ದೇಶದಲ್ಲಿ ೧೦೦೦ ಖೇಲೋ ಇಂಡಿಯಾ ಕೇಂದ್ರಗಳ ಸ್ಥಾಪನೆ
ನವದೆಹಲಿ, ಆ. ೧೭: ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸಲು ದೇಶಾದ್ಯಂತ ಸುಮಾರು ೧೦೦೦ ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತೀಯ ಪ್ಯಾರಾ ಒಲಿಂಪಿಯನ್ ಸದಸ್ಯರಿಗೆ ಹೇಳಿದ್ದಾರೆ. ಪ್ಯಾರಾ-ಒಲಿಂಪಿಯನ್ಗಳೊAದಿಗೆ ವೀಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ, ಸರ್ಕಾರ ಆಟಗಾರರನ್ನು ತಲುಪಲು ಪ್ರಯತ್ನಿಸುತ್ತಿದೆ, ಗ್ರಾಮೀಣ ಪ್ರದೇಶಗಳ ಪ್ರತಿಭೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದರು. ದೇಶದಲ್ಲಿ ಪ್ರಸ್ತುತ ೩೬೦ ಖೇಲೋ ಇಂಡಿಯಾ ಕೇಂದ್ರಗಳಿದ್ದು, ಅವುಗಳನ್ನು ೧೦೦೦ಕ್ಕೆ ಹೆಚ್ಚಿಸಲಾಗುವುದು. ನೀವು ಯಾವುದೇ ರಾಜ್ಯ, ಪ್ರದೇಶಕ್ಕೆ ಸೇರಿದವರಾಗಿದ್ದರೂ, ನೀವು ಯಾವುದೇ ಭಾಷೆ ಮಾತನಾಡುವವರಾಗಿದ್ದರೂ ಸರಿ ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನೀವು ಟೀಮ್ ಇಂಡಿಯಾ. ಈ ಮನೋಭಾವವು ನಮ್ಮ ಸಮಾಜದ ಪ್ರತಿಯೊಂದು ಭಾಗವನ್ನು ವ್ಯಾಪಿಸಬೇಕು ಎಂದರು. ಇಂದಿನ ನವ ಭಾರತವು ಪದಕಕ್ಕಾಗಿ ಕ್ರೀಡಾಪಟುಗಳ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಆದರೆ ಅವರು ಅತ್ಯುತ್ತಮ ಪ್ರದರ್ಶನ ನೀಡಬೇಕು ಎಂದು ನಿರೀಕ್ಷಿಸುತ್ತದೆ. ದೇಶವು ನಮ್ಮಲ್ಲಿರುವ ಕ್ರೀಡಾಪಟುಗಳೊಂದಿಗೆ ಸದೃಢವಾಗಿದೆ. ಅವರು ಗೆದ್ದರೂ ಸೋತರೂ ಪ್ರಯತ್ನ ಮುಖ್ಯ ಎಂದು ಪ್ರಧಾನಿ ಹೇಳಿದರು. ಪ್ಯಾರಾ ಅಥ್ಲೀಟ್ಗಳ ಕುಟುಂಬ ಸದಸ್ಯರು, ಪಾಲಕರು ಮತ್ತು ತರಬೇತುದಾರರು ಕೂಡ ವರ್ಚುವಲ್ನಲ್ಲಿ ಭಾಗವಹಿಸಿದ್ದರು.
