ಮಡಿಕೇರಿ, ಆ. ೧೮: ಕೋವಿಡ್ -೧೯ ಮುಂದುವರಿದ ಕಾರಣ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಿಂಗಳ ಔಷಧಿಗಳನ್ನು ಇಸಿಹೆಚ್ಎಸ್ ವೈದ್ಯರ, ಎಂಪಾನೆಲೆಡ್ ಆಸ್ಪತ್ರೆಗಳ ಔಷಧಿಗಳ ಚೀಟಿಯನ್ನು ತೋರಿಸಿ ಅಕ್ಟೋಬರ್ ೩೧ರ ತನಕ ಔಷಧಿಗಳನ್ನು ಹೊರಗಡೆಯಿಂದ ತೆಗೆದುಕೊಂಡು ಬಿಲ್ಲನ್ನು ಇಸಿಹೆಚ್ಎಸ್ಗೆ ತಂದುಕೊಡಬಹುದಾಗಿದೆ. ಮಾತ್ರೆಗಳಿಗೋಸ್ಕರ ಇಸಿಹೆಚ್ಎಸ್ಗೆ ಬರಬೇಕಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.