ಮಡಿಕೇರಿ, ಆ. ೧೮: ಕೌಶಲ್ಯಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನತೆಗೆ ವಿಪುಲ ಅವಕಾಶಗಳಿದ್ದು, ಸದುಪ ಯೋಗ ಪಡೆದುಕೊಳ್ಳಬಹುದೆಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಮಾಹಿತಿ ಮಡಿಕೇರಿ, ಆ. ೧೮: ಕೌಶಲ್ಯಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನತೆಗೆ ವಿಪುಲ ಅವಕಾಶಗಳಿದ್ದು, ಸದುಪ ಯೋಗ ಪಡೆದುಕೊಳ್ಳಬಹುದೆಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಮಾಹಿತಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಕೋವಿಡ್ ಬಳಿಕ ಸಾಕಷ್ಟು ಹೊಸ ಅವಕಾಶಗಳು ಲಭ್ಯವಿವೆ. ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಬಹುತೇಕ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಬೆಂಗಳೂರಿನಲ್ಲಿವೆ. ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ಹಾಗಾಗಿ ಕೋವಿಡ್‌ನಿಂದಾಗಿ ಬಹುತೇಕ ಮಂದಿ ಮನೆಯಿಂದಲೇ ಕೆಲಸ ಮಾಡುವಂತಾಗಿದೆ. ಇದು ಕೂಡ ಇಂಟರ್‌ನೆಟ್ ಅವಲಂಬಿತವಾಗಿದ್ದು, ಇಂಟರ್‌ನೆಟ್ ಸಮರ್ಪಕವಾಗಿದ್ದಲ್ಲಿ ಮನೆಯಿಂದಲೇ ಉದ್ಯೋಗಾವಕಾಶ ಹೊಂದಿಕೊಳ್ಳಬಹುದಾಗಿದೆ. ಹಾಗಾಗಿ ಕೌಶಲ್ಯ ತರಬೇತಿ ಕೇಂದ್ರ ಮತ್ತು ತಂತ್ರಜ್ಞಾನ ಕೇಂದ್ರಗಳನ್ನು ಹೆಚ್ಚಿಸುವ ಸಲುವಾಗಿ ಇಂಟರ್‌ನೆಟ್ ಸಂಪರ್ಕ ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಟಾಸ್ಕ್ಫೋರ್ಸ್ ರಚಿಸಲಾಗಿದೆ ಎಂದು ಸಚಿವರು ಹೇಳಿದರು.
ತೈಲ ಬೆಲೆ ಏರಿಕೆ ಸಲುವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೆಟ್ರೋಲಿಯಂ, ಜಿಎಸ್‌ಟಿ ಹಾಗೂ ಆದಾಯ ತೆರಿಗೆಗಳು ಸರಕಾರಕ್ಕೆ ಪ್ರಮುಖ ಆರ್ಥಿಕ ಸಂಪನ್ಮೂಲವಾಗಿದೆ. ಕೋವಿಡ್‌ನಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜಿಎಸ್‌ಟಿ ಹಾಗೂ ಆದಾಯ ತೆರಿಗೆಯನ್ನು ಕಿಂಚಿತ್ತೂ ಕೂಡ ಹೆಚ್ಚಳ ಮಾಡಿಲ್ಲ. ಆದರೆ, ಪೆಟ್ರೋಲ್‌ನ ಅಬಕಾರಿ ಸುಂಕ ಜಾಗತಿಕ ಮಟ್ಟದಲ್ಲಿ ನಿರ್ಧರಿತವಾಗುತ್ತದೆ. ಆಯಾ ರಾಜ್ಯ ಸರಕಾರಗಳಿಗೆ ತೆರಿಗೆ ಇಳಿಸುವ ಅಧಿಕಾರವಿದೆ ಎಂದು ಹೇಳಿದರು.