ಕಚೇರಿ ಮುಚ್ಚಿದ ಮಾತ್ರಕ್ಕೆ ಅಫ್ಘಾನಿಸ್ತಾನ ಕೈಬಿಟ್ಟಿದ್ದೇವೆ ಎಂದರ್ಥವಲ್ಲ
ಜಾಮ್ನಗರ್, ಆ. ೧೭: ಕಚೇರಿ ಮುಚ್ಚಿದೆ ಎಂದ ಮಾತ್ರಕ್ಕೆ ತಾವು ಅಫ್ಘಾನಿಸ್ತಾನದ ಜನರನ್ನು ಕೈಬಿಟ್ಟಿದ್ದೇವೆ ಎಂದರ್ಥವಲ್ಲ. ಅವರೊಂದಿಗೆ ನಮ್ಮ ಸಂವಹನವನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ ಎಂದು ಆಫ್ಘಾನಿಸ್ತಾನದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಹೇಳಿದ್ದಾರೆ. ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಮತ್ತು ಇತರ ಭಾರತೀಯರೊಂದಿಗೆ ಭಾರತಕ್ಕೆ ಮರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಟಂಡನ್, ಪರಿಸ್ಥಿತಿ ತುಂಬಾ ಬದಲಾಗುತ್ತಿರುವುದರಿಂದ ಮುಂದಿನ ನಡೆಯನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿರುವುದು ಭಾರತದ ಮುಂದಿನ ನಡೆ ಕುರಿತು ಕುತೂಹಲ ಮೂಡಿಸಿದೆ. ಇದೇ ವೇಳೆ ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಭಾರತೀಯರ ಪರಿಸ್ಥಿತಿಯ ಬಗ್ಗೆಯೂ ಅವರು ಮಾತನಾಡಿದ್ದು, ಅಲ್ಲಿ ಇನ್ನೂ ಕೆಲವು ಭಾರತೀಯರು ಇದ್ದಾರೆ ಮತ್ತು ಅಲ್ಲಿಗೆ ಏರ್ ಇಂಡಿಯಾ ತನ್ನ ವಾಣಿಜ್ಯ ಸೇವೆಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿಯೂ ತಮ್ಮನ್ನು ಸುರಕ್ಷಿತವಾಗಿ ಮರಳಿ ಕರೆತಂದಿದ್ದಕ್ಕಾಗಿ ಭಾರತೀಯ ವಾಯುಪಡೆಗೆ ಟಂಡನ್ ಧನ್ಯವಾದ ಅರ್ಪಿಸಿದರು.
ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ತಾ. ೨೦ ರವರೆಗೂ ಮಳೆ ಅಬ್ಬರ
ಬೆಂಗಳೂರು, ಆ. ೧೭: ಬಂಗಾಳಕೊಲ್ಲಿಯಲ್ಲಿ ಪ್ರಬಲ ಮಾರುತಗಳ ಕಾರಣ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ತಾ. ೨೦ ರವರೆಗೂ ಮಳೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ ತಿಂಗಳಲ್ಲಿ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದರು. ಈಗ ಮತ್ತೆ ಮಳೆರಾಯನ ಆರ್ಭಟ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿAದ ಮುಂದಿನ ನಾಲ್ಕು ದಿನ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದೂ ವರದಿ ಹೇಳಿದೆ. ರಾಜ್ಯ ಮಾತ್ರವಲ್ಲದೆ, ಮಹಾರಾಷ್ಟç, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಧ್ಯಪ್ರದೇಶ ರಾಜ್ಯಗಳಲ್ಲೂ ಇನ್ನೆರಡು ದಿನ ವ್ಯಾಪಕ ಮಳೆಯಾಗಲಿದೆ. ಮಣಿಪುರ, ತ್ರಿಪುರ, ಮಿಜೋರಾಂ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ರಾಜ್ಯದಲ್ಲಿ ಇಂದು ಕೊರೊನಾ ಏರಿಕೆ
ಬೆಂಗಳೂರು, ಆ. ೧೭: ಕೊರೊನಾ ಎರಡನೇ ಅಲೆ ನಂತರ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಅಲ್ಪ ಏರಿಕೆಯಾಗಿದ್ದು ಇಂದು ೧೨೯೮ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೨೯,೩೧,೮೨೭ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ ಮಹಾಮಾರಿಗೆ ೩೨ ಮಂದಿ ಬಲಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ ೩೭೦೩೯ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೩೪೦ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨೩೩೫೧೨ಕ್ಕೆ ಏರಿಕೆಯಾಗಿದೆ. ಸೋಂಕು ಹೆಚ್ಚಳವಾದರೂ ಮರಣ ಪ್ರಮಾಣ ಇಳಿಕೆಯಾಗಿದ್ದು, ಇಂದು ನಗರದಲ್ಲಿ ಒಬ್ಬರು ಸೋಂಕಿತರು ಮಾತ್ರ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು ೧೮೩೩ ಸೋಂಕಿತರು ಗುಣಮುಖರಾಗಿದ್ದು, ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೭೩,೨೮೧ಕ್ಕೆ ಏರಿಕೆಯಾಗಿದೆ. ೨೧೪೮೧ ಸಕ್ರಿಯ ಪ್ರಕರಣಗಳಿವೆ.
