ಗೋಣಿಕೊಪ್ಪಲು, ಆ. ೨೦: ಕೋವಿಡ್ ಸಂಬAಧದ ವಿಚಾರದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವ ನಿಯಮವನ್ನು ಕೊಡಗಿನಲ್ಲಿ ತೆರವುಗೊಳಿಸುವ ಮೂಲಕ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕೆಂದು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಹೇಳಿದರು.
ನಗರದ ಖಾಸಾಗಿ ರೆಸಾರ್ಟ್ನಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಕೊರೊನಾ ವಿಚಾರಗಳನ್ನು ಮುಂದಿಟ್ಟುಕೊAಡು ಪ್ರವಾಸೋದ್ಯಮಕ್ಕೆ ಕೊಡಗಿನಲ್ಲಿ ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ ಕೊಡಗಿನಲ್ಲಿರುವ ೩೩ ಸಾವಿರ ಮಂದಿ ಉದ್ಯೋಗ ವಂಚಿತರಾಗಿದ್ದಾರೆ.
ವಾರಾAತ್ಯ ಕರ್ಫ್ಯೂ ತೆರವುಗೊಳಿಸಿದ್ದಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ. ಇದರಿಂದಾಗಿ ಮತ್ತೆ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ. ನೋವಿನಲ್ಲಿರುವ ಕುಟುಂಬಕ್ಕೆ ಸರ್ಕಾರ ಸ್ಪಂದಿಸಿದAತಾಗಲಿದೆ. ಸರ್ಕಾರ ನೀಡುವ ಮಾನದಂಡಗಳನ್ನು ಅನುಸರಿಸಿ ಪ್ರವಾಸೋದ್ಯಮ ಚಟುವಟಿಕೆ ಮುಂದುವರೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಇದಕ್ಕೆ ದ.ಕೊಡಗಿನ ವಿವಿಧ ಭಾಗದಿಂದ ಆಗಮಿಸಿದ ರೆಸಾರ್ಟ್, ಹೋಂಸ್ಟೇ ಮಾಲೀಕರು ಧ್ವನಿಗೂಡಿಸಿ ಜಿಲ್ಲಾಡಳಿತ ಮೂಲಕ ಸರ್ಕಾರದ ಗಮನ ಸೆಳೆಯುವ ಕಾರ್ಯಕ್ರಮ ನಡೆಸಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಉಪಾಧ್ಯಕ್ಷ ಕೆ.ವರದಾ, ಸಂಘಟನಾ ಕಾರ್ಯದರ್ಶಿ ಲಕ್ಷಿö್ಮ್ಮ ನಾರಾಯಣ, ಪ್ರ. ಕಾರ್ಯದರ್ಶಿ ಕೆ. ಶಿವಕುಮಾರ್, ಜಂಟಿ ಕಾರ್ಯದರ್ಶಿ ಎಂ.ಬಿ. ಮಂಜುನಾಥ್, ಸದಸ್ಯರಾದ ನಿತಿನ್ ತಮ್ಮಯ್ಯ, ಧರ್ಮಜ, ದ. ಕೊಡಗಿನ ಕಾಟೀಮಾಡ ಶರೀನ್ ಮುತ್ತಣ್ಣ, ಪ್ರಮೋದ್ ಪೂಣಚ್ಚ, ಬುಟ್ಟಿಯಂಡ ಚಂಗಪ್ಪ, ದಿನೇಶ್, ಜಮ್ಮಡ ಕರಣ್, ಪ್ರಸನ್ನ, ಲೋಕೇಶ್, ಅಂತೋಣಿ, ಶ್ರೀಮಂತ್, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.