ಮಡಿಕೇರಿ, ಆ. ೨೦: ಸಹಕಾರ ಸಂಘಗಳಲ್ಲಿನ ಅವ್ಯವಹಾರ ತಡೆದು ಬಲಪಡಿಸುವ ನಿಟ್ಟಿನಲ್ಲಿ ಬಿಗಿ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ಹರಿಸಲಾಗಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶತಮಾನೋತ್ಸವ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಂತರ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಹಿರಿಯರು ಕಟ್ಟಿ ಬೆಳೆಸಿದ ಸಹಕಾರಿ ಸಂಸ್ಥೆಗಳನ್ನು ಬೆಳೆಸಬೇಕು, ಅದು ಬಿಟ್ಟು ಗ್ರಾಹಕರು ಠೇವಣಿ ಇರಿಸಿದ ಹಣಕ್ಕೆ ರಕ್ಷಣೆ ನೀಡದೆ ಸ್ವಂತಕ್ಕೆ ಬಳಸಿಕೊಳ್ಳುವ ಸಂಸ್ಥೆಗಳು ಉದ್ದಾರ ಆಗುವದಿಲ್ಲ. ಅಂತಹ ಸಂಸ್ಥೆಗಳನ್ನು ತೆಗೆದು ಹಾಕಲು ಭದ್ರ ಕಾನೂನು ರೂಪಿಸುವದರೊಂದಿಗೆ ಸಂಬAಧಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳುವ ಬಗ್ಗೆ ಚಿಂತಿಸಲಾಗಿದೆ. ಕಾನೂನು ಬಿಗಿ ಮಾಡಿದರೆ ಸಹಕಾರ ಸಂಘಗಳು ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಂಘಗಳ ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಲಿದ್ದು, ಹಿರಿಯ ಸಹಕಾರಿಗಳನ್ನು ಭೇಟಿ ಮಾಡಿ, ಬದಲಾವಣೆ ತರುವ ಬಗ್ಗೆ ಹಾಗೂ ಸಂಘಗಳನ್ನು ಸುಲಲಿತವಾಗಿ ಮುನ್ನಡೆಸಿಕೊಂಡು ಹೋಗುವ ಬಗ್ಗೆ ಮಾಹಿತಿ ಪಡೆಯುವದಾಗಿ ಸಚಿವರು ಹೇಳಿದರು.
೨೦೮೧೦ ಕೋಟಿ ಸಾಲ
ಪ್ರಸ್ತುತ ಆರ್ಥಿಕ ವರ್ಷದಲ್ಲಿ ರೂ. ೨೦೮೧೦ ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದ್ದು, ೩೦ ಲಕ್ಷ ಮಂದಿ ರೈತರು ಇದರ ಲಾಭ ಪಡೆಯಲಿದ್ದಾರೆ. ಈಗಾಗಲೇ ರೂ. ೮ ಸಾವಿರ ಕೋಟಿ ಮೊತ್ತದ ಸಾಲ ಯೋಜನೆಗೆ ಚಾಲನೆ ನೀಡಲಾಗಿದ್ದು, ಕೊಡಗು ಜಿಲ್ಲೆಯಲ್ಲೂ ಆರಂಭವಾಗಿದೆ. ಹಂತ ಹಂತವಾಗಿ ಎಲ್ಲಾ ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲಾಗುವುದು. ರಾಜ್ಯದಲ್ಲಿ ೨೭೦ ಸಹಕಾರ ಬ್ಯಾಂಕ್‌ಗಳಿದ್ದು, ಕೆಲವು ಬ್ಯಾಂಕ್‌ಗಳು ವಂಚನೆ ಮಾಡಿದರೆ, ಎಲ್ಲಾ ಬ್ಯಾಂಕ್‌ಗಳನ್ನು ಹೊಣೆ ಮಾಡುವುದು ಸರಿಯಲ್ಲವೆಂದು ಹೇಳಿದರು. ಸಹಕಾರ ಸಂಘಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ಸಹಕಾರ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ
(ಮೊದಲ ಪುಟದಿಂದ) ಅವರಿಗೆ ಮಾಹಿತಿ ನೀಡಲಾಗಿದೆ. ಕೊಡಗು ಡಿಸಿಸಿ ಬ್ಯಾಂಕ್ ಸಾಲ ನೀಡುವಲ್ಲಿಯೂ ವಸೂಲಾತಿಯಲ್ಲಿಯೂ ಶೇ. ೯೫ ರಷ್ಟು ಪ್ರಗತಿ ಸಾಧನೆಯೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೊಡಗು ಶಾಖೆ ‘ಎ’ ಶ್ರೇಣಿಯಲ್ಲಿರುವುದು ಆರೋಗ್ಯಕರ ನಿರ್ವಹಣೆಯ ಬಗ್ಗೆ ಖಾತರಿಪಡಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಸ್ಥಾನಕ್ಕೇರಲಿ
ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಸಹಕಾರ ಸಂಘಗಳು ಉಳಿಯಬೇಕಾದರೆ ಎಲ್ಲರ ಸಹಕಾರ ಅಗತ್ಯ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಂಸ್ಥೆ ಮೇಲಕ್ಕೇರಲು ಸಾಧ್ಯ ಎಂದು ಹೇಳಿದರು.
