ಮಡಿಕೇರಿ, ಆ. ೧೮: ೧೯೨೧ರಲ್ಲಿ ಆರಂಭವಾದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ವರ್ಷ ಶತಮಾನೋತ್ಸವ ಸಂಭ್ರಮ ಮಡಿಕೇರಿ, ಆ. ೧೮: ೧೯೨೧ರಲ್ಲಿ ಆರಂಭವಾದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ವರ್ಷ ಶತಮಾನೋತ್ಸವ ಸಂಭ್ರಮ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ನಾಳೆ ಬೆಳಿಗ್ಗೆ ೧೦ ಗಂಟೆಗೆ ಬ್ಯಾಂಕ್‌ನ ಆವರಣದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಲಿದೆ. ಬಳಿಕ ೧೦.೩೦ ಗಂಟೆಗೆ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ನಡೆಯುವ ಸಮಾರಂಭದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಹಿರಿಯ ಸಹಕಾರಿ ಯಂ.ಸಿ. ನಾಣಯ್ಯ, ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ, ಕರ್ನಾಟಕ ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾಹುಲ್ಲಾ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ದೇವರಾಜ್, ಸಹಕಾರ ಸಂಘಗಳ ಅಪರ ನಿಬಂಧಕ ಎ.ಸಿ. ದಿವಾಕರ್, ಮೈಸೂರು

(ಮೊದಲ ಪುಟದಿಂದ) ಪ್ರಾಂತದ ಜಂಟಿ ನಿಬಂಧಕ ಪ್ರಕಾಶ್‌ರಾವ್ ಪಾಲ್ಗೊಳ್ಳಲಿದ್ದಾರೆ ಎಂದು ಬಾಂಡ್‌ಗಣಪತಿ ವಿವರಿಸಿದರು.

ಸಮಾರಂಭದಲ್ಲಿ ಮೊಬೈಲ್ ಬ್ಯಾಂಕಿAಗ್ ವಾಹನದ ಉದ್ಘಾಟನೆ, ಶತಮಾನೋತ್ಸವ ಅಂಗವಾಗಿ ‘ಸಹಕಾರ ಸಿರಿ’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳ್ಳಲಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಗುವುದು. ಬ್ಯಾಂಕ್‌ನ ಎಲ್ಲಾ ಸದಸ್ಯ ಸಹಕಾರ ಸಂಘಗಳಿಗೆ ನೆನಪಿನ ಕಾಣಿಕೆ ವಿತರಿಸಲಾಗುವುದು ಎಂದು ಬಾಂಡ್‌ಗಣಪತಿ ತಿಳಿಸಿದರು. ಇದೇ ಸಂದರ್ಭ ಬ್ಯಾಂಕ್‌ನ ಹಿನ್ನೆಲೆ ಕುರಿತು ಬಾಂಡ್‌ಗಣಪತಿ ಮಾಹಿತಿ ನೀಡಿದರು.

ತಾ. ೨೮.೦೬.೧೯೨೧ರಲ್ಲಿ ದಿವಾನ್ ಬಹದ್ದೂರ್ ಕೇಟೋಳಿರ ಚೆಂಗಪ್ಪ ಅವರ ಅಧ್ಯಕ್ಷತೆಯಲ್ಲಿ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯ, ಪುಲಿಯಂಡ ತಿಮ್ಮಯ್ಯ, ಕುಪ್ಪಂಡ ಬೆಳ್ಳಿಯಪ್ಪ, ಉದಿಯಂಡ ಮಾಚಯ್ಯ, ಪಟ್ಟಮಾಡ ಪೊನ್ನಪ್ಪ, ಪಂದ್ಯAಡ ಬೆಳ್ಳಿಯಪ್ಪ, ಎಂ. ಭುಜಂಗರಾವ್, ನಡಿಕೇರಿಯಂಡ ಚಿಣ್ಣಪ್ಪ, ಎ.ಬಿ. ಕಾರ್ಯಪ್ಪ ಮತ್ತು ಸಿ.ಎನ್. ವೆಂಕಪ್ಪಯ್ಯ ಅವರು ಭಾಗವಹಿಸಿದ ಸಮಾಲೋಚನಾ ಸಭೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಕಾರವೇ ಸನ್ಮಾರ್ಗ ಎಂಬುದನ್ನು ಮನಗಂಡು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಪ್ರಥಮವಾಗಿ ೪೮ ಸಹಕಾರ ಸಂಘಗಳು ಮತ್ತು ೧೬ ವ್ಯಕ್ತಿಗಳ ಸದಸ್ಯರನ್ನೊಳಗೊಂಡAತೆ ರೂ. ೪೪೦೦ ಪಾಲು ಬಂಡವಾಳ ಹಾಗೂ ರೂ. ೧೦೦೦೦ ಠೇವಣಾತಿಯೊಂದಿಗೆ ‘‘ಕೊಡಗು ಕೇಂದ್ರ ಸಹಕಾರ ಬ್ಯಾಂಕು’’ ಅಸ್ತಿತ್ವಕ್ಕೆ ಬಂತು.

