*ವೀರಾಜಪೇಟೆ, ಆ. ೧೭: ವೀರಾಜಪೇಟೆ ನಗರದ ಆರ್ಜಿಗ್ರಾಮ ಪಂಚಾಯಿತಿಗೆ ಸೇರಿದ ಕಲ್ಲುಬಾಣೆ ನಿವಾಸಿ ತರಕಾರಿ ವ್ಯಾಪಾರಿ ಸಾಧಿಕ್ ಹಾಗೂ ನಸೀಮ ದಂಪತಿಯ ಪ್ರಥಮ ಪುತ್ರ ಸಫ್ವ್ವಾನ್ (೨೧) ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಡಾಕ್ಗೆ ಸೈಕಲ್ ಪಯಣ ಕೈಗೊಂಡಿದ್ದಾರೆ.
ತಾನು ಚಿಕ್ಕಂದಿನಿAದಲೂ ಏನಾದರೂ ಸಾಧಿಸಬೇಕು ಎಂಬ ಬಯಕೆಯನ್ನು ಇಟ್ಟುಕೊಂಡಿದ್ದ ಸಫ್ವಾನ್ ಮೊದಲು ಬೈಕ್ ಜಾಥಾ ಹಮ್ಮಿಕೊಂಡು, ನಂತರ ಪೆಟ್ರೋಲ್ ಬೆಲೆ ಜಾಸ್ತಿಯಾದ ಕಾರಣ ಸೈಕಲ್ನಲ್ಲಿ ವೀರಾಜಪೇಟೆಯಿಂದ ಲಡಾಕ್ಗೆ ಸೈಕಲ್ ಸವಾರಿ ಹೊರಟು, ಹೋಗುವ ದಾರಿಯಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸುವ ಹಾಗೂ ಅಲ್ಲಿ ಕೋವಿಡ್ ಬಗ್ಗೆ ಹೆಚ್ಚು ಮಾಹಿತಿ ಕಲೆ ಹಾಕಿ ತನ್ನ ಅooಡಿg Peಜಡಿಚಿಟ Poತಿeಡಿ ಎಂಬ ಙouಖಿube ಚಾನಲ್ ಮೂಲಕ ಮಾಹಿತಿ ನೀಡುವುದಾಗಿ ಸಫ್ವಾನ್ ಮಾಹಿತಿ ನೀಡಿದರು.
ಅಲ್ಲದೆ ಸುಮಾರು ನಾಲ್ಕು ಸಾವಿರ ಕಿಲೋಮೀಟರ್ ದೂರದಲ್ಲಿರುವ ಪ್ರಾಂತ್ಯಕ್ಕೆ
(ಮೊದಲ ಪುಟದಿಂದ) ಎಂಬತ್ತು ದಿನಗಳಲ್ಲಿ ತಲುಪುವ ಭರವಸೆ ನೀಡಿದರು. ಸಫ್ವಾನ್ಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ. ಬಶೀರ್ ಮತ್ತು ಶಹದೀರ್ ಅಲಿ ಶುಭ ಕೋರಿದರು.
ಕಲ್ಲುಬಾಣೆ ಮಸೀದಿಯ ಮುಖಂಡ ಹನೀಫ್ ಪೈಜಿ ಆಶೀರ್ವಾದ ಮಾಡಿ ಕಳುಹಿಸಿಕೊಟ್ಟರು. ಕಲ್ಲುಬಾಣೆ ಯುವಕ ಸಂಘದ ಅಧ್ಯಕ್ಷ ಯಹಿಯ ಮಾಲಾರ್ಪಣೆ ಮಾಡಿದರು. ಸಂಘದ ಸದಸ್ಯರಾದ ಅಶ್ರಪ್, ನೌಫಲ್, ರಹೀಂ, ಶಾಫೀ, ರಾಜಿಕ್ ಸೇರಿದಂತೆ ಕಲ್ಲುಬಾಣೆಯ ನಿವಾಸಿಗಳು ಸಂತೋಷ ಪೂರ್ವಕವಾಗಿ ಕಳುಹಿಸಿಕೊಟ್ಟರು.