಿನಲ್ಲಿ ಬಹುತೇಕ ಮನೆಗಳಲ್ಲಿ ಕೋವಿ ಇದ್ದರೂ, ಅದನ್ನು ತಮ್ಮ ಸಂಸ್ಕೃತಿಯAತೆ ಪೂಜಿಸುವ ಕಾರ್ಯ ನಡೆಯುತ್ತದೆ ಹೊರತು ಪ್ರಾಣ ಹಾನಿಗೆ ಯಾರೂ ಬಳಸುವುದಿಲ್ಲ ಎಂದ ಅವರು, ಕೋವಿ ಹಕ್ಕು ವಿನಾಯಿತಿ ಮುಂದುವರಿಕೆ ಸಂಬAಧ ಸಿ.ಎನ್.ಸಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಹಿಂದಿ ಸಂಸ್ಕೃತಿ ಬೇಡ

ಹಿಂದಿ ಸಂಸ್ಕೃತಿ, ಭಾಷೆಯನ್ನು ಬಲವಂತವಾಗಿ ಹೇರುವ ಪ್ರಯತ್ನ ನಡೆಯುತ್ತಿದೆ. ಇದು ನಮಗೆ ಅಗತ್ಯವಿಲ್ಲ. ಹಿಂದಿ ಭಾಷೆಯ ವಿರೋಧಿ ತಾವಲ್ಲ. ಈ ಭಾಷೆಯು ಇತರ ಭಾಷೆಗಳಾದ ಕನ್ನಡ, ತೆಲಗು, ತಮಿಳಿನಂತೆ ರಾಷ್ಟçದಲ್ಲಿ ಗುರುತಿಸಲ್ಪಟ್ಟಿವೆ. ಆದರೆ ಅದನ್ನು ರಾಷ್ಟç ಭಾಷೆ ಎಂದು ಪರಿಗಣಿಸುವುದು ತಪ್ಪಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಹಿಂದಿ ಸಂಸ್ಕೃತಿ ಬಿಂಬಿಸುವ ಉತ್ತರಪ್ರದೇಶ, ರಾಜಸ್ತಾನಗಳಿಂದ

(ಮೊದಲ ಪುಟದಿಂದ) ಕೊಡಗು ಸುಮಾರು ೨೦೦ ವರ್ಷಗಳಷ್ಟು ಮುಂದೆ ಇದೆ ಎಂದರೆ ತಪ್ಪಾಗಲಾರದು.

ಕೊಡವರ ಸಂಸ್ಕೃತಿ, ಪದ್ಧತಿ ಶ್ರೇಷ್ಠವಾಗಿದೆ. ಕೊಡವರು ಧರಿಸುವ ಉಡುಪು, ಅವರ ಆಚಾರ-ವಿಚಾರ ವಿಭಿನ್ನವಾಗಿದ್ದು ಇತರ ಸಂಸ್ಕೃತಿಗಳನ್ನು ಹೇರುವುದು ಅಗತ್ಯವಿಲ್ಲ ಎಂದು ಹೇಳಿದರು. ಈ ನಿಟ್ಟಿನಲ್ಲಿ ಕರ್ನಾಟಕದ ಸಂಸ್ಕೃತಿಯು ಉಳಿಸಬೇಕಾದರೆ ಕೊಡವ ಸಂಸ್ಕೃತಿಯೂ ಉಳಿಯಬೇಕೆಂದರು. ಈ ಸಂಸ್ಕೃತಿ, ಆಚಾರ, ವಿಚಾರಗಳ ಆಧಾರದ ಮೇರೆಗೆ ಬುಡಕಟ್ಟು ಸ್ಥಾನಮಾನ ದೊರಕುವ ಹೋರಾಟ ನಡೆಯುತ್ತಿದೆ. ಬುಡಕಟ್ಟು ಸ್ಥಾನಮಾನ ಪಡೆಯುವುದರಲ್ಲಿ ಕೀಳರಿಮೆ ಬೇಡ ಎಂಬ ಸಲಹೆ ನೀಡಿದರು. ಹೋರಾಟ ನಡೆಸುತ್ತಿರುವ ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರಿಗೆ ಬೆಂಬಲ ನೀಡುವಂತೆ ಒತ್ತಾಯಿಸಿದರು. ಬೆಳೆಗಾರರು ವರ್ಷಕ್ಕೆ ಒಂದು ಮೂಟೆ ಕಾಫಿಯಷ್ಟಾದರೂ ಸಂಘಟನೆಗೆ ದೇಣಿಗೆ ನೀಡಿ ಸಹಕರಿಸುವಂತೆ ಮನವಿ ಮಾಡಿದರು.

ಮತ ಹಾಕುವಾಗ ಯೋಚಿಸಿ

ಚುನಾವಣೆಯಲ್ಲಿ ಮತ ಹಾಕುವಾಗ ಯೋಚಿಸಿ ಮತ ಹಾಕುವಂತೆ ಬಿ.ಕೆ ಹರಿಪ್ರಸಾದ್ ಅವರು ಸಲಹೆ ನೀಡಿದ್ದು, ಕೊಡವರ ಸಂಸ್ಕಾರ ಯಾರು ಉಳಿಸುತ್ತಾರೆ, ಬೆಂಬಲ ನೀಡುತ್ತಾರೆ ಅಂತಹವರಿಗೆ ಮತ ನೀಡುವಂತಾಗಬೇಕೆAದರು.

ಕಾರ್ಯಪ್ಪ - ತಿಮ್ಮಯ್ಯ ಸ್ಮರಣೆ

ಉತ್ತರ ಭಾರತದ ಸಿಕ್ಕಿಮ್ ರಾಜ್ಯದಲ್ಲಿನ ರಸ್ತೆಯೊಂದಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ಅವರ ನೆನಪಿಗೆ ಕಾರ್ಯಪ್ಪ ರಸ್ತೆ ಎಂದು ನೇಮಿಸಲಾಗಿದೆ. ಹಿಮಾಚಲ್ ಪ್ರದೇಶದಲ್ಲಿನ ರಸ್ತೆಯೊಂದನ್ನು ಜನರಲ್ ತಿಮ್ಮಯ್ಯ ಅವರ ನೆನಪಿನಲ್ಲಿ ತಿಮ್ಮಯ್ಯ ರಸ್ತೆ ಎಂದು ನೇಮಿಸಲಾಗಿದೆ. ಕೊಡಗಿನ ಈ ಈರ್ವರು ವೀರರು ರಾಷ್ಟçದಾದ್ಯಂತ ಪ್ರಸಿದ್ಧತೆ ಪಡೆದುಕೊಂಡಿದ್ದಾರೆ ಎಂದು ಕೊಡಗಿನ ಈರ್ವರು ವೀರರನ್ನು ಸ್ಮರಿಸಿದರು.

ಕಾನೂನಾತ್ಮಕ ಹೋರಾಟ ನಡೆಯುತ್ತಿದೆ

ಎ.ಎಸ್. ಪೊನ್ನಣ್ಣ

ಯಾವುದೇ ಹೋರಾಟ ಮಾಡಿದರೂ ಅದನ್ನು ಕಾನೂನಾತ್ಮಕವಾಗಿ ಮಾಡಬೇಕು ಎಂಬುದಾಗಿ ಹಿರಿಯ ವಕೀಲ ಅಜ್ಜಿಕುಟ್ಟೀರ.ಎಸ್ ಪೊನ್ನಣ್ಣ ಅವರು ಹೇಳಿದರು. ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ಸಂಬAಧ ಈ ಹಿಂದೆ ಅಧ್ಯಯನ ನಡೆದಿದ್ದು, ಅಧ್ಯಯನದ ದಾರಿಯನ್ನು ಯಾರೋ ತಪ್ಪಿಸಿದ್ದು ಎಸ್.ಟಿ ಟ್ಯಾಗ್ ದೊರಕಬಾರದೆಂಬ ದುರುದ್ದೇಶದಿಂದ ಇದು ನಡೆದಿದೆ. ಇತರ ಎರಡು ಜನಾಂಗಗಳೂ ಬುಡಕಟ್ಟು ಸ್ಥಾನಮಾನಕ್ಕೆ ಹೋರಾಟ ನಡೆಸಿದಾಗ ಆ ಜನಾಂಗಗಳ ಪದ್ಧತಿ, ಸಂಸ್ಕೃತಿಯ ಕುರಿತು ಅಧ್ಯಯನ ನಡೆದಿದೆ. ಆದರೆ ಕೊಡವ ಜನಾಂಗದ ಅಧ್ಯಯನ ಮಾಡುವಾಗ ಮಾತ್ರ ಆರ್ಥಿಕ ಸ್ಥಿತಿಗತಿ ಅನುಸಾರ ಅಧ್ಯಯನ ನಡೆಸಲಾಗಿದ್ದು ಅನ್ಯಾಯವಾಗಿದೆ. ಈ ಸಂಬAಧ ಉಚ್ಛ ನ್ಯಾಯಾಲಯದಲ್ಲಿ ವಾದಿಸಲಾಗಿದ್ದು ಇದೀಗ ಮರು ಅಧ್ಯಯನ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ ಎಂದರು.

೩೦ ವರ್ಷಗಳಿಂದ ಎನ್.ಯು ನಾಚಪ್ಪ ಅವರ ಮುಂದಾಳತ್ವದಲ್ಲಿ ಹೋರಾಟ ನಡೆಯುತ್ತಿದೆ. ನಿರಂತರವಾಗಿ ಸ್ಥಿರತೆಯಿಂದ ಹೋರಾಟ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಕೃಷಿ ಮಸೂದೆ ವಿರುದ್ಧ ಕೃಷಿಕರು ೧ ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅದೇ ರೀತಿ ಈ ಹೋರಾಟಕ್ಕೂ ಜನರು ಬೆಂಬಲ ನೀಡಬೇಕಾಗಿ ಸಲಹೆ ಇತ್ತರು.

ಅಸ್ತಿತ್ವಕ್ಕೆ ಧÀಕ್ಕೆ ತರುವವರನ್ನು ಕಂಡು ಹಿಡಿಯಬೇಕು

ನಾವು ಯಾರ ವಿರುದ್ಧವೂ ದ್ವೇಷ ಸಾಧಿಸುವ ಅಗತ್ಯವಿಲ್ಲ. ಆದರೆ ನಮ್ಮ ಅಸ್ತಿತ್ವಕ್ಕೆ ಧÀಕ್ಕೆ ತರಲು ಪ್ರಯತ್ನಿಸುತ್ತಿರುವವರು ಯಾರು ಎಂಬುದನ್ನು ಕಂಡುಹಿಡಿಯಬೇಕು. ನಮ್ಮ ಶತ್ರು ಯಾರು, ಮಿತ್ರರಾರು ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕೆಂದರು.

ಜನಾAಗದ ಭವಿಷ್ಯಕ್ಕೆ ಹೋರಾಟ

ಪ್ರಸ್ತುತ ಬುಡಕಟ್ಟು ಸ್ಥಾನಮಾನ ದೊರಕುವ ಸಂಬAಧ ಹಾಗೂ ಕೋವಿ ಹಕ್ಕು ವಿನಾಯಿತಿ ಸಂಬAಧ ನಡೆಯುತ್ತಿರುವ ಹೋರಾಟ ಕೇವಲ ಕೆಲವರಿಗೆ ಮಾತ್ರವಲ್ಲ. ಹೋರಾಟ ಯಶಸ್ವಿಯಾದಲ್ಲಿ ಜನಾಂಗದ ಭವಿಷ್ಯ ದೃಢವಾಗುತ್ತದೆ. ಜನಾಂಗದ ಅಸ್ತಿತ್ವ ಉಳಿಯಲು ಸಹಕಾರಿಯಾಗುತ್ತದೆ ಎಂದರು.

ಜನಸಂಖ್ಯೆ ಕಡಿಮೆ ಎಂಬ ಭಾವನೆ ಬೇಡ

ಲಕ್ಕವಳ್ಳಿ ಮಂಜುನಾಥ್

ರಾಜ್ಯ ಬುಡಕಟ್ಟು ಕುರುಬ ಸಂಘರ್ಷ ಸಮಿತಿ ಮುಖಂಡ, ಹೈಕೋರ್ಟ್ ವಕೀಲ ಲಕ್ಕವಳ್ಳಿ ಮಂಜುನಾಥ್ ಮಾತನಾಡಿ, ಕೊಡವರಿಗೆ ಸಂವಿಧಾನ ಬದ್ದ ಹಕ್ಕುಗಳು ದೊರಕಿಸಲು ಸಿಎನ್‌ಸಿ ಸಂಘಟನೆ ಸುದೀರ್ಘ ಹೋರಾಟ ಮಾಡುತ್ತಿದೆ. ಕೊಡವ ಸಮುದಾಯದ ಜನಸಂಖ್ಯೆ ಕಡಿಮೆ ಇದೆ. ಆದರೆ ಕೊಡವರ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಹೋರಾಟದ ಹಾದಿ, ಗುರಿ ನಿಖರವಾಗಿಯೂ, ತೀಕ್ಷ÷್ಣವಾಗಿಯೂ ಸಂವಿಧಾನ ಬದ್ದವಾಗಿಯೂ ಇದೆ. ಈ ಹೋರಾಟಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೀಗಾಗಿ ಯಾರೂ ಕೂಡ ಜನಸಂಖ್ಯೆಯ ಬಗ್ಗೆ ಚಿಂತೆ ಮಾಡದೆ ಸಿಎನ್‌ಸಿ ಜೊತೆ ಕೈ ಜೋಡಿಸುವಂತೆ ಲಕ್ಕವಳ್ಳಿ ಮಂಜುನಾಥ್ ಸಲಹೆ ನೀಡಿದರು. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮಾಜ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೆಲ ಸಮಯದ ಹಿಂದೆ ಬೃಹತ್ ಪ್ರತಿಭಟನೆ ನಡೆಸಿತು. ಆದರೆ ಪ್ರತಿಭಟನೆಯ ಸ್ವರೂಪ, ಹಾದಿ ಯೋಜಿತವಾಗಿರಲಿಲ್ಲ. ಹೀಗಾಗಿ ಬೇಡಿಕೆಯ ಕೂಗು ಮುಖ್ಯಮಂತ್ರಿಗಳನ್ನು ತಲುಪಲು ವಿಫಲವಾಯಿತು ಎಂದು ಇದೇ ಸಂದರ್ಭ ವಿಷಾಧ ವ್ಯಕ್ತಪಡಿಸಿದರು.

ಬುಡಕಟ್ಟು ಸ್ಥಾನಮಾನ ನಮ್ಮ ಹಕ್ಕು

ಎನ್.ಯು. ನಾಚಪ್ಪ

ಬುಡಕಟ್ಟು ಸ್ಥಾನಮಾನ ಎಂಬುದು ಕೊಡವರ ಹಕ್ಕು. ಇದನ್ನು ಸಾಂವಿಧಾನ್ವಿಕವಾಗಿ ಪಡೆಯುವ ಹೋರಾಟ ನಡೆಯುತ್ತಿದೆ ಹೊರತು ಈ ಸ್ಥಾನಕ್ಕೆ ನಾವು ಬೇಡುತ್ತಿಲ್ಲ ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿದರು. ಕೊಡವ ಲ್ಯಾಂಡ್, ಕೊಡವ ಭಾಷೆ, ಪದ್ಧತಿ, ಪರಂಪರೆ, ಆಚಾರ ವಿಚಾರಗಳು ಸಂವಿಧಾನದ ಭದ್ರತೆಗೆ ಒಳಪಡಬೇಕು. ಬೇಟೆ ಮತ್ತು ಯುದ್ಧವನ್ನೇ ಬದುಕನ್ನಾಗಿಸಿದ ಈ ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ದೊರಕಲೇಬೇಕು ಎಂದು ಆಗ್ರಹಿಸಿದರು. ಕೊಡವರಿಗೆ ಅನಾದಿ ಕಾಲದಿಂದಲೇ ಕೋವಿ ಹೊಂದುವ ಹಕ್ಕನ್ನು ನೀಡಲಾಗಿದೆ. ಇದು ವಿಶೇಷ ಮಾನ್ಯತೆಯಾಗಿದ್ದು, ಕೊಡವರು ತಮ್ಮ ಹೆಣ್ಣು ಮಕ್ಕಳಿಗೂ ಕೋವಿ ವಿನಾಯಿತಿ ಹಕ್ಕನ್ನು ವರ್ಗಾಯಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ಹೋರಾಟದ ವಿಚಾರದ ಕುರಿತು ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ. ಹೋರಾಟದಿಂದ ಮಾತ್ರವೇ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂಬುದನ್ನು ಮೊದಲು ಮನಗಾಣುವಂತೆ ನಾಚಪ್ಪ ನೆರೆದಿದ್ದವರಿಗೆ ಕರೆ ನೀಡಿದರು. ಬುಡಕಟ್ಟು ಸ್ಥಾನಮಾನ ದೊರೆಯುವ ಸಂಬAಧ ಹಾಗೂ ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸುವ ಸಂಬAಧ ಬಿ.ಕೆ ಹರಿಪ್ರಸಾದ್ ಅವರು ಸಂಸತ್ತಿನಲ್ಲಿ ವಾದಿಸಿರುವುದನ್ನು ಪ್ರಶಂಸಿದರು.

ತಾಯ್ನಾಡಿನಲ್ಲೇ ಗುರುತಿಸಲಾಗುತ್ತಿಲ್ಲ

ಅನೇಕ ಕೊಡವರು ಹೊರರಾಜ್ಯ, ವಿದೇಶಗಳಿಗೆ ತೆರಳಿ ಯಾರಿಗೂ ತೊಂದರೆ ನೀಡದೆ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ. ಅನೇಕರು ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಆದರೆ ನಮ್ಮದೇ ಆದ ನಾಡಿನಲ್ಲಿ ನಮ್ಮನ್ನು ಗುರುತಿಸದೇ ಇರುವುದನ್ನು ವಿಷಾಧಿಸಿದರು. ನಾವು ಕೊಡಗಿನಿಂದ ಹೊರಹೋದರೆ ಮಾತ್ರ ಮೂಲಭೂತ ಸೌಕರ್ಯಗಳಿಗೆ ಬೇಡಿಕೆ ಇಡಬೇಕು. ಆದರೆ ಇಲ್ಲಿ ಅವುಗಳೆಲ್ಲ ನಮ್ಮ ಹಕ್ಕು. ಭೂ-ರಾಜಕೀಯ ಸ್ವಾಯತ್ತತೆಗೆ ಈ ನಿಟ್ಟಿನಲ್ಲಿ ಹೋರಾಟ ನಡೆಸುವುದು ಅಗತ್ಯ ಎಂಬುದಾಗಿ ಪ್ರತಿಪಾದಿಸಿದರು.

ಸರಕಾರದ ಆಸಕ್ತಿ ಅಗತ್ಯ

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಪ್ರದಾಯ ಅಮಾನವೀಯವೆಂದು ನಿಷೇಧಿಸುವಂತೆ ಹಲವರು ಒತ್ತಾಯಿಸಿದ್ದರು. ಕೆಲವು ತಿಂಗಳು ನಿಷೇಧವಾಗಿತ್ತು. ಆದರೆ ಸರಕಾರದ ವಿಶೇಷ ಆಸಕ್ತಿಯಿಂದಾಗಿ ಅದಕ್ಕೆ ಮರುಜೀವ ದೊರಕಿತು. ಅದೇ ರೀತಿ ದಕ್ಷಿಣ ಕನ್ನಡದಲ್ಲಿ ಕಂಬಳಕ್ಕೂ ವಿರೋಧವಿತ್ತು. ಇವೆÀರಡೂ ಕೂಡ ಸಾಂಪ್ರದಾಯಿಕವಾಗಿ ಹಲವಾರು ವರ್ಷಗಳಿಂದ ನಡೆಯುತ್ತಿವೆ ಎಂಬ ಕಾರಣಕ್ಕೆ ನಿಷೇಧಿಸದಂತೆ, ಹಾಗೇ ಮುಂದುವರೆಯುವAತೆ ಸರಕಾರವೇ ನಿರ್ಧರಿಸಿತು. ಆದರೆ ಕೊಡವರ ವಿರುದ್ಧ ಯಾರೋ ತಂತ್ರಗಾರಿಕೆ ಮಾಡುತ್ತಿದ್ದಾರೆ. ಅನಾವಶ್ಯಕವಾಗಿ ಕೋವಿ ಹಕ್ಕು ವಿನಾಯಿತಿಯನ್ನು ನಿಲ್ಲಿಸುವಂತೆ ಆಕ್ಷೇಪಣೆಗಳಿದ್ದರೂ ಸರಕಾರ ಯಾವುದೇ ರೀತಿಯ ಆಸಕ್ತಿ ತೋರಿಸುತ್ತಿಲ್ಲ ಎಂದು ವಿಷಾಧಿಸಿದರು.

ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಲಿ

ಇತ್ತೀಚಿನ ದಿನಗಳಲ್ಲಿ ಯರ‍್ಯಾರಿಗೋ ಭಾರತ ರತ್ನ ನೀಡಲಾಗುತ್ತಿದೆ. ಕೊಡಗಿನವರು ವೀರರು, ಶೂರರು, ಸುಂದರಿಯರು ಎಂದು ರಾಜಕಾರಣಿಗಳು ಭಾಷಣಕ್ಕೆ ಸೀಮಿತವಾಗಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಲು ಎಷ್ಟೇ ಮನವಿ ಮಾಡಿದರೂ ಇನ್ನೂ ದೊರಕಲಿಲ್ಲ. ಶೀಘ್ರದಲ್ಲೇ ಭಾರತ ರತ್ನ ದೊರಕುವಂತಾಗಲಿ ಎಂದರು.

ಕೊಡವ ಸಮುದಾಯಕ್ಕೆ ಅದರದ್ದೇ ಆದ ಕೀರ್ತಿ ಇದೆ ಪಿ.ಸೋಮಯ್ಯ

ಬೆಂಗಳೂರು ಸಂತ ಜೋಸೆಫ್ ಕಾಲೇಜಿನ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಪರಂದAಡ ಸೋಮಯ್ಯ ಮಾತನಾಡಿ, ಕೊಡವ ಸಮುದಾಯಕ್ಕೆ ಅದರದ್ದೇ ಆದ ಕೀರ್ತಿ ಇದೆ. ಕೊಡವ ಸಮುದಾಯ ಬುಡಕಟ್ಟು ಸ್ಥಾನಮಾನಕ್ಕೆ ಅರ್ಹವಾಗಿದೆ. ಕೊಡವರು ಹಿಂದೂ ಆಗಿದ್ದರೂ ಮೂಲ ಸಂಸ್ಕೃತಿ ಬೇರೆಯೇ ಇದೆ. ಕೊಡಗು ಜಿಲ್ಲೆ ಕೊಡವರ ಮೂಲ ನೆಲೆಯಾಗಿದ್ದು, ಮಹಿಳೆಯರಿಗೆ ವಿಶೇಷ ಮಾನ್ಯತೆ, ಪದ್ಧತಿ, ಆಚಾರ ವಿಚಾರಗಳು, ಹುಟ್ಟು ಸಾವಿನ ಪದ್ಧತಿಗಳು ಹೀಗೆ ೧೩ ಕ್ಕೂ ಹೆಚ್ಚು ಅಂಶಗಳು ಕೊಡವರು ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವುದನ್ನು ಬಿಂಬಿಸುತ್ತದೆ. ಹೀಗಾಗಿ ಎಸ್.ಟಿ. ಸ್ಥಾನಮಾನ, ಕೊಡವ ಭಾಷೆಗೆ ಸಂವಿಧಾನದ ಭದ್ರತೆಯೂ ದೊರಕಬೇಕು. ಇದಕ್ಕಾಗಿ ಹೋರಾಡುತ್ತಿರುವ ಸಿಎನ್‌ಸಿಗೆ ಎಲ್ಲರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಕೊಡವ ರತ್ನ ಪ್ರಶಸ್ತಿ ಪ್ರದಾನ

ಕೊಡವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಬಿ.ಕೆ. ಹರಿಪ್ರಸಾದ್ ಮತ್ತು ಎ.ಎಸ್. ಪೊನ್ನಣ್ಣ ಅವರಿಗೆ ಕೊಡವ ರತ್ನ ಬಿರುದು, ಪಿ.ಎಸ್. ಸೋಮಯ್ಯ ಹಾಗೂ ಲಕ್ಕವಳ್ಳಿ ಮಂಜುನಾಥ್ ಅವರುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳನ್ನು ಸಾಂಪ್ರದಾಯಿಕವಾಗಿ ದುಡಿಕೊಟ್ಟ್ ಪಾಟ್‌ನೊಂದಿಗೆ ಸ್ವಾಗತಿಸಲಾಯಿತು. ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಸೇರಿದಂತೆ ಅತಿಥಿಗಳು ಬಾಳೆ ಕಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕುಶಾಲತೋಪು ಹಾರಿಸಲಾಯಿತು. ಸಂಘಟನೆಯ ಕಾರ್ಯಕರ್ತರು ಸಾಂಪ್ರದಾಯಿಕ ಧಿರಿಸಿನಲ್ಲಿ ಪಾಲ್ಗೊಂಡಿದ್ದರು. ವ್ಯಾಲಿ ಡ್ಯೂ ಕಲಾ ತಂಡ ಕೊಡವ ಸಾಂಪ್ರದಾಯಿಕ ಕೋಲಾಟ್, ಚೌರಿಯಾಟ್, ಕತ್ತಿಯಟ್ ನೃತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಕಾಳಪಂಡ ರವಿ ತಮ್ಮಯ್ಯ, ಐಲಪಂಡ ಪುಷ್ಪ ಪೂಣಚ್ಚ, ಪುಲ್ಲೇರ ಸ್ವಾತಿ, ಚಂಬAಡ ಜನತ್ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಕೊಡವ ಕೊಡವತಿಯರು ಹಾಜರಿದ್ದರು.