
ಮಡಿಕೇರಿ, ಆ. ೧೭: ಮಡಿಕೇರಿಯ ಸ್ಟೋನ್ ಹಿಲ್ ಬಳಿಯ ಕಸ ಸಂಗ್ರಹಣಾ ಘಟಕದಲ್ಲಿ ಸಂಗ್ರಹಗೊAಡಿರುವ ಕಸದ ರಾಶಿಯ ರಕ್ಷಣೆಗೆ ಸಂಬAಧಿಸಿದAತೆ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಕೆಲಸಕ್ಕೆ ಅಡ್ಡಿಪಡಿಸಿದ ಜನಪ್ರತಿನಿಧಿಗಳ ಹೆಸರುಗಳ ಸಹಿತ ಅಫಿಡಾವಿಟ್ ಸಲ್ಲಿಸುವಂತೆ ನಗರಸಭೆ ಆಯುಕ್ತರಿಗೆ ಹಾಗೂ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ಮತ್ತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿದೆ.
ಕಸದ ರಾಶಿಯ ರಕ್ಷಣೆಗೆ ಸಂಬAಧಿಸಿದAತೆ ಸ್ಟೋನ್ ಹಿಲ್ ಬಳಿ ಚರಂಡಿ ನಿರ್ಮಾಣ, ಟಾರ್ಪಲಿನ್ ಹಾಕಲಾಗಿದೆ ಎಂಬದು ಸೇರಿದಂತೆ ಇತರ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅಫಿಡಾವಿಟ್ ಸಲ್ಲಿಸಿದ್ದ ನಗರಸಭೆ ನಂತರದಲ್ಲಿ ಕಾಮಗಾರಿ ಆರಂಭಿಸಿತ್ತು. ಆದರೆ ಇದು ಸುಳ್ಳು ಮಾಹಿತಿ ಎಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಎಸ್.ಆರ್.ವಿ.ಕೆ. ಸಂಘ ನ್ಯಾಯಾಲಯಕ್ಕೆ ಮನವರಿಕೆ ಮಾಡಿತ್ತು. ಈ ಸಂಬAಧ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿದ್ದರಿಂದ ನಗರಸಭೆ ಆಯುಕ್ತರು ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಸ್ಥಳಕ್ಕೆ ಶಾಸಕರು, ಜನಪ್ರತಿನಿಧಿಗಳು ಆಗಮಿಸಿ ಕೆಲಸಕ್ಕೆ ತಡೆಯೊಡ್ಡಿದ್ದಾಗಿ ಅಫಿಡಾವಿಟ್ ಸಲ್ಲಿಸಿದ್ದರು. ಇದರಿಂದ ಅಸಮಾಧಾನ ಗೊಂಡ ಹಿರಿಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರುಗಳ ನ್ನೊಳಗೊಂಡ ಪೀಠವು ಪ್ರಕರಣವನ್ನು ನ್ಯಾಯಾಲಯ ನಿರ್ವಹಣೆ ಮಾಡುತ್ತಿರುವಾಗ ಜನಪ್ರತಿನಿಧಿಗಳು ಮಧ್ಯ ಪ್ರವೇಶ ಮಾಡಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಲ್ಲದೆ ಈ ಬಗ್ಗೆ ಸಮಜಾಯಿಷಿಕೆ ನೀಡುವಂತೆ ಅರ್ಜಿದಾರರಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಅರ್ಜಿದಾರರು ತಾವುಗಳು ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ದಿರುವುದಿಲ್ಲ. ಅವರುಗಳೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಅಫಿಡಾವಿಟ್ ಸಲ್ಲಿಸಿದ್ದರು. ಈ ಸಂಬAಧ ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಯಾವ ಜನಪ್ರತಿನಿಧಿಗಳು ಕೆಲಸಕ್ಕೆ ಅಡ್ಡಿಪಡಿಸಿದ್ದಾರೆಂದು ಹೆಸರು ಉಲ್ಲೇಖಿಸಿ ಅಫಿಡಾವಿಟ್ ಸಲ್ಲಿಸಬೇಕು. ಮುಂದಿನ ಮೂರು
(ಮೊದಲ ಪುಟದಿಂದ) ವಾರದೊಳಗಡೆ ಅಫಿಡಾವಿಟ್ ಸಲ್ಲಿಸಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ನಗರಸಭೆಗೆ ಸೂಚನೆ ನೀಡಿದರು.
ಇದೇ ಸಂದರ್ಭ ನೂತನವಾಗಿ ಗುರುತಿಸಿರುವ ಜಾಗದ ಬಗ್ಗೆ ನಗರಸಭೆ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭ, ಆಕ್ಷೇಪ ವ್ಯಕ್ತಪಡಿಸಿದವರು ಸೂಕ್ತ ಜಾಗ ಗುರುತಿಸಿ, ಜಾಗ ಖರೀದಿಸಲು ಹಣ ಸಂದಾಯ ಮಾಡಬೇಕು. ನಂತರವಷ್ಟೇ ಆ ವಿಚಾರದ ಬಗ್ಗೆ ಉಲ್ಲೇಖಿಸುವಂತೆ ನ್ಯಾಯಾಧೀಶರು ಸೂಚಿಸಿದರು.
ಅಲ್ಲದೆ ಸ್ಟೋನ್ ಹಿಲ್ನಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ಮತ್ತೊಮ್ಮೆ ಜಂಟಿ ಪರಿಶೀಲನೆ ಮಾಡಿ ಮುಂದಿನ ಎರಡು ವಾರದೊಳಗಡೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ? ಸಂತೋಷ್