ಸುಂಟಿಕೊಪ್ಪ, ಆ. ೧೩: ಸದಾ ನೊಂದವರ, ಅನಾಥರ ಸೇವೆ ಮಾಡುತ್ತಿರುವ ಸಮಾಜ ಸೇವಕ ರಮೇಶ್ ಅವರು ಯಾವುದೇ ಕಚೇರಿಗಳಿಗೆ ಹೋದರೂ ಎಷ್ಟು ಓದಿದ್ದೀರಾ? ಎಂದು ಕೇಳುತ್ತಿದ್ದ ಪ್ರಸಂಗಗಳನ್ನು ಕೇಳಿ ಏನಾದರೂ ಮಾಡಿ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲೇಬೇಕೆಂಬ ಛಲದಿಂದ ತನ್ನ ಮಗಳೊಟ್ಟಿಗೆ ತಾವು ಕೂಡ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ೫೦೩ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ. ಇವರೊಂದಿಗೆ ಮಗಳು ಸಿಂಚನಾ ಕೂಡ ೫೧೮ ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದಾಳೆ. ವಿದ್ಯೆ ಪಡೆಯಲು, ಕಲಿಯಲು ವಯಸ್ಸಿನ ಇತಿಮಿತಿ ಸಮಸ್ಯೆ ಅಡ್ಡಿಯಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇವರ ಈ ಸಾಧನೆಗೆ ಸುಂಟಿಕೊಪ್ಪ ಜನತೆ, ಸ್ನೇಹಿತರು, ಒಡನಾಡಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.