ಸೋಮವಾರಪೇಟೆ, ಆ. ೧೭: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಮುಖ್ಯಮಂತ್ರಿಗಳ ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಮೂಲಕ ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಿದ್ದರೂ ಪಟ್ಟಣದ ರಸ್ತೆಗಳ ಬದಿಯಲ್ಲಿ ಮಾತ್ರ ವ್ಯಾಪಾರ ವಹಿವಾಟು ನಿಂತಿಲ್ಲ.
ಹೈಟೆಕ್ ಮಾರುಕಟ್ಟೆಯಲ್ಲಿ ವಿಶಾಲವಾದ ಸ್ಥಳಾವಕಾಶವಿದ್ದರೂ ಕೆಲ ವರ್ತಕರು ರಸ್ತೆ ಬದಿಯಲ್ಲಿ, ಚರಂಡಿಯ ಸ್ಲಾö್ಯಬ್ ಮೇಲೆ ವ್ಯಾಪಾರ ವಹಿವಾಟು ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕ ವಾಹನಗಳ ಓಡಾಟ, ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿದೆ.
ಅದೂ ಅಲ್ಲದೇ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಅದರ ಮೇಲೆಯೇ ಹಣ್ಣು ತರಕಾರಿ, ಬಟ್ಟೆ, ಕಾಳು ಕಡ್ಡಿ, ಕೊಡೆ, ಟಾರ್ಪಲ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಅಶುಚಿತ್ವದ ಪ್ರದೇಶದಲ್ಲೇ ವ್ಯಾಪಾರ ವಹಿವಾಟು ನಡೆಯುತ್ತಿದೆ.
ರೂ. ೧.೨೫ ಕೋಟಿ ವೆಚ್ಚದಲ್ಲಿ ಕಳೆದ ೨೦೧೧-೧೨ನೇ ಸಾಲಿನಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಿದ್ದು, ಇಲ್ಲಿ ತರಕಾರಿ, ದಿನಸಿ, ಮೀನು, ಮಾಂಸ, ಬಟ್ಟೆ ಸೇರಿದಂತೆ ದಿನೋಪಯೋಗಿ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಾರುಕಟ್ಟೆಯ ಪ್ರಾಂಗಣವನ್ನು ಸಂತೆ ನಡೆದ ಮರುದಿನವೇ ಪಟ್ಟಣ ಪಂಚಾಯಿತಿ ವತಿಯಿಂದ ಶುಚಿಗೊಳಿಸಲಾಗುತ್ತಿದೆ.
ಇದರೊಂದಿಗೆ ವಿಶಾಲ ಪ್ರಾಂಗಣ, ವಸ್ತುಗಳ ಮಾರಾಟಕ್ಕೆ ನಿಗದಿತ ಸ್ಥಳಾವಕಾಶ, ಗ್ರಾಹಕರ ಓಡಾಟಕ್ಕೆ ಅನುಕೂಲವಾಗುವಂತೆ ಪಾದಚಾರಿ ಮಾರ್ಗಗಳನ್ನು ಅಳವಡಿಸಿದ್ದರೂ ಸಹ ಸೋಮವಾರದಂದು ರಸ್ತೆ ಬದಿಯಲ್ಲಿ ವಸ್ತುಗಳ ಮಾರಾಟಕ್ಕೆ ತಡೆಬಿದ್ದಿಲ್ಲ.ಸುಬ್ಬಯ್ಯ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಬಳಸಿಕೊಳ್ಳುತ್ತಿದ್ದು, ಪಟ್ಟಣಕ್ಕೆ ಆಗಮಿಸುವ ಎಲ್ಲಾ ವಾಹನಗಳೂ ಸಹ ಇದೇ ಮಾರ್ಗವನ್ನು ಅವಲಂಭಿಸಿವೆ. ಬಸ್ ಸೇರಿದಂತೆ ಇನ್ನಿತರ ಖಾಸಗಿ ವಾಹನಗಳು ಸಿ.ಕೆ. ಸುಬ್ಬಯ್ಯ ರಸ್ತೆಯ ಮೂಲಕ ಪಟ್ಟಣಕ್ಕೆ ಬರುತ್ತಿದ್ದು, ಈ ರಸ್ತೆಯ ಎರಡೂ ಬದಿಯಲ್ಲಿ ವರ್ತಕರು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುತ್ತಾರೆ.
ಪಟ್ಟಣ ಪಂಚಾಯಿತಿಯ ಶೌಚಾಲಯದ ಮುಂಭಾಗವೂ ಸೋಮವಾರದಂದು ವ್ಯಾಪಾರ ನಡೆಯುತ್ತಿದೆ. ಅಶುಚಿತ್ವದ ಆವರಣದಲ್ಲೇ ಗ್ರಾಹಕರು ತಮ್ಮ ಮನೆಗಳಿಗೆ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿಯ ಆರೋಗ್ಯಾಧಿ ಕಾರಿಗಳು ಇತ್ತ ಒಮ್ಮೆ ಗಮನಹರಿಸ
ಸಂತೆ ದಿನವಾದ ಸೋಮವಾರದಂದು ಪಟ್ಟಣದ ಸಿ.ಕೆ. ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಸಂತೆ ದಿನದಂದು ವಾಹನಗಳು, ಪಾದಚಾರಿಗಳ ಓಡಾಟ ಹೆಚ್ಚಿರುತ್ತದೆ. ಇದರ ನಡುವೆಯೂ ರಸ್ತೆಯ ಬದಿಯಲ್ಲಿ ವ್ಯಾಪಾರದಲ್ಲಿ ತೊಡಗಿ ರುವ ವರ್ತಕರ ಅಂಗಡಿಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿರುವ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಅವರು, ಸಂತೆ ದಿನದಂದು ಕೆಲವರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವು ದರಿಂದ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿರುವುದು ಗಮನಕ್ಕೆ ಬಂದಿದೆ.
ಮುಂದಿನ ಸೋಮವಾರದಿಂದ ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಮಾರುಕಟ್ಟೆಯೊಳಗೆ ಸ್ಥಳ ಗುರುತಿಸಿ ಅಲ್ಲೇ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
- ವಿಜಯ್