ಸೋಮವಾರಪೇಟೆ, ಆ. ೧೪: ದೀನ್ ದಯಾಳ್ ಅಂತ್ಯೋದಯ ಯೋಜನೆಯ ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೧೮ ರಿಂದ ೩೫ ವರ್ಷ ವಯಸ್ಸಿನೊಳಗಿನ ನಿರುದ್ಯೋಗಿ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಯೋಜನೆಯಡಿ ವಿವಿಧ ಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಈಗಾಗಲೇ ಪಟ್ಟಣ ಪಂಚಾಯಿತಿ ಕಚೇರಿಯಿಂದ ರಚಿತಗೊಂಡ ಉಳಿತಾಯ ಗುಂಪುಗಳಿಗೆ ಬ್ಯಾಂಕಿನಿAದ ಸಾಲ ಸೌಲಭ್ಯ ಹಾಗೂ ಹೊಸದಾಗಿ ಮಹಿಳಾ ಉಳಿತಾಯ ಗುಂಪು ರಚನೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಭಾವಚಿತ್ರ ನೀಡಬೇಕು. ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಬಹುದೆAದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.
ಸಂಕಲ್ಪ ಸಿದ್ದಿ ಸಾಲ ಯೋಜನೆ: ಸೊಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆತ್ಮನಿರ್ಭರ್ ಯೋಜನೆಯಡಿ “ಸಂಕಲ್ಪ ಸಿದ್ಧಿ” ವಿಶೇಷ ಸಾಲದ ಯೋಜನೆಯಡಿ ೨೦೨೧ರ ಜುಲೈ ೧ ರಿಂದ ಆಗಸ್ಟ್ ೧೫ರ ವರೆಗೆ ೨ನೇ ಬಾರಿಗೆ ಸಾಲ ಸೌಲಭ್ಯ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ೧೦ ಸಾವಿರ ರೂ. ಸಾಲ ಪಡೆದು ಪೂರ್ಣ ಪ್ರಮಾಣದಲ್ಲಿ ಮರುಪಾವತಿ ಮಾಡಿದ ವ್ಯಾಪಾರಿಗಳಿಗೆ ೨ನೇ ಬಾರಿಗೆ ರೂ. ೨೦ ಸಾವಿರ ಸಾಲ ನೀಡಲಾಗುವುದು. ಅರ್ಹ ಅರ್ಜಿದಾರರು ನಿಗದಿತ ಅವಧಿಯಲ್ಲಿ ಮೊದಲನೆ ಸಾಲ ಮರುಪಾವತಿ ಮಾಡಿರುವ ಬಗ್ಗೆ ಬ್ಯಾಂಕಿನಿAದ ಪ್ರಮಾಣ ಪತ್ರ ಪಡೆದು ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯಿತಿ ಕಚೆೆÃರಿಯಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಸಹಾಯಧನಕ್ಕೆ
ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕನಿಷ್ಟ ೨ ಮಿಶ್ರತಳಿ ಹಸುಗಳನ್ನು ಹೊಂದಿರುವ ಹೈನುಗಾರರಿಂದ ಒಬ್ಬರಿಗೆ ಒಂದು ವಿದ್ಯುತ್ ಚಾಲಿತ ೧ ಬಕೆಟ್ ಸಾಮರ್ಥ್ಯದ ಹಾಲು ಕರೆಯುವ ಯಂತ್ರ ಮತ್ತು ಎರಡು ರಬ್ಬರ್ ಮ್ಯಾಟ್ಗಳನ್ನು ಶೇ.೯೦ ರ ಸಹಾಯಧನ ಮತ್ತು ಶೇ.೧೦ ರ ಫಲಾನುಭವಿಯ ವಂತಿಗೆಯೊAದಿಗೆ ನೀಡುವ ಘಟಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಫಲಾನುಭವಿಗಳು ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಮಡಿಕೇರಿ ೯೪೪೮೭೬೪೭೨೭, ವೀರಾಜಪೇಟೆ ೭೬೨೪೯೬೨೧೦೦, ಪೊನ್ನಂಪೇಟೆ ೯೪೪೯೦೮೧೩೪೩, ಸೋಮವಾರಪೇಟೆ ೯೪೪೮೬೫೫೬೬೦, ಕುಶಾಲನಗರ ೮೯೫೧೪೦೪೦೨೫ ಇವರನ್ನು ಸಂಪರ್ಕಿಸಬಹುದು. ಅರ್ಜಿಯನ್ನು ಭರ್ತಿ ಮಾಡಿ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪಿ. ಸುರೇಶ್ ಭಟ್ ತಿಳಿಸಿದ್ದಾರೆ.
ಮಡಿಕೇರಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ
ಮಡಿಕೇರಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ೨೦೨೧-೨೨ನೇ ಸಾಲಿನ ಪ್ರವೇಶದ ಸಲುವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತಿ ಇರುವ ಹಾಗೂ ಎಸ್ಎಸ್ಎಲ್ಸಿ ಉತ್ತೀರ್ಣಗೊಂಡಿರುವ ಅಭ್ಯರ್ಥಿಗಳು ತಾ. ೨೭ ರವರೆಗೆ ಇಲಾಖೆಯ ವೆಬ್ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮೂಲಕ ಆನ್-ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ ಅಥವಾ ದೂರವಾಣಿ ಸಂಖ್ಯೆ ೦೮೨೭೨-೨೯೮೩೫೭ ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಅಕೌಂಟೆAಟ್ ಕಂ ಕಚೇರಿ ಸಹಾಯಕ-ಕಚೇರಿ ಜವಾನ ಹುದ್ದೆ
ಕೊಡಗು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ ಅಕೌಂಟೆAಟ್ ಕಂ ಕಚೇರಿ ಸಹಾಯಕ ಮತ್ತು ಕಚೇರಿ ಜವಾನ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯು ಕರಾರಿನ ಆಧಾರದ ಮೇಲಿದ್ದು ಆಯ್ಕೆಯಾದ ಸಿಬ್ಬಂದಿಗಳಿಗೆ ಮಾಸಿಕ ಗೌರವಧನ ನೀಡಲಾಗುತ್ತದೆ. ಅಕೌಂಟೆAಟ್ ಕಂ ಕಚೇರಿ ಸಹಾಯಕ ಹುದ್ದೆ-೧ ಆಗಿದ್ದು, ವಿದ್ಯಾರ್ಹತೆ ಮತ್ತು ಅನುಭವ ಬಿ.ಕಾಂ ಪದವಿ ಹೊಂದಿರಬೇಕು, ಲೆಕ್ಕ ಪತ್ರಗಳನ್ನು ನಿರ್ವಹಿಸುವಲ್ಲಿ/ ಅಕೌಂಟೆAಟ್ ಹುದ್ದೆಯಲ್ಲಿ ಕನಿಷ್ಟ ೫ ವರ್ಷಗಳ ಅನುಭವ ಇರಬೇಕು, ಲೆಕ್ಕ ಪತ್ರದಲ್ಲಿ ಬ್ಯಾಂಕ್ ವ್ಯವಹಾರಗಳನ್ನು, ಸರ್ಕಾರದ ಲೆಕ್ಕ ಪತ್ರಗಳನ್ನು ತಯಾರಿಸುವ ಲೆಕ್ಕ ಪತ್ರಗಳಿಗೆ ಸಂಬAಧಿಸಿದ ದಾಖಲೆ, ರಿಜಿಸ್ಟರ್ಗಳ ಕುರಿತು ಮಾಹಿತಿಯನ್ನು ಹೊಂದಿರಬೇಕು, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುವ ಹಾಗೂ ಬರೆಯುವಲ್ಲಿ ಉತ್ತಮ ಶೈಲಿಯನ್ನು ಹೊಂದಿರಬೇಕು, ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು, ಟ್ಯಾಲಿ ಸಾಫ್ಟ್ವೇರ್ ಅನ್ನು ಉಪಯೋಗಿಸುವ ಜ್ಞಾನ ಮತ್ತು ಕೌಶಲ್ಯ ಇರಬೇಕು. ಕಚೇರಿ ಪತ್ರ ವ್ಯವಹಾರಗಳ, ಲೆಕ್ಕ ಪತ್ರಗಳ ವ್ಯವಹಾರಗಳನ್ನು ಗಣಕೀಕೃತದಲ್ಲಿ ನಮೂದಿಸಿ ಕೇಂದ್ರ ಕಚೇರಿಗಳಿಗೆ ಗಣಕ ಯಂತ್ರದ ಮೂಲಕ ಕಳುಹಿಸುವ ಕುರಿತು ಪರಿಣತಿ ಹೊಂದಿರಬೇಕು. ಮಾಸಿಕ ಗೌರವಧನ ರೂ. ೧೩,೩೧೦ ಗರಿಷ್ಠ ವಯೋಮಿತಿ ೪೦ ವರ್ಷ ಮೀರಿರಬಾರದು (ಈ ಹುದ್ದೆಗೆ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ. ಆದರೆ ಇವರು ಕಡ್ಡಾಯವಾಗಿ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು). ಕಚೇರಿ ಜವಾನ ಹುದ್ದೆ -೧ ಈ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ ಮತ್ತು ಅನುಭವ ಎಸ್ಎಸ್ಎಲ್ಸಿ ಉತ್ತೀರ್ಣ ಹೊಂದಿರಬೇಕು, ಕಚೇರಿಯಲ್ಲಿ ಹಾಗೂ ಇತರೆ ಶುಚಿತ್ವ ಕಾಪಾಡುವ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು, ಓದಲು, ಬರೆಯಲು ಬರಬೇಕು. ಮಾಸಿಕ ಗೌರವ ಧನ ರೂ. ೧೦,೬೪೮ ಗರಿಷ್ಠ ವಯೋಮಿತಿ ೪೦ ವರ್ಷ ಮೀರಿರಬಾರದು.
ಅಭ್ಯರ್ಥಿಗಳು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ವಿವರಗಳನ್ನು ನಮೂದಿಸಿ ಎಲ್ಲಾ ದಾಖಲೆಗಳ ದೃಢೀಕೃತ ನಕಲು ಪ್ರತಿಗಳನ್ನು ಲಗತ್ತಿಸಿ, ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕೊಡಗು ಜಿಲ್ಲೆ ಮಡಿಕೇರಿ ಇವರ ಹೆಸರಿಗೆ ಅರ್ಜಿ ಬರೆದು, ಈ ಅರ್ಜಿಯನ್ನು ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಇಲಾಖೆ, ಮೊದಲನೆ ಮಹಡಿ, ಕೊಠಡಿ ಸಂಖ್ಯೆ ೧೧, ಜಿಲ್ಲಾಡಳಿತ ಭವನ, ಕೊಡಗು ಜಿಲ್ಲೆ ಮಡಿಕೇರಿ ಇವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ತಾ. ೨೧ ಕೊನೆಯ ದಿನವಾಗಿದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು ತಿಳಿಸಿದ್ದಾರೆ.