ಕುಶಾಲನಗರ, ಆ. ೧೩: ಲಕ್ಷಾಂತರ ಮೊತ್ತದ ಹಣದ ವಹಿವಾಟು ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ಕುಶಾಲನಗರದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಬಗ್ಗೆ ತಿಳಿದುಬಂದಿದೆ.
ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಹಣದ ವಹಿವಾಟು ಕುಶಾಲನಗರ ಬ್ಯಾಂಕ್ ಒಂದರ ಮೂಲಕ ನಡೆದಿದ್ದು, ಇದಕ್ಕೆ ಸಂಬAಧಿಸಿದ ವ್ಯಕ್ತಿಯ ಖಾತೆ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ೨ ದಿನಗಳ ಹಿಂದೆ ಕುಶಾಲನಗರಕ್ಕೆ ಆಗಮಿಸಿದ ತೆಲಂಗಾಣ ಪೊಲೀಸರ ತಂಡ ಕುಶಾಲನಗರದ ಇಬ್ಬರು ಯುವಕರನ್ನು ತೆಲಂಗಾಣಕ್ಕೆ ಕರೆದೊಯ್ದಿದ್ದು, ಈ ಪ್ರಕರಣಕ್ಕೆ ಸಂಬAಧಿಸಿದAತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯ ಬೇಕಾಗಿದೆ ಯುವಕನೊಬ್ಬನ ಖಾತೆಯಲ್ಲಿ
(ಮೊದಲ ಪುಟದಿಂದ) ಕೆಲವೇ ದಿನಗಳಲ್ಲಿ ಐವತ್ತು ಲಕ್ಷಕ್ಕೂ ಅಧಿಕ ಮೊತ್ತದ ಹಣ ಬಂದಿದ್ದು ಹಣದ ಮೂಲ ಮತ್ತು ಇದಕ್ಕೆ ಸಂಬAಧಿಸಿದAತೆ ಚಟುವಟಿಕೆಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಜಾರ್ಖಂಡ್ ಮೂಲದ ಕೆಲವು ವ್ಯಕ್ತಿಗಳು ಶಾಮೀಲಾಗಿರುವ ಶಂಕೆ ವ್ಯಕ್ತಗೊಂಡಿದ್ದು, ಬ್ಯಾಂಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆಯೂ ಸಂಶಯ ವ್ಯಕ್ತಗೊಂಡಿದೆ. ಇದೀಗ ಅಂತರರಾಜ್ಯ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಬಗ್ಗೆ ತಮಗೆ ಯಾವುದೇ ಮಾಹಿತಿ ದೊರಕಿಲ್ಲ ಎಂದು ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಕುಮಾರ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
- ಸಿಂಚು