ಮಡಿಕೇರಿ, ಆ. ೧೯: ಮದೆನಾಡು ಗ್ರಾಮದ ಜಂಕ್ಷನ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ಯುವಕನನ್ನು ಅಬಕಾರಿ ಇಲಾಖೆ ಬಂಧಿಸಿದೆ. ಬಿ.ಬಿ. ಯತಿನ್ ಎಂಬಾತನನ್ನು ಬಂಧಿಸಿ ಆತನಿಂದ ೫.೨೨ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಜಾಮೀನಿನಡಿ ಬಿಡುಗಡೆಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ವಿ. ಸ್ವರ್ಣಶ್ರೀ, ಉಪ ನಿರೀಕ್ಷಕರಾದ ಜಿ.ಆರ್. ಅನಿಲ್, ಮುಖ್ಯ ಪೇದೆ ಡಿ.ಟಿ. ಜಯಂತಿ ಪಾಲ್ಗೊಂಡಿದ್ದರು.