ಸಿದ್ದಾಪುರ, ಆ. ೧೭: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಲ್ವತ್ತೇಕರೆಯಿಂದ ಬರಡಿಗೆ ತೆರಳುವ ರಸ್ತೆಯ ಭಾಗದಲ್ಲಿ ಸೀಲ್‌ಡೌನ್ ಮಾಡಿರುವುದನ್ನು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮಂಗಳವಾರದAದು ಪ್ರತಿಭಟನೆ ಮಾಡಿದರು.

ನೆಲ್ಲಿಹುದಿಕೇರಿಯ ನಲ್ವತ್ತೇಕರೆಯ ಸಮೀಪದಲ್ಲಿರುವ ಬರಡಿ ಗ್ರಾಮದಲ್ಲಿ ಕೊರೊನಾ ಸೋಂಕು ಪ್ರಕರಣ ಇರುವ ಹಿನ್ನೆಲೆಯಲ್ಲಿ ನಲ್ವತ್ತೇಕರೆ ಭಾಗದ ಮುಖ್ಯ ರಸ್ತೆಯನ್ನು ಸೇರಿಸಿ ಸುಮಾರು ೨ ಕಿ.ಮೀ. ದೂರ ಸೀಲ್‌ಡೌನ್ ಮಾಡಲಾಗಿದ್ದು, ಇದು ಅವೈಜ್ಞಾನಿಕದಿಂದ ಕೂಡಿದೆ. ಇಲ್ಲಿನ ಜನತೆ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆAದು ಆರೋಪಿಸಿದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಬರಡಿ ನಲ್ವತ್ತೇಕರೆ ಭಾಗದಲ್ಲಿ ಬಹುತೇಕ ಕೂಲಿ ಕಾರ್ಮಿಕರು ಅಧಿಕವಾಗಿದ್ದು, ಇದೀಗ ಸೀಲ್‌ಡೌನ್ ಮಾಡಿರುವುದರಿಂದ ಕೆಲಸಗಳಿಗೂ ತೆರಳಲು ಸಾಧ್ಯವಾಗದೇ ನೂರಾರು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಹೇಳಿದರು. ೧೦೦ಕ್ಕೂ ಅಧಿಕ ಕುಟುಂಬಗಳಿಗೆ ಪಂಚಾಯಿತಿ ಮೂಲಕ ೧೫ ದಿನಗಳ ಕಾಲ ಅಗತ್ಯ ವಸ್ತುಗಳನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.

ಈ ಭಾಗದಲ್ಲಿ ಜೀಪು ಹಾಗೂ ಆಟೋ ಚಾಲಕರು ಕೂಡ ಇದ್ದು, ಸೀಲ್‌ಡೌನ್‌ಗೆ ಸಿಲುಕಿಕೊಂಡು ಬಾಡಿಗೆಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳನ್ನು ಸಂಬAಧಪಟ್ಟ ಗ್ರಾ.ಪಂ. ಹಾಗೂ ಕಂದಾಯ ಇಲಾಖಾಧಿಕಾರಿಗಳು ಬಗೆಹರಿಸಿ ಅವೈಜ್ಞಾನಿಕವಾಗಿ ಮಾಡಿರುವ ಸೀಲ್‌ಡೌನ್‌ನನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.

ಗ್ರಾಮಸ್ಥರಾದ ರವೀಶ್ ಭಟ್, ಚಂದ್ರನ್, ಮೋಣಪ್ಪ, ಜೋಸ್ ಇನ್ನಿತರರು ಪಾಲ್ಗೊಂಡಿದ್ದರು.

-ವಾಸು