ಕೇಂದ್ರದ ಏಳು ವರ್ಷದ ಸಾಧನೆ
ಕಳೆದ ೬೦ ವರ್ಷಗಳಿಂದ ಅಧಿಕಾರದಲ್ಲಿದ್ದ
(ಮೊದಲ ಪುಟದಿಂದ) ಕೇಂದ್ರ ಸರಕಾರಗಳು ಮಾಡದ ಸಾಧನೆಯನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾಡಿ ತೋರಿಸಿದೆ ಎಂದು ಆರ್ಟಿಕಲ್ ೩೭೦ ತೆರವು, ರಾಮಮಂದಿರ ನಿರ್ಮಾಣ, ಕೋವಿಡ್ ಲಸಿಕೆ ಸೇರಿದಂತೆ ಸರ್ಕಾರದ ಸಾಧನೆಗಳನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜನತೆಯ ಮುಂದಿಟ್ಟರು.
ಇಲ್ಲಿನ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಜನಾಶೀರ್ವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನಾಶೀರ್ವಾದ ಕಾರ್ಯಕ್ರಮ ಒಂದು ಸಮಾರಂಭವಲ್ಲ, ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ, ಜನಾಶೀರ್ವಾದ ಪಡೆಯುವುದಾಗಿದೆ. ಇದುವರೆಗೆ ಯಾವುದೇ ಸರಕಾರ ನಮ್ಮ ದೇಶ ಕಾಯುವ ಸೈನಿಕರಿಗೆ ನೀಡದ ‘ಒನ್ ರ‍್ಯಾಂಕ್ ಒನ್ ಪೆನ್ಷನ್’ ಯೋಜನೆ, ರಾಷ್ಟಿçÃಯ ಯುದ್ಧ ಸ್ಮಾರಕ ಪ್ರತಿ ನಾಗರಿಕರ ಖಾತೆಗೆ ನೇರವಾಗಿ ಹಣ ಜಮಾವಣೆ ಸೇರಿದಂತೆ ಸಾಕಷ್ಟು ಮಹತ್ತರ ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಎಂದು ಸಚಿವರು ಹೇಳಿದರು. ಭಾರತ ದೇಶ ಸುಭದ್ರವಾಗಿರಬೇಕಾದರೆ ಮುಂದಿನ ೨೫ ವರ್ಷಗಳ ಕಾಲ ಬಿಜೆಪಿ ಸರಕಾರ ಬರಬೇಕು. ನಮ್ಮ ದೇಶದ ಪ್ರಗತಿಗೆ ಏನು ಆಗಬೇಕು, ಎಷ್ಟು ಪ್ರಗತಿಯಾಗಿದೆ, ಈ ಹಿಂದಿನ ೬೦ ವರ್ಷಗಳಲ್ಲಿ ಏನು ಪ್ರಗತಿ ಕಂಡಿದೆ ಎಂಬ ಬಗ್ಗೆ ಜನತೆ ತಾಳೆ ಹಾಕಿ ನೋಡಬೇಕೆಂದು ಹೇಳಿದರು.
ಜನರ ಮನಗೆಲ್ಲುವ ಯೋಜನೆ
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ಶಾಸಕ ಹಾಗೂ ಕಾರ್ಯಕ್ರಮದ ಪ್ರಮುಖ ಸಂಜೀವ ಮಟಂದೂರ್ ಪ್ರಸ್ತುತ ಇಡೀ ವಿಶ್ವವೇ ಭಾರತವನ್ನು ನೋಡು ವಂತಾಗಿದೆ. ದೇಶದ ಏಕತೆ ಹಾಗೂ ಸಮಗ್ರತೆಗೂ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಸಿಗಬೇಕೆಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನಾಶೀರ್ವಾದ ಯಾತ್ರೆ ಯೋಜನೆ ರೂಪಿಸಿದ್ದಾರೆ. ರಾಷ್ಟçದ ೧೩೫ ಕೋಟಿ ಜನರ ಮನಗೆಲ್ಲುವ ಸಲುವಾಗಿ, ಸಚಿವರುಗಳನ್ನು ಜನತೆಯ ಬಳಿ ಕಳುಹಿಸಿ, ಅವರುಗಳ ಆಶೀರ್ವಾದ ಪಡೆಯುವ ಕಾರ್ಯಕ್ರಮ ಇದಾಗಿದೆ ಸಚಿವರು ಹೇಳಿದರು. ಭಾರತ ದೇಶ ಸುಭದ್ರವಾಗಿರಬೇಕಾದರೆ ಮುಂದಿನ ೨೫ ವರ್ಷಗಳ ಕಾಲ ಬಿಜೆಪಿ ಸರಕಾರ ಬರಬೇಕು. ನಮ್ಮ ದೇಶದ ಪ್ರಗತಿಗೆ ಏನು ಆಗಬೇಕು, ಎಷ್ಟು ಪ್ರಗತಿಯಾಗಿದೆ, ಈ ಹಿಂದಿನ ೬೦ ವರ್ಷಗಳಲ್ಲಿ ಏನು ಪ್ರಗತಿ ಕಂಡಿದೆ ಎಂಬ ಬಗ್ಗೆ ಜನತೆ ತಾಳೆ ಹಾಕಿ ನೋಡಬೇಕೆಂದು ಹೇಳಿದರು.