ಕೊಡಗು ಡಿಸಿಸಿ ಬ್ಯಾಂಕ್ ೩೦ಸಾವಿರ ಮಂದಿಗೆ ೧೩೦೦ ಕೋಟಿ ಸಾಲ ನೀಡಿದ್ದು, ವಸೂಲಾತಿ ಸೇರಿದಂತೆ ಅಭಿವೃದ್ಧಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಬರಬೇಕು. ಜಿಲ್ಲೆಯಲ್ಲಿ ೨೧ ಶಾಖೆಗಳನ್ನು ಹೊಂದಿದ್ದು, ಮಾದಾಪುರದಲ್ಲಿಯೂ ಒಂದು ಶಾಖೆ ಆರಂಭಿಸುವAತೆ ಬ್ಯಾಂಕ್ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಸರಕಾರಿ ಬ್ಯಾಂಕಿAಗ್ ವ್ಯವಸ್ಥೆ ಮಾಡಿದ ಕೀರ್ತಿ ಡಿಸಿಸಿ ಬ್ಯಾಂಕ್‌ಗೆ ಸಲ್ಲುತ್ತದೆ. ಈ ವಾಹನಕ್ಕೆ ಹೆಚ್ಚಿನ ಭದ್ರತೆ ಒದಗಿಸುವ ವ್ಯವಸ್ಥೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಸ್ವಾಯತ್ತತೆ ನೀಡಬೇಕಿದೆ
ಶತಮಾನೋತ್ಸವ ಸವಿನೆನಪಿಗಾಗಿ ಹೊರತರಲಾಗಿರುವ ‘ಸಹಕಾರಿ ಸಿರಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಕೊಡಗು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ತನ್ನದೇ ಆದ ಭದ್ರ ಬುನಾದಿ ಹಾಕಿಕೊಂಡಿದ್ದು, ರಾಷ್ಟçದಲ್ಲೇ ಹೆಸರುಗಳಿಸಿವೆ. ಸಹಕಾರಿ ತತ್ವಗಳನ್ನು ಅಳವಡಿಸಿಕೊಂಡು ಬಂದಿರುವ ಸರಕಾರಿ ಬ್ಯಾಂಕ್‌ಗಳಲ್ಲಿ ರೈತರಿಗೆ ಅತಿ ಸುಲಭದಲ್ಲಿ ಸಾಲ ದೊರೆಯುತ್ತಿದೆ ಎಂದು ಹೇಳಿದರು.
ಕೆಲವು ಕಡೆಗಳಲ್ಲಿ ಸಣ್ಣ - ಪುಟ್ಟ ವ್ಯತ್ಯಾಸ, ಕಳಪೆ ಬೆಳವಣಿಗಳಿವೆ. ಇದನ್ನು ಸರಿಪಡಿಸಿಕೊಳ್ಳಬೇಕು; ಮುದ್ರಾ ಯೋಜನೆ ಮೂಲಕ ಡಿಸಿಸಿ ಬ್ಯಾಂಕ್‌ನಿAದ ಅಧಿಕ ಮೊತ್ತದ ಸಾಲ ನೀಡಲಾಗಿದೆ. ಸಹಕಾರಿ ಸಂಘಗಳ ಬೆಳವಣಿಗೆಗೆ ಸಹಕಾರಿ ಸಂಸ್ಥೆಗೆ ಸ್ವಾಯತ್ತತೆ ನೀಡಬೇಕೆಂದು ಆಶಿಸಿದರು.
