*ವೀರಾಜಪೇಟೆ, ಆ. ೧೪: ಲಯನ್ಸ್ ಕ್ಲಬ್ ವೀರಾಜಪೇಟೆ ೨೦೨೦-೨೧ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ವೀರಾಜಪೇಟೆ ಹಿರಿಯ ವಕೀಲ ಬಿ.ಎಸ್. ಪುಷ್ಪರಾಜ್, ಕಾರ್ಯದರ್ಶಿ ಯಾಗಿ ಪ್ರವೀಣ್‌ಕುಮಾರ್ ಎ.ಸಿ. ಆಯ್ಕೆಯಾದರು. ಆಡಳಿತ ಮಂಡಳಿಗೆ ಮಡಿಕೇರಿ ಲಯನ್ಸ್ ಕ್ಲಬ್‌ನ ನಿರಂಜನ್ ಎಂ.ಎ. ಪದಗ್ರಹಣ ನೆರವೇರಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಅನೇಕ ಯುವಜನರು ಲಯನ್ಸ್ ಕ್ಲಬ್‌ಗೆ ಸೇರ್ಪಡೆ ಯಾಗುತ್ತಿದ್ದಾರೆ. ಅವರಿಗೆ ಅತ್ಯಂತ ವಿಶಾಲವಾದ ಅರ್ಥ ಹೊಂದಿರುವ ಲಯನ್ಸ್ ಸಂಸ್ಥೆಯ ಬಗ್ಗೆ ತಿಳಿಸಿ ಕೊಡುವ ಪ್ರಯತ್ನ ಹಿರಿಯ ಸದಸ್ಯರಿಂದ ಆಗಬೇಕು ಎಂದರು.

ಲಯನ್ಸ್ ಸಂಸ್ಥೆಯ ಮೂಲಕ ಕೆಲಸಗಳನ್ನು ಮಾಡುವಾಗ ಕೇವಲ ಚಪ್ಪಾಳೆಗೋಸ್ಕರ ಕೆಲಸ ಮಾಡಬಾರದು. ತಾವು ಮಾಡುವ ಕೆಲಸ ಸಮಾಜದ ಕಟ್ಟಕಡೆಯ ಮನುಷ್ಯನ ಬಾಳಲ್ಲಿ ಬೆಳಕು ಮೂಡಿಸುವ ಹಾಗಿರಬೇಕು ಎಂದರು.

ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎಸ್. ಪುಷ್ಪರಾಜ್ ಅವರು ಕಳೆದ ವರ್ಷದ ಕ್ಲಬ್‌ನ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ಕಾವೇರಪ್ಪ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸ ಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಡುಗೊರೆಗಳನ್ನು ನೀಡಲಾಯಿತು.

ನೂತನ ಪದಾಧಿಕಾರಿಗಳಾಗಿ, ಬಬ್ಬು ಸೋಮಣ್ಣ ಪಿ.ಪಿ., ರತನ್ ಮಾದಪ್ಪ ಕೆ.ಎಸ್., ಪೌಲ್ ಕ್ಸೇವಿಯರ್, ವಿಕ್ರಮ್ ಚೆಂಗಪ್ಪ, ಪ್ರಸನ್ನ ಎ.ಪಿ., ಸುಬ್ರಮಣಿ ಎ.ಪಿ., ಸೋಮಯ್ಯ ಕೆ.ಎಂ., ಮೋಹನ್ ರೈ, ಅಂಬಿ ಕೃಷ್ಣಮೂರ್ತಿ, ಗಣಪತಿ ಬಿ.ಪಿ., ಸುರೇಶ್ ಎಂ.ಎA., ಗಿಲ್ ಸೋಮಯ್ಯ, ಸುಬ್ಬಯ್ಯ ಪಿ., ನಿಯಾಜ್ ಕೆ.ಪಿ., ಅಜಿತ್ ಎ.ಎ., ಪ್ರತಾಪ್ ಚಿನ್ನಪ್ಪ ಪಿ.ಕೆ., ಪುಟ್ಟಿಚಂಡ ನರೇಂದ್ರ, ತ್ರಿಶ್ಯೂ ಗಣಪತಿ ಕಾರ್ಯನಿರ್ವಹಿಸಲಿದ್ದಾರೆ.

ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಪುಷ್ಪರಾಜ್ ಬಿ.ಎಸ್. ಲಯನ್ಸ್ ಕ್ಲಬ್‌ನ ಸದಸ್ಯರ ನಿರೀಕ್ಷೆಗೆ ತಕ್ಕ ಹಾಗೇ ಕೆಲಸ ಮಾಡುವುದಾಗಿ ತಿಳಿಸಿದರು. ನಿರ್ಗಮಿತ ಅಧ್ಯಕ್ಷ ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ, ಲಯನ್ಸ್ ಕ್ಲಬ್ ಪ್ರಮುಖರಾದ ತ್ರಿಶೂಲ್ ಗಣಪತಿ, ಅಂಬೆಕಲ್ ನವೀನ್, ಧನು ಉತ್ತಯ್ಯ, ಪ್ರವೀಣ್ ಕುಮಾರ್, ಡಾ. ಪಂಚಮ್, ಪ್ರಿಯದರ್ಶಿನಿ ಪುಷ್ಪರಾಜ್ ಇದ್ದರು. ಧರ್ಮಶೀಲ ಪ್ರಾರ್ಥನೆ ಮಾಡಿದರು. ಪ್ರಿಯದರ್ಶಿನಿ ಪುಷ್ಪರಾಜ್ ಅತಿಥಿ ಪರಿಚಯ ಮಾಡಿದರು.