ಸಿದ್ದಾಪುರ, ಆ. ೧೮: ಕುಶಾಲನಗರ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಗೆ ಒಳಪಡುವ ನೆಲ್ಲಿಹುದಿಕೇರಿ, ಬೆಟ್ಟದಕಾಡು, ಅರೆಕಾಡು, ಅಭ್ಯತ್ಮಂಗಲ, ವಾಲ್ನೂರು, ತ್ಯಾಗತ್ತೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ತಾ. ೧೯ ರಂದು (ಇಂದು) ಬೆಳಿಗ್ಗೆ ೮ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ನಡೆಯಲಿದೆ.
ಈ ಭಾಗದ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ವಾಹನ ಚಾಲಕರು, ಕಾರ್ಮಿಕರು ಎಚ್ಚರವಹಿಸುವ ಮೂಲಕ ಕಾರ್ಯಾಚರಣೆಗೆ ಸಹಕರಿಸಬೇಕೆಂದು ಮೀನುಕೊಲ್ಲಿ ವಲಯ ಅರಣ್ಯಾಧಿಕಾರಿ ಸುಬ್ರಾಯ ಮನವಿ ಮಾಡಿದ್ದಾರೆ.