ಸೋಮವಾರಪೇಟೆ,ಆ.೧೩: ಕಳೆದ ಒಂದು ತಿಂಗಳಿನಿAದ ಸ್ಥಗಿತಗೊಂಡಿದ್ದ ಆರ್‌ಟಿಸಿ ವಿತರಣೆ ಕಾರ್ಯ ಶುಕ್ರವಾರದಿಂದ ಮರು ಚಾಲನೆಗೊಂಡಿದೆ.

ಆರ್‌ಟಿಸಿ ತೆಗೆಯಲು ತಾಲೂಕು ಕಚೇರಿಗೆ ