ಮಡಿಕೇರಿ, ಆ. ೧೭: ಸಮಾಜಮುಖಿ ಚಿಂತಕ ಹೆಚ್.ಕೆ. ವಿವೇಕಾನಂದ ಅವರ ಕಾಲ್ನಡಿಗೆಯ ಜ್ಞಾನಭಿಕ್ಷೆ ಪಾದಯಾತ್ರೆಯು ತಾ. ೧೮ರಂದು ಮಡಿಕೇರಿಗೆ ಆಗಮಿಸಲಿದೆ. ಮಧ್ಯಾಹ್ನ ೨.೩೦ ಕ್ಕೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಾ. ೧೯ ರಂದು ಮೂರ್ನಾಡಿನಲ್ಲಿ ವಾಸ್ತವ್ಯ, ತಾ.೨೦ರಂದು ವೀರಾಜಪೇಟೆಯಲ್ಲಿ ಸಾರ್ವಜನಿಕ ಸಂವಾದ ನಂತರ ವಾಸ್ತವ್ಯ.
ತಾ. ೨೧ ರಂದು ಗೋಣಿಕೊಪ್ಪಲು ಮತ್ತು ಪೊನ್ನಂಪೇಟೆಯಲ್ಲಿ ಸಾರ್ವಜನಿಕ ಸಂವಾದ ನಡೆಸಲಿದ್ದಾರೆ ಮತ್ತು ಅಲ್ಲಿ ವಾಸ್ತವ್ಯ. ತಾ. ೨೨ರಂದು ಸಿದ್ದಾಪುರದಲ್ಲಿ ಸಾರ್ವಜನಿಕ ಸಂವಾದ ನಡೆಸಿ ಅಲ್ಲಿ ವಾಸ್ತವ್ಯ . ತಾ ೨೩ ರಂದು ಕುಶಾಲನಗರದಲ್ಲಿ ಸಾರ್ವಜನಿಕ ಸಂವಾದ ನಡೆಸಲಿದ್ದಾರೆ ಎಂದು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ತಿಳಿಸಿದ್ದಾರೆ.