ಸೋಮವಾರಪೇಟೆ, ಆ. ೧೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಡಿಗೆ ವಾಹನಗಳ ನಿಲುಗಡೆಗೆ ನಿಲ್ದಾಣ ಒದಗಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೆöÊರ‍್ಸ್ ಆರ್ಗನೈಸೇಷನ್‌ನ ತಾಲೂಕು ಸಮಿತಿ ವತಿಯಿಂದ ಪ.ಪಂ.ಗೆ ಮನವಿ ಸಲ್ಲಿಸಲಾಯಿತು.

ಪ್ರತಿನಿತ್ಯ ಬಾಡಿಗೆ ಮಾಡಿ ಕೊಂಡು ಜೀವನ ಸಾಗಿಸುತ್ತಿರುವ ಟ್ಯಾಕ್ಸಿ ಚಾಲಕರು, ಅದರಿಂದ ಬರುವ ಆದಾಯದಿಂದಲೇ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿದ್ದೇವೆ. ಇಂತಹ ಚಾಲಕರಿಗೆ ಪಟ್ಟಣದಲ್ಲಿ ತಮ್ಮ ವಾಹನಗಳನ್ನು ನಿಲುಗಡೆಗೊಳಿಸಲು ನಿಗದಿತ ಸ್ಥಳಾವಕಾಶವಿಲ್ಲ. ಈ ಹಿನ್ನೆಲೆ ಪಟ್ಟಣ ವ್ಯಾಪ್ತಿಯಲ್ಲಿ ನಿರ್ದಿಷ್ಟ ಜಾಗವನ್ನು ನಿಲ್ದಾಣಕ್ಕೆ ಒದಗಿಸ ಬೇಕೆಂದು ಸದಸ್ಯರುಗಳು ಮನವಿ ಮಾಡಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿಗದಿತ ಜಾಗವನ್ನು ನೋಟಿಫೈ ಮಾಡಿಸಿಕೊಡಬೇಕೆಂದು ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಆರ್. ಮಂಜುನಾಥ್, ಖಜಾಂಚಿ ಕೆ.ಎನ್. ದೀಪಕ್, ರಕ್ತದಾನ ಸಮಿತಿಯ ಸಂಚಾಲಕ ಸುರೇಶ್, ಸದಸ್ಯ ಸುದೀಪ್ ಅವರುಗಳು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರು.