ಮಡಿಕೇರಿ, ಆ. ೧೪: ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ದಬ್ಬಡ್ಕ ಶಾಖಾ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಎರಡು ದಿನಗಳ ಹಿಂದೆ ದುಷ್ಕರ್ಮಿಗಳು ಎರಡು ಬೃಹತ್ ಗಾತ್ರದ ಬೂರುಗು ಹಾಗೂ ಹುಲುವೆ ಮರಗಳನ್ನು ಕಡಿಯಲು ಪ್ರಯತ್ನಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಸAಪಾಜೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ದಬ್ಬಡ್ಕ ನಿವಾಸಿಗಳಾದ ಹೆಚ್.ಕೆ. ಹೇಮಾದರ (೩೪), ಪ್ರದೀಪ್ ಕೆ.ವಿ. (೩೭) ಹಾಗೂ ಹರಿಕೃಷ್ಣ ಡಿ.ಆರ್. (೨೭) ಇವರುಗಳನ್ನು ಬಂಧಿಸಿದ್ದಾರೆ.