ಮಡಿಕೇರಿ, ಆ. ೧೭: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ೨೦೨೦-೨೦೨೧ನೇ ಸಾಲಿನ ಫೆಲೋಶಿಪ್ ದಾಖಲೀಕರಣಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಭೆಯು ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಗೆ ಡಾ. ತೀತಿರ ರೇಖಾ ವಸಂತ್ ಇವರು ವಿಷಯ ತಜ್ಞರಾಗಿ ಆಗಮಿಸಿದ್ದರು. ಅಲ್ಲದೇ ಈ ಸಭೆಯಲ್ಲಿ ಅರ್ಥ ಸದಸ್ಯರಾದ ದರ್ಶನ ಕೆ.ಟಿ., ಅಕಾಡೆಮಿಯ ರಿಜಿಸ್ಟಾçರ್ ಅಜ್ಜಿಕುಟ್ಟಿರ ಸಿ. ಗಿರೀಶ್, ಅಕಾಡೆಮಿ ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ, ಪಡಿಞÁರಂಡ ಪ್ರಭುಕುಮಾರ್, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ತೇಲಪಂಡ ಕವನ್ ಕಾರ್ಯಪ್ಪ ಇವರುಗಳು ಭಾಗಿಯಾಗಿದ್ದರು. ಸಭೆಗೆ ಆಗಮಿಸಿದ್ದ ಅಭ್ಯರ್ಥಿಗಳು ತಾವು ಫೆಲೋಶಿಪ್/ ದಾಖಲೀಕರಣಕ್ಕೆ ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಮಾಹಿತಿ ನೀಡಿದರು.

ಮೊಣ್ಣಂಡ ಶೋಭಾ ಸುಬ್ಬಯ್ಯ ಶತಮಾನದ ಅವಧಿಯಲ್ಲಿ ಬದಲಾದ ಕೊಡವ ಪದ್ಧತಿ ಪರಂಪರೆ ಪಟ್ಟೋಲೆ ಪಳಮೆಯ ಹಿನ್ನೆಲೆಯಲ್ಲಿ, ಡಾ. ಡಿ.ಸಿ. ನಂಜುAಡ ಅವರು ಮಾನವ ಮತ್ತು ವನ್ಯ ಜೀವಿ ಸಂಘರ್ಷ, ಎನ್.ಸಿ. ಅನಿತಕುಮಾರಿ ಅವರು ಕೊಡಗ್‌ರ ನಾಡ್ ಮದ್ದ್ಕಾರ (ದಾಖಲೀಕರಣ), ಪ್ರವೀಣ್ ಕುಮಾರ್ ಎ.ಸಿ. ಅವರು ಕೆಂಗಳಮೆ ಕಿಗ್ಗಟ್ಟ್ ಮಾದೇವಡ ತಿರಿಕೆ ಮತ್ತು ರಿನಿ ಚಿಣ್ಣಪ್ಪ ಅವರು ಸರಿತಾ ಮಂದಣ್ಣ ‘ಟೈಗರ್ ಹಿಲ್ಸ್’ ವುಮನ್ ಇನ್ ರೆಸಿಸ್ಟೆನ್ಸ್ ಇವರು ಅಕಾಡೆಮಿಯ ನಿಯಮಗಳಿಗೆ ಒಪ್ಪಿಗೆ ನೀಡಿ ಈ ಫೆಲೋಶಿಪ್ ಅಧ್ಯಯನವನ್ನು ಮುಂದುವರೆಸುತ್ತಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.