ಶಿಷ್ಯವೇತನ ಸ್ವಾಗತಾರ್ಹ
ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಗ್ರಾಮದ ಬಡ ರೈತರ ಉದ್ದಾರ ಆಗಬೇಕೆಂಬ ಕನಸಿನಂತೆ ಸಹಕಾರ ಸಂಘ ಸ್ಥಾಪನೆ ಮಾಡಲಾಗಿದೆ. ಇದರಿಂದ ರೈತ ಕುಟುಂಬ, ಗ್ರಾಮ, ಸಮಾಜದ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು. ನೂತನವಾಗಿ ರಚನೆಯಾಗಿರುವ ಸರಕಾರದ ಮುಖ್ಯಮಂತ್ರಿ ಅವರು ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ಘೋಷಣೆ ಮಾಡಿರುವದು ಸ್ವಾಗತಾರ್ಹವಾಗಿದೆ ಎಂದು ಹೇಳಿದರಲ್ಲದೆ, ಪಶ್ಚಿಮಘಟ್ಟ, ನದಿಮೂಲ ಉಳಿಸಿಕೊಳ್ಳು ವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣವೆಂದು ಹೇಳಿದರು.
ಏಕರೂಪದ ತಂತ್ರಾAಶಕ್ಕೆ ಚಾಲನೆ
ಸಹಕಾರ ಸಂಘಗಳ ಅಪರ ನಿಬಂಧಕ ಎ.ಸಿ. ದಿವಾಕರ್ ಮಾತನಾಡಿ, ಸಹಕಾರ ಸಂಸ್ಥೆಗಳಿಗೆ ಏಕರೂಪದ ತಂತ್ರಾAಶ ಯೋಜನೆಗೆ ಬಜೆಟ್‌ನಲ್ಲಿ ಮಂಡನೆಯಾಗಿದ್ದು, ಕೆಲವೇ ತಿಂಗಳುಗಳಲ್ಲಿ ಚಾಲನೆ ದೊರೆಯಲಿದೆ. ಸಾಲಮನ್ನಾ ಯೋಜನೆಯಡಿ ೫೨ ಸಾವಿರ ಮಂದಿ ರೈತರಿಗೆ ಹಣ ಮರುಪಾವತಿಯಾಗಿರುವುದಿಲ್ಲ. ಇದುವರೆಗೆ ಲಾಕ್ ಆಗಿದ್ದನ್ನು ನಿನ್ನೆಯಿಂದ ತೆರೆಯಲಾಗಿದೆ. ಕೆಲವೇ ದಿನಗಳು ಮಾತ್ರ ಈ ವ್ಯವಸ್ಥೆ ಇರಲಿದ್ದು, ದಾಖಲಾತಿಯಲ್ಲಿ ನ್ಯೂನ್ಯತೆ ಇರುವವರು ತಮ್ಮ ಕಡತಗಳನ್ನು ತೆರೆದು ದಾಖಲಾತಿ ಸಲ್ಲಿಸಿದರೆ ಸೌಲಭ್ಯ ದೊರಕಲಿದೆ ಎಂದು ಮಾಹಿತಿ ನೀಡಿದರು.
ಪಟ್ಟಭದ್ರ ಶಕ್ತಿಗಳ ಹಿಡಿತ
ಮಾಜಿ ಸಚಿವರು ಹಾಗೂ ಹಿರಿಯ ಸಹಕಾರಿ ಯಂ.ಸಿ. ನಾಣಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇಡೀ ರಾಜ್ಯದಲ್ಲಿ ಎರಡನೇ ಸಹಕಾರ ಸಂಘ ಸ್ಥಾಪನೆಯಾಗಿರುವುದು ಶಾಂತಳ್ಳಿಯಲ್ಲಿ ೧೯೦೬ರಲ್ಲಿ ಎಂದು ತಿಳಿಸಿದರು. ರಾಜ್ಯದಲ್ಲಿ ಸಹಕಾರ ಸಂಘಗಳು ಯಾವುದೇ ರೀತಿಯ ನಿಯಂತ್ರಣಕ್ಕೆ ಒಳಗಾಗಬಾರದು. ಹಸ್ತಕ್ಷೇಪವು ಸಹಾ ಇರಬಾರದು. ಸಹಕಾರ ಕ್ಷೇತ್ರ ಸಹಕಾರಿಗಳಿಗೋಸ್ಕರ ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಹಕಾರ ಕ್ಷೇತ್ರಗಳು ಪಟ್ಟಭದ್ರ ಹಿತಾಶಕ್ತಿಗಳ ಹಿಡಿತದಲ್ಲಿ ಇರುವುದು ಬೇಸರದ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಹಕಾರ ಕ್ಷೇತ್ರದಲ್ಲಿ ಭ್ರಾತೃತ್ವದಿಂದ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳಿಗೂ ಮೊದಲು ಧವಸ ಭಂಡಾರ ಸಹಕಾರ ಸಂಘಗಳು ಅಸ್ತಿತ್ವದಲ್ಲಿದ್ದವು ಎಂದರು.
ಬಡ್ಡಿ ರಿಯಾಯಿತಿ ಕಡಿತಗೊಳಿಸದಿರಿ
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಪ್ರಾಸ್ತವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ೨೧ ಶಾಖೆಗಳನ್ನು ಹೊಂದಿದೆ. ೧೧ ಕಡೆಗಳಲ್ಲಿ ಸ್ವಂತ ಕಟ್ಟಡ ಹೊಂದಿದೆ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೃಷಿಕರಿಗೆ ಅಗತ್ಯ ಸಹಕಾರ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ವತಿಯಿಂದ ಚಿನ್ನಾಭರಣ ಸಾಲವನ್ನು ಸಹ ನೀಡಲಾಗುತ್ತಿದೆ ಎಂದರು. ಸರಕಾರ ಸಹಕಾರ ಬ್ಯಾಂಕ್‌ಗಳಿಗೆ ನೀಡುವ ಬಡ್ಡಿ ರಿಯಾಯಿತಿ ಹಣ ಕಡಿತಗೊಳಿಸುವದರಿಂದ ತೊಂದರೆಯಾಗುತ್ತಿದೆ. ಬಡ್ಡಿ ರಿಯಾಯಿತಿ ಹಣ ಕಡಿತಗೊಳಿಸದಂತೆ ಮನವಿ ಮಾಡಿದರು.
ಮಾಜಿಗಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರುಗಳಾದ ಯಂ.ಸಿ. ನಾಣಯ್ಯ, ಬಿ.ಕೆ. ಚಿಣ್ಣಪ್ಪ, ಕೆ.ಎ. ಉತ್ತಪ್ಪ, ಎಂ.ಎ. ರಮೇಶ್, ಬಿ.ಡಿ. ಮಂಜುನಾಥ್, ಉಪಾಧ್ಯಕ್ಷರುಗಳಾದ ಎ.ವಿ. ಶಾಂತಕುಮಾರ್, ಕೆ.ಎಂ. ಮಂದಣ್ಣ, ಎಸ್.ಬಿ. ಭರತ್‌ಕುಮಾರ್ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಲ್ಲದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲ್ಯಾಪ್‌ಟ್ಯಾಪ್, ಜಿಲ್ಲಾ ಮಟ್ಟದ ಸಹಕಾರಿ ಸಂಘಗಳು ಹಾಗೂ ಧವಸ ಭಂಡಾರ, ಇತರ ಸಹಕಾರ ಸಂಘಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ವೇದಿಕೆಯಲ್ಲಿ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಪ್ರಕಾಶ್‌ರಾವ್, ಬ್ಯಾಂಕ್‌ನ ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಬಿ.ಡಿ. ಮಂಜುನಾಥ್, ಪಟ್ರಪಂಡ ರಘುನಾಣಯ್ಯ, ಹೊಟ್ಟೇಂಗಡ ರಮೇಶ್, ಹೊಸೂರು ಸತೀಶ್‌ಕುಮಾರ್, ಎಸ್.ಬಿ. ಭರತ್‌ಕುಮಾರ್, ಕನ್ನಂಡ ಸಂಪತ್, ಕೋಲತಂಡ ಸುಬ್ರಮಣಿ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕಿಮ್ಮುಡಿರ ಜಗದೀಶ್, ಕುಂಞAಗಡ ಅರುಣ್ ಭೀಮಯ್ಯ, ಲೆಕ್ಕಪರಿಶೋಧಕ ಎ. ಗೋಪಾಲಕೃಷ್ಣ ಇನ್ನಿತರರಿದ್ದರು. ಇದೇ ಸಂದರ್ಭ ಬ್ಯಾಂಕಿನ ಇತಿಹಾಸ ಬಿಂಬಿಸುವ ಸಾಕ್ಷö್ಯ ಚಿತ್ರ ಪ್ರದರ್ಶಿಸಲಾಯಿತು. ಬ್ಯಾಂಕ್‌ನ ಸಿಬ್ಬಂದಿಗಳು ಬೋಜಮ್ಮ, ನಗೀನ ಪೂವಮ್ಮ ಪ್ರಾರ್ಥಿಸಿದರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ ಸ್ವಾಗತಿಸಿದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ವಿಜಯ್ ಅಂಗಡಿ ಹಾಗೂ ಸಹಕಾರಿ ಯೂನಿಯನ್ ವ್ಯವಸ್ಥಾಪಕ ಆರ್. ಮಂಜುಳಾ ನಿರೂಪಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ವಂದಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಟಿ.ಜಿ. ಗಿರೀಶ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರೆ, ವ್ಯವಸ್ಥಾಪಕ ಪಿ.ಎಸ್. ನಂಜಪ್ಪ ಸಹಕರಿಸಿದರು.