ಕೋವಿಡ್ನಿಂದ ಗುಣಮುಖರಾದವರಲ್ಲಿ ಕ್ಷಯ ರೋಗ ಸಕ್ರಿಯ
ಬೆಂಗಳೂರು, ಆ. ೧೭: ಕೋವಿಡ್ನಿಂದ ಗುಣಮುಖ ರಾದವರಲ್ಲಿಯೇ ಕ್ಷಯ ರೋಗ ಸಕ್ರಿಯವಾಗಿರುವ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೋವಿಡ್ನಿಂದ ಗುಣಮುಖರಾದವರಲ್ಲಿ ೨೪ ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ. ಹೀಗೆ ಕ್ಷಯರೋಗ ಸಕ್ರಿಯತೆ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರೇ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಧಾಕರ್, ಕ್ಷಯರೋಗದ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ೧೭೧೬ ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ. ಕೋವಿಡ್ನಿಂದ ಗುಣಮುಖರಾದವರಲ್ಲಿ ೨೪ ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ ಎಂದರು. ಈ ವರ್ಷ ೧.೨೫ ಕೋಟಿ ಜನರ ಸಮೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಕರ್ನಾಟಕ ಸರ್ಕಾರ ದೇಶದಲ್ಲಿಯೇ ವಿನೂತನ ಮಾದರಿಯಲ್ಲಿ ಕ್ಷಯ ಸೋಂಕು ಪತ್ತೆ ಮಾಡುತ್ತಿದೆ. ಸಕ್ರಿಯ ಕ್ಷಯ ರೋಗ ಪ್ರಕರಣಗಳು ಕೋವಿಡ್ನಿಂದ ಹೊರ ಬಂದವರಿAದಲೇ ಬರುತ್ತಿವೆ. ಇದೇ ತಿಂಗಳು ೧೬ ರಿಂದ ೩೦ ರವರೆಗೆ ಪರೀಕ್ಷೆ ನಡೆಸಲಾಗಿದೆ ಎಂದರು. ರಾಜ್ಯದಲ್ಲಿ ೨೮ ಲಕ್ಷ ಜನರು ಕೋವಿಡ್ ಸೋಂಕಿನಿAದ ಹೊರ ಬಂದಿದ್ದಾರೆ. ಅವರಲ್ಲಿ ಕಪ್ಪು ಶಿಲೀಂದ್ರ ಪತ್ತೆ ಮಾಡುವ ರೀತಿ ಕ್ಷಯ ರೋಗದ ತಪಾಸಣೆ ಮಾಡಲಾಗುವುದು. ಕ್ಷಯ ರೋಗ ಶ್ವಾಸಕೋಶದ ಸಮಸ್ಯೆಯಿಂದ ಬರುತ್ತದೆ. ಕೋವಿಡ್ ಕೂಡ ಶ್ವಾಸಕೋಶದ ಸಮಸ್ಯೆಯಿಂದ ಬರುತ್ತದೆ. ಅದಕ್ಕಾಗಿ ಕ್ಷಯ ವ್ಯಾಪಕವಾಗಿ ಹರಡದಂತೆ ನೋಡಲು ತಪಾಸಣೆ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಇತರರಿಗೆ ಕ್ಷಯ ರೋಗ ಶೇ. ೩೩ ರಷ್ಟು ಹೆಚ್ಚಳವಾಗಿದೆ. ಯಾವ ವೃತ್ತಿಯವರಿಗೆ ಈ ರೋಗ ಬರುತ್ತದೆ ಎಂಬುದನ್ನು ನೋಡಿ ತಪಾಸಣೆ ಮಾಡಲಾಗುತ್ತಿತ್ತು. ಈಗ ಕೋವಿಡ್ನಿಂದ ಗುಣಮುಖರಾದವರ ತಪಾಸಣೆ ಮಾಡಲಾಗುತ್ತಿದೆ. ೨೮ ಲಕ್ಷ ಜನರು ಕೊವಿಡ್ ಸೋಂಕಿನಿAದ ಗುಣಮುಖರಾಗಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಕ್ಷಯ ರೋಗ ತಪಾಸಣೆ ಮಾಡಿಕೊಳ್ಳಬೇಕು. ಆರಂಭದಲ್ಲಿಯೇ ಕ್ಷಯ ರೋಗ ಪತ್ತೆಯಾದರೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.