ಮಡಿಕೇರಿ, ಆ. ೧೪: ಕೊಡಗು ಪ್ರೆಸ್‌ಕ್ಲಬ್ ೨೦೨೧- ೨೪ನೇ ಸಾಲಿನ ಆಡಳಿತ ಮಂಡಳಿ ರಚನೆಗೆ ಸಂಬAಧಿಸಿದAತೆ ಚುನಾವಣಾ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಒಟ್ಟು ೧೨ ನಿರ್ದೇಶಕ ಸ್ಥಾನ (೧ ಸ್ಥಾನ ಮಹಿಳೆಯರಿಗೆ ಮೀಸಲು) ದ ಆಯ್ಕೆಗೆ ಸೆಪ್ಟೆಂಬರ್ ೨ ರಂದು ಚುನಾವಣೆ ನಡೆಯಲಿದೆ.

ತಾ.೨೧ ರಂದು ಕರಡು ಮತದಾರರ ಪಟ್ಟಿ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿರುವವರ ಕರಡು ಪಟ್ಟಿ ಪ್ರೆಸ್ ಕ್ಲಬ್ ನೋಟೀಸ್ ಬೋರ್ಡ್ನಲ್ಲಿ ಪ್ರಕಟಿಸಲಾಗುತ್ತದೆ. ತಾ.೨೩ ರವರೆಗೆ ಆಕ್ಷೇಪ ಸಲ್ಲಿಸಲು ಅವಕಾಶ ಇರುತ್ತದೆ. ತಾ.೨೫ ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

ಚುನಾವಣಾಧಿಕಾರಿ ಚೆಕ್ಕೇರ ಪ್ರಮೋದ್ ತಾ. ೨೬ ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ತಾ. ೨೬ ರಂದು ಬೆಳಗ್ಗೆ ೧೦ ಗಂಟೆಯಿAದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ತಾ. ೨೮ ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಪ್ರತಿದಿನ ಮಧ್ಯಾಹ್ನ ೧೨ ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.

ತಾ. ೨೮ ರಂದು ಮಧ್ಯಾಹ್ನ ೩ ಗಂಟೆಗೆ ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ತಾ. ೨೯ ರಂದು ಅಪರಾಹ್ನ ೪ ಗಂಟೆಯವರೆಗೆ ನಾಮಪತ್ರ ಹಿಂಪಡೆಯುವ ಅವಕಾಶವಿದೆ. ಅಂದು ೪.೩೦ ಗಂಟೆಗೆ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

ಸೆಪ್ಟೆಂಬರ್ ೨ ರಂದು ಮಧ್ಯಾಹ್ನ ೧೨.೩೦ ರಿಂದ ೨ ಗಂಟೆಯವರೆಗೆ ಮತದಾನ ನಡೆಯಲಿದೆ. ಮಧ್ಯಾಹ್ನ ೩ ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ.

ಸತತವಾಗಿ ೨ ವರ್ಷ ಪೂರ್ಣಗೊಳಿಸಿದ ಸದಸ್ಯರಾಗಿ ೩ನೇ ವರ್ಷಕ್ಕೆ ಸದಸ್ಯತ್ವ ನವೀಕರಿಸಿ ಕೊಂಡವರು ಮತದಾನ ಹಕ್ಕು ಪಡೆಯುತ್ತಾರೆ. ಸತತ ೩ ವರ್ಷ ಪೂರ್ಣಗೊಳಿಸಿದ ಸದಸ್ಯರಾಗಿ ೪ನೇ ವರ್ಷಕ್ಕೆ ಸದಸ್ಯತ್ವ ನವೀಕರಿಸಿ ಕೊಂಡವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು.

ಚುನಾವಣೆಯಲ್ಲಿ ಸ್ಪರ್ಧಿಸುವವರು ಕೊಡಗು ಪ್ರೆಸ್ ಕ್ಲಬ್ ನ ಯಾವುದೇ ಶಿಸ್ತಿನ ಕ್ರಮ ಅಥವಾ ಪತ್ರಿಕಾ ಮಾನನಷ್ಟ ಮೊಕದ್ದಮೆ ಹೊರತು ಪಡಿಸಿದಂತೆ ಇತರ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗಿರಬಾರದು.