ವೀರಾಜಪೇಟೆ, ಆ.೨೦: ರೈತಾಪಿ ವರ್ಗವು ತೋಟಗಳ ನಿರ್ವಹಣೆಗಾಗಿ ಸಾಲ ಹೊಂದಲು ಬ್ಯಾಂಕ್‌ಗಳಿಗೆ ಹೋದಲ್ಲಿ ದಾಖಲೆಗಳಲ್ಲಿ ಪಿ.೧,ಪಿ೨,ಪಿ೩ ಮತ್ತು ಪಿ೪ ಎಂದು ನಮೂದಾಗಿರುವುದರಿಂದ ಸಾಲ ಪಡೆಯಲು ರೈತರಿಗೆ ಕಷ್ಟಸಾಧ್ಯವಾಗಿದೆ. ಈ ಗೊಂದಲ ಸರಿಪಡಿಸುವಂತೆ ತಹಶೀಲ್ದಾರ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಘಟಕದಿಂದ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕವು ವೀರಾಜಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಆರ್. ಯೋಗಾನಂದ ಅವರಿಗೆ ರೈತರ ಆರ್‌ಟಿಸಿಯಲ್ಲಿ ಗೊಂದಲ ಕುರಿತು ವಿವರಿಸಿ ಸರಿಪಡಿಸಲು ಆಗ್ರಹಿಸಿದರು. ಬಳಿಕ ಮಾತನಾಡಿದ ಕ.ರಾ. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಅವರು ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿರುವ ಶೇ. ೫೦ ರಷ್ಟು ರೈತರು ಹೊಂದಿರುವ ತೋಟ ಮತ್ತು ಗದ್ದೆ ಕಂದಾಯಕ್ಕೆ ಬಾರದಿರುವುದರಿಂದ ದಾಖಲೆಗಳಲ್ಲಿ ಪಿ೧,ಪಿ೨,ಪಿ೩, ಮತ್ತು ಪಿ೪ ಎಂದು ನಮೂದಾಗಿದ್ದು ಇದರಿಂದ ತೋಟಗಳ ನಿರ್ವಹಣೆಗಾಗಿ ಬ್ಯಾಂಕ್‌ಗಳಲ್ಲಿ ಸಾಲ ಹೊಂದಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂದರು.

ತಹಶೀಲ್ದಾರ್ ಅವರು ಕಡತಗಳು ಮೊದಲಿಗೆ ಗ್ರಾಮ ಲೆಕ್ಕಿಗರ ಬಳಿ ಬರಬೇಕು ಅಲ್ಲದೆ ಆರ್.ಟಿ.ಸಿಯಲ್ಲಿ ಹೆಸರು ಸೇರಿದಂತೆ ತಿದ್ದುಪಡಿಗೆ ಅವಕಾಶವಿದೆ ಆದರೆ, ಆರ್.ಟಿ.ಸಿ ಯಲ್ಲಿ ಹೆಸರು ತೆಗೆಯುವ ಮತ್ತು ಸೇರ್ಪಡೆಗೊಳಿಸುವ ಹಕ್ಕು ನಮಗಿಲ್ಲಾ. ಆರ್‌ಟಿಸಿಯಲ್ಲಿ ಹೆಸರು ತೆಗೆಯಲು ಜಿಲ್ಲಾ ಉಪ ವಿಭಾಗಧಿಕಾರಿಗಳಿಗೆ ಮಾತ್ರ ಅವಕಾಶವಿದೆ. ಪಟ್ಟೆದಾರರ ಮರಣ ಪ್ರಮಾಣ ಪತ್ರ ನೀಡಿದರು ಕೆಲವು ಸಂದರ್ಭದಲ್ಲಿ ಸಂಬAಧಿಕರು ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾಗುತ್ತಾರೆ. Áದುದರಿಂದ ದಾಖಲೆಗಳನ್ನು ಸರಿದೂಗಿಸುವುದು ಕಷ್ಟಸಾದ್ಯವಾಗಿದೆ ಎಂದು ಹೇಳಿದರು. ಸಂಚಾಲಕರಾದ ಸುಭಾಷ್ ಸುಬ್ಬಯ್ಯ ಅವರು ಮಾತನಾಡಿ ಸರ್ವೇ ಇಲಾಖೆಯಲ್ಲಿ ಸಿಬ್ಬಂದಿಗಳು ರೈತರನ್ನು ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ.

ಕಡತಗಳು ಶೀಘ್ರವಾಗಿ ವಿಲೇವಾರಿ ಮಾಡದೆ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಕಂದಾಯ ಇಲಾಖೆ ಮತ್ತು ಭೂ ದಾಖಲೆಗಳ ಇಲಾಖೆ ಮಧ್ಯೆ ಹೊಂದಾಣಿಕೆಯ ಕೊರತೆ ಮತ್ತು ರೈತರಿಗೆ ಸ್ಪಷ್ಟವಾದ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು ಇದರಿಂದ ರೈತರು ತನ್ನ ಕಾಯಕವನ್ನು ಬಿಟ್ಟು ಕಚೇರಿಗೆ ನಿತ್ಯ ಅಲೆಯುವಂತಾಗಿದೆ ಎಂದು ಆರೋಪಿಸಿದರು. ನೂತನವಾಗಿ ಸ್ಥಾಪನೆಗೊಂಡ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಸಿಬ್ಬಂದಿಗಳನ್ನು ನೇಮಕಗೊಳಿಸಬೇಕು ಎಂದು ಕೇಳಿಕೊಂಡರು.

ಇದು ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದೆ ಸರ್ಕಾರದ ಆದೇಶದಂತೆ ಸಿಬ್ಬಂದಿಗಳ ನೇಮಕಾತಿಗೊಳ್ಳಬೇಕು. ಗೋಣಿಕೊಪ್ಪದ ಕೀರೆ ಹೊಳೆಯ ಸಮೀಪ ಸ್ಥಳಗಳು ಒತ್ತುವರಿಯಾಗಿದೆ. ಶೀಘ್ರವಾಗಿ ತೆರವುಗೊಳಿಸುವ ಕಾರ್ಯ ನಡೆಯಬೇಕು ಎಂದು ರೈತ ಸಂಘವು ಮನವಿ ಮಾಡಿತು. ಉತ್ತರಿಸಿದ ತಹಶೀಲ್ದಾರ್ ಅವರು ಈಗಾಗಲೇ ಕೀರೆ ಹೊಳೆಯ ನೀಲಿ ನಕ್ಷೆ ಪರಿಶೀಲನೆಯಲ್ಲಿದ್ದು, ಭೂ ದಾಖಲೆಗಳ ಅಧಿಕಾರಿಗಳು ನೀಡುವ ವರದಿಯ ಅನ್ವಯ ಶೀಘ್ರವಾಗಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದರು. ರೈತರ ಸಮಸ್ಯೆಗಳನ್ನು ಸರಿಪಡಿಸುವ ಭರವಸೆ ನೀಡಿದರು.

ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿಯ ಆಲೆಮಾಡ ಮಂಜುನಾಥ್, ಹುದಿಕೇರಿ ಹೋಬಳಿಯ ಚಂಗುಲAಡ ಸೂರಜ್, ಶ್ರೀಮಂಗಲ ಹೋಬಳಿಯ ಚಟ್ಟಂಗಡ ಕಂಧಾ ಕಾರ್ಯಪ್ಪ, ತಿತಿಮತಿ ಮಾಯಮುಡಿ ಹೋಬಳಿಯ ರಾಯ್ ಮೇದಪ್ಪ, ಪೊನ್ನಂಪೇಟೆ ವಲಯ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಪ್ರಮುಖರಾದ ಅಪ್ಪಚಂಗಡ ಮಾದಯ್ಯ ಮತ್ತು ವಿವಿಧ ಸ್ಥಳಗಳಿಂದ ಆಗಮಿಸಿದ ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.