ಜನರ ಮನಗೆಲ್ಲುವ ಯೋಜನೆ
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ಶಾಸಕ ಹಾಗೂ ಕಾರ್ಯಕ್ರಮದ ಪ್ರಮುಖ ಸಂಜೀವ ಮಟಂದೂರ್ ಪ್ರಸ್ತುತ ಇಡೀ ವಿಶ್ವವೇ ಭಾರತವನ್ನು ನೋಡು ವಂತಾಗಿದೆ. ದೇಶದ ಏಕತೆ ಹಾಗೂ ಸಮಗ್ರತೆಗೂ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಸಿಗಬೇಕೆಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನಾಶೀರ್ವಾದ ಯಾತ್ರೆ ಯೋಜನೆ ರೂಪಿಸಿದ್ದಾರೆ. ರಾಷ್ಟçದ ೧೩೫ ಕೋಟಿ ಜನರ ಮನಗೆಲ್ಲುವ ಸಲುವಾಗಿ, ಸಚಿವರುಗಳನ್ನು ಜನತೆಯ ಬಳಿ ಕಳುಹಿಸಿ, ಅವರುಗಳ ಆಶೀರ್ವಾದ ಪಡೆಯುವ ಕಾರ್ಯಕ್ರಮ ಇದಾಗಿದೆ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಶಿಷ್ಟಾಚಾರ ಧ್ವಂಸ
ಸAಸದ ಪ್ರತಾಪ್ ಸಿಂಹ ಮಾತನಾಡಿ, ಸಚಿವರುಗಳನ್ನು ಪರಿಚಯಿಸುವ ಹಿಂದಿನ ಪದ್ಧತಿಯನ್ನು, ಶಿಷ್ಟಾಚಾರವನ್ನು ವಿಪಕ್ಷದವರು ಧ್ವಂಸ ಮಾಡಿದ್ದಾರೆ. ಹಾಗೂ ಪ್ರಧಾನಿ ಮೋದಿಯವರು ೨೧ ಕೋಟಿ ಬಿಜೆಪಿ ಸಕ್ರಿಯ ಕಾರ್ಯಕರ್ತರ ಮೂಲಕ ೧೩೫ ಕೋಟಿ ಜನರ ಬಳಿ ಪರಿಚಯಿಸಿಕೊಂಡು ಜನಾಶೀರ್ವಾದ ಪಡೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸರಕಾರದ ಸಾಧನೆ ಜನರಿಗೆ ತಲುಪಬೇಕೆಂದು ಹೇಳಿದರು.
ಕೊಡಗಿನ ಜನರ ಬೆಂಬಲ ಇದೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಈ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕೆAಬುದು ಪ್ರಧಾನಿಯವರ ಇಚ್ಛೆ. ಇದನ್ನು ಬಲಪಡಿಸುವ ಕೆಲಸವನ್ನು ಸಂಸದರು, ಶಾಸಕರು ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಪ್ರತಿಯೋರ್ವ ಪ್ರಜೆ ಸಹಕಾರ ನೀಡಬೇಕಿದೆ. ಕೊಡಗಿನ ಜನತೆಯ ಬೆಂಬಲ ಇದ್ದೇ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ರಾಜ್ಯ ನಾಯಕ ಕೇಶವ ಪ್ರಸಾದ್, ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಇದ್ದರು.
ರೂಪ ಸತೀಶ್ ವಂದೇ ಮಾತರಂ ಹಾಡಿದರೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಭೀಮಯ್ಯ ನಿರೂಪಿಸಿದರೆ, ಮಾದಪ್ಪ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ವಂದಿಸಿದರು.