ಮಡಿಕೇರಿ, ಆ. ೧೭: ೧೯ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಅಜಾದಿ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಡಿಜಿಟಲ್ ಪೋಸ್ಟ್ ಕಾರ್ಡ್ ಸ್ಪರ್ಧೆ ನಡೆಯಿತು. ‘ಸಂವಿಧಾನ ಪ್ರಸ್ತಾವನೆ’ ಎಂಬ ವಿಷಯದ ಕುರಿತು ನಡೆದ ಸ್ಪರ್ಧೆಯನ್ನು ಕರ್ನಲ್ ಚೇತನ್ ಕುಮಾರ್ ದಿಮಾನ್, ಲೆಫ್ಟಿನೆಂಟ್ ಕರ್ನಲ್ ನವದೀಪ್ ಸಿಂಗ್ ಬೇಡಿ, ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ, ಮೇಜರ್ ಡಾ. ರಾಘವ್ ಬಿ. ನಿರ್ವಹಿಸಿದರೆ, ತಾಂತ್ರಿಕ ನಿರ್ವಹಣೆಯನ್ನು ಉಪನ್ಯಾಸಕರು ಗಳಾದ ಆಯುಷ್ ಜಿ.ಕೆ. ಮತ್ತು ಯೋಗಾನಂದ ಅವರು ನಡೆಸಿಕೊಟ್ಟರು ಎಂದು ೧೯ನೇ ಕರ್ನಾಟಕ ಬೆಟಾಲಿಯನ್ ಕಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ಕುಮಾರ್ ದಿಮಾನ್ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಮತ್ತು ಬೆಳಗಾಂ ವಲಯದ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.