ಗೋಣಿಕೊಪ್ಪಲು, ಆ. ೧೭: ಗೋಣಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಟ್ಲಮ್ಮ ದೇವಾಲಯಕ್ಕೆ ಕೆಪಿಸಿಸಿ ಕಾನೂನು ಘಟಕದ ರಾಜ್ಯಾದ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿದರು. ಹಲವಾರು ವರ್ಷಗಳಿಂದ ಈ ದೇವಾಲಯ ನಿರ್ವಹಣೆ ಇಲ್ಲದೆ ಜೀರ್ಣೋದ್ಧಾರವಾಗಿರಲಿಲ್ಲ. ಹಾಗಾಗಿ ಇದರ ಅಭಿವೃದ್ಧಿ ಸಹಾಯಬೇಕೆಂದು ಪಂಚಾಯತಿ ಸದಸ್ಯೆ ಎಂ.ಮAಜುಳ ಅವರ ಸಮ್ಮುಖದಲ್ಲಿ ಪೌರಕಾರ್ಮಿಕರು ಮನವಿ ಮಾಡಿದ್ದರು. ಮನವಿ ಹಿನ್ನೆಲೆ ಭೇಟಿ ನೀಡಿದ ಎ.ಎಸ್. ಪೊನ್ನಣ್ಣ ದೇವಾಲಯ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವ ಭರವಸೆ ನೀಡಿದರು. ಈ ವೇಳೆ ಪೌರಕಾರ್ಮಿಕರ ಅಹವಾಲು ಸ್ವೀಕರಿಸಿದರು. ದೇವಾಲಯದ ಅಭಿವೃದ್ಧಿ ಬಗ್ಗೆ ನೀಲಿ ನಕ್ಷೆಯನ್ನು ತಯಾರಿಸಿ ನೀಡಿದರೆ ಇದಕ್ಕೆ ತಗಲುವ ವೆಚ್ಚ ನೀಡುವ ಭರವಸೆ ನೀಡಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್,ಮಹಿಳಾ ಅಧ್ಯಕ್ಷೆ ಕೋಳೆರ ಭಾರತಿ, ಡಿಸಿಸಿ ಸದಸ್ಯರಾದ ಕೊಲ್ಲಿರ ಬೋಪಣ್ಣ, ಮುಕ್ಕಾಟೀರ ಸಂದೀಪ್, ಕಡೇಮಾಡ ಕುಸುಮಾ,ನಗರ ಅಧ್ಯಕ್ಷ ಪ್ರಮೋದ್ ಗಣಪತಿ, ಯುವ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್, ಪಂಚಾಯತಿ ಉಪಾಧ್ಯಕ್ಷೆ ವೈ.ಎಂ. ಸವಿತ, ಸದಸ್ಯರಾದ ಎಂ.ಮAಜುಳ, ದ್ಯಾನ್ ಸುಬ್ಬಯ್ಯ, ಧನಲಕ್ಷ್ಮಿ, ಸುಲೇಕಾ, ಪೌರಕಾರ್ಮಿಕರ ಮುಖಂಡರು ಹಾಜರಿದ್ದರು.