ಕೊಡಗಿನ ಹಿರಿಯ ಸಹಕಾರಿಗಳಾದ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯ ಪ್ರಥಮ ಅಧ್ಯಕ್ಷರಾಗಿ ತಾ., ೦೧.೦೨.೧೯೨೨ ರಂದು ಮಡಿಕೇರಿ ಕೋಟೆಯಲ್ಲಿದ್ದ ತಾಲೂಕು ಕಚೇರಿಯಲ್ಲಿ ಕಾರ್ಯಾರಂಭಿಸಿ, ೧೯೪೬ರಲ್ಲಿ ಕೊಡಗು ಪ್ರಾಂತೀಯ ಸಹಕಾರ ಬ್ಯಾಂಕು ನಿಯಮಿತವಾಗಿ, ೧೯೪೮ರಲ್ಲಿ ಕೊಡಗು ರಾಜ್ಯ ಸಹಕಾರ ಬ್ಯಾಂಕು ನಿಯಮಿತವಾಗಿ, ಅಂತಿಮವಾಗಿ ೧೯೫೬ರಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತವಾಗಿ ಪರಿವರ್ತನೆ ಗೊಂಡಿತು. ಬ್ಯಾಂಕಿನ ಸರ್ವ ತೋಮುಖ ಪ್ರಗತಿಗನು ಗುಣವಾಗಿ ೧೯೯೫ರಲ್ಲಿ ರಿಜರ್ವ್ ಬ್ಯಾಂಕಿನಿAದ ಬ್ಯಾಂಕಿAಗ್ ಲೈಸನ್ಸ್ ಪಡೆದಿದ್ದು, ಬ್ಯಾಂಕಿAಗ್ ಲೈಸನ್ಸ್ ಪಡೆದ ರಾಜ್ಯದ ಎರಡನೇ ಜಿಲ್ಲಾ ಸಹಕಾರ ಬ್ಯಾಂಕ್ ಇದಾಗಿರುತ್ತದೆ.

ಪ್ರಸ್ತುತ ೭೩ ವ್ಯವಸಾಯ ಸೇವಾ ಸಹಕಾರ ಸಂಘಗಳು, ೭೯ ಸಹಕಾರ ದವಸ ಭಂಡಾರಗಳು, ೧೨ ಸಹಕಾರ ಮಹಿಳಾ ಸಮಾಜಗಳು, ೩ ಪಿಎಲ್‌ಡಿ ಬ್ಯಾಂಕ್‌ಗಳು, ೩ ಲ್ಯಾಂಪ್ಸ್ ಸಹಕಾರ ಸಂಘಗಳು, ೧೧ ಮಾರಾಟ ಸಹಕಾರ ಸಂಘಗಳು, ೪ ಪಟ್ಟಣ ಸಹಕಾರ ಬ್ಯಾಂಕ್‌ಗಳು, ೮ ಉದ್ಯೋಗಸ್ಥರ ಸಹಕಾರ ಸಂಘಗಳು, ೪ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ೯೧ ಇತರೆ ಸಹಕಾರ ಸಂಘಗಳು ಸೇರಿ ಒಟ್ಟು ೨೮೮ ಸಹಕಾರ ಸಂಘಗಳ ಸದಸ್ಯತ್ವ ಹೊಂದಿದೆ.

ಬ್ಯಾAಕು ಪ್ರಸ್ತುತ ೯ ಎಟಿಎಂಗಳ ಸಹಿತ ೨೧ ಶಾಖೆಗಳನ್ನು ಹೊಂದಿದ್ದು, ೩೯೮೪೬ ರೈತ ಗ್ರಾಹಕರಿಗೆ ರೂಪೇ ಕೆಸಿಸಿ ಎಟಿಎಂ ಕಾರ್ಡ್ಗಳ ವಿತರಣೆಯನ್ನು ಮಾಡಿರುವುದಲ್ಲದೆ, ೯೪೪೨ ಉಳುವರಿ ಖಾತೆದಾರರಿಗೆ ರೂಪೇ ಡೆಬಿಟ್ ಎಟಿಎಂ ಕಾರ್ಡುಗಳ ವಿತರಣೆಯನ್ನು ಮಾಡಿದ್ದು, ಗ್ರಾಹಕರಿಗೆ ಆಧುನಿಕ ಬ್ಯಾಂಕಿAಗ್ ಸೇವೆಯೊಂದಿಗೆ, ಶತಮಾನೋತ್ಸವ ಸಂಭ್ರಮದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿAಗ್ ಎಂಬAತೆ ಸಂಚಾರಿ ಬ್ಯಾಂಕಿAಗ್ ಸೇವೆಯನ್ನು ನೀಡುವುದರೊಂದಿಗೆ, ಕೊಡಗು ಜಿಲ್ಲೆಯ ಪ್ರಾಕೃತಿಕ ವಿಕೋಪ, ನೆರೆ ಹಾವಳಿ, ಕೋವಿಡ್‌ನ ಈ ಸಂದರ್ಭದಲ್ಲಿಯೂ ಹಿಂಜರಿಯದೆ ನಿತ್ಯ ನಿರಂತರ ವ್ಯವಹಾರಗಳನ್ನು ಎಡೆಬಿಡದೆ ನಿರ್ವಹಿಸಿಕೊಂಡು ಬಂದಿದೆ.

ಬ್ಯಾAಕಿನ ಕೇಂದ್ರ ಕಚೇರಿ ಮತ್ತು ೧೧ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ೩ ಶಾಖೆಗಳಿಗೆ ಸ್ವಂತ ಕಟ್ಟಡವನ್ನು ಹೊಂದಲಾಗಿ, ೪ ನೂತನ ಶಾಖೆಗಳನ್ನು ತೆರೆಯಲಾಗಿದ್ದು, ೧೯೨೧ನೇ ಇಸವಿಯಲ್ಲಿ ಬ್ಯಾಂಕು ಪ್ರಾರಂಭವಾದ ಹಿನ್ನೆಲೆಯಲ್ಲಿ ದಿನಾಂಕ ೦೧.೦೧.೨೧ ರಂದು ಕೊಡ್ಲಿಪೇಟೆ ಶಾಖೆಯನ್ನು ಸ್ವಂತ ಕಟ್ಟಡದೊಂದಿಗೆ ಶತಮಾನೋತ್ಸವ ನೆನಪಿನ ೨೧ನೇ ಶಾಖೆಯಾಗಿ ಪ್ರಾರಂಭಿಸಲಾಗಿರುತ್ತದೆ.

ಬ್ಯಾAಕಿನ ಸೇವೆಗಳನ್ನು ಗ್ರಾಮೀಣ ಜನತೆಗೆ ವಿಸ್ತರಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕಿನ ಸಂಪಾಜೆ ಹಾಗೂ ಭಾಗಮಂಡಲದಲ್ಲಿ ಮತ್ತು ಸೋಮವಾರಪೇಟೆ ತಾಲೂಕಿನ ಮಾದಾಪುರದಲ್ಲಿ ಒಟ್ಟು ೩ ನೂತನ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ಶತಮಾನೋತ್ಸವದ ಈ ಸಂದರ್ಭದಲ್ಲಿ ಬ್ಯಾಂಕು ರೂ. ೧೦೮೧.೭೬ ಕೋಟಿ ಠೇವಣಾತಿ ಸಂಗ್ರಹಿಸಿದ್ದು, ರೂ. ೧೦೦ ಕೋಟಿ ಸ್ವಂತ ಬಂಡವಾಳ, ರೂ. ೧೫೨೪.೬೭ ಕೋಟಿ ದುಡಿಯುವ ಬಂಡವಾಳ ಮತ್ತು ರೂ. ೧೯೭೯.೭೭ ಕೋಟಿ ಮೊತ್ತದ ವ್ಯವಹಾರವನ್ನು ಹೊಂದಿರುತ್ತದೆ. ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕು ೯ ಕೋಟಿ ೮ ಲಕ್ಷ ರೂಪಾಯಿ ಲಾಭಾಂಶವನ್ನು ಗಳಿಸಿದೆ.

ಶತಮಾನೋತ್ಸವ ಪ್ರಯುಕ್ತ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪದ ಸಾಫ್ಟ್ವೇರ್ ಅಳವಡಿಸಿ ಕೊಡುವು ದರೊಂದಿಗೆ ಸಂಪೂರ್ಣ ಗಣಕೀಕರಣಗೊಳಿಸಲು ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದ್ದು, ಬ್ಯಾಂಕಿನ ಗ್ರಾಹಕರಿಗೆ ಇಂಟರ್‌ನೆಟ್ ಬ್ಯಾಂಕಿAಗ್ ಸೌಲಭ್ಯವನ್ನು ಒದಗಿಸಿಕೊಡುವ ಕಾರ್ಯ ಪ್ರಗತಿಯಲ್ಲಿರುತ್ತದೆ.

ಕೋವಿಡ್ -೧೯ರ ಸಂದರ್ಭ ಕೊಡಗು ಜಿಲ್ಲೆಯ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ, ಮಡಿಕೇರಿಯಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಬ್ಯಾಂಕಿನ ಪರವಾಗಿ ವೆಂಟಿಲೇಟರ್ ನೀಡಲಾಗಿದೆ ಎಂದು ಬಾಂಡ್‌ಗಣಪತಿ ಹೇಳಿದರು. ಗೋಷ್ಠಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಕೇಟೋಳಿರ ಹರೀಶ್‌ಪೂವಯ್ಯ, ನಿರ್ದೇಶಕರುಗಳಾದ ಪಟ್ರಪಂಡ ರಘು ನಾಣಯ್ಯ, ಬಿ.ಕೆ. ಚಿಣ್ಣಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ ಉಪಸ್ಥಿತರಿದ್ದರು.