ಮಡಿಕೇರಿ, ಆ. ೧೮: ಕೊಡಗು ಜಿಲ್ಲೆಯ ೧೦೪ ಗ್ರಾಮ ಪಂಚಾಯಿತಿ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರುಗಳನ್ನು ಖಾಯಂ ಗೊಳಿಸಬೇಕೆಂದು ಕರ್ನಾಟಕ ಆದಿ ದ್ರಾವಿಡ ಮಾದಿಗರ ಹೋರಾಟ ಸಮಿತಿ ಒತ್ತಾಯಿಸಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಸಮಿತಿಯ ರಾಜ್ಯಾಧ್ಯಕ್ಷ ಡಿ.ಆರ್. ರಾಜು, ಸರ್ಕಾರ ಪೌರಕಾರ್ಮಿಕರ ನೇಮಕಾತಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ನಿಗದಿಪಡಿಸಿರುವುದು ಪೌರ ಕಾರ್ಮಿಕ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಲ್ಲದೆ ಐದು ಸಾವಿರ ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕ, ಒಂಭತ್ತು ಸಾವಿರ ಜನಸಂಖ್ಯೆಗೆ ಇಬ್ಬರು ಪೌರ ಕಾರ್ಮಿಕರು ಹಾಗೂ ಹದಿಮೂರು ಸಾವಿರ ಜನಸಂಖ್ಯೆಗೆ ಮೂರು ಪೌರ ಮಡಿಕೇರಿ, ಆ. ೧೮: ಕೊಡಗು ಜಿಲ್ಲೆಯ ೧೦೪ ಗ್ರಾಮ ಪಂಚಾಯಿತಿ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರುಗಳನ್ನು ಖಾಯಂ ಗೊಳಿಸಬೇಕೆಂದು ಕರ್ನಾಟಕ ಆದಿ ದ್ರಾವಿಡ ಮಾದಿಗರ ಹೋರಾಟ ಸಮಿತಿ ಒತ್ತಾಯಿಸಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಸಮಿತಿಯ ರಾಜ್ಯಾಧ್ಯಕ್ಷ ಡಿ.ಆರ್. ರಾಜು, ಸರ್ಕಾರ ಪೌರಕಾರ್ಮಿಕರ ನೇಮಕಾತಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ನಿಗದಿಪಡಿಸಿರುವುದು ಪೌರ ಕಾರ್ಮಿಕ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಲ್ಲದೆ ಐದು ಸಾವಿರ ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕ, ಒಂಭತ್ತು ಸಾವಿರ ಜನಸಂಖ್ಯೆಗೆ ಇಬ್ಬರು ಪೌರ ಕಾರ್ಮಿಕರು ಹಾಗೂ ಹದಿಮೂರು ಸಾವಿರ ಜನಸಂಖ್ಯೆಗೆ ಮೂರು ಪೌರ ಕಾರ್ಮಿಕನಂತೆ ನೇಮಕಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.

ಕೆಲಸ ಮಾಡುತ್ತಿದ್ದ ಸಂದರ್ಭ ಪೌರಕಾರ್ಮಿಕರು ಮೃತರಾದರೆ ಅಥವಾ ನಿವೃತ್ತಿ ಹೊಂದಿದರೆ ರೂ ೫ ಲಕ್ಷ ಪರಿಹಾರವನ್ನು ನೀಡಬೇಕು. ಈ ಬೇಡಿಕೆಗಳಿಗೆ ಸ್ಪಂದನ ಸಿಗದಿದ್ದರೆ ಸೆ. ೨೦ ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ರಾಜು ಹೇಳಿದರು. ಸಮಿತಿಯ ನಗರಾಧ್ಯಕ್ಷ ಮಂಚಯ್ಯ ಮಾತನಾಡಿ, ಪೌರ ಕಾರ್ಮಿಕರ ಮೇಲೆ ದಿನೇ ದಿನೇ ದೌರ್ಗನ್ಯಗಳು ಹೆಚ್ಚಾಗುತ್ತಿದ್ದು, ಸಂಬAಧಿಸಿದವರು ಇದಕ್ಕೆ ಕಡಿವಾಣ ಹಾಕಬೇಕೆಂದರು. ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಪಿ. ಮಂಜುನಾಥ್ ಮಾತನಾಡಿ, ಪೌರ ಕಾರ್ಮಿಕರ ಕೆಲಸಕ್ಕೆ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸವನ್ನು ಕಡ್ಡಾಯಗೊಳಿಸುವುದು ಸರಿಯಲ್ಲ ಎಂದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಪಳನಿಪ್ರಕಾಶ್ ಮಾತನಾಡಿ, ಪೌರ ಕಾರ್ಮಿಕರಿಗೆ ನಿವೇಶನ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವಾಗಬೇಕೆಂದರು. ಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಮೈಸೂರ್ ಮಹಾದೇವ್, ಮುರುಗೇಶ್ ಉಪಸ್ಥಿತರಿದ್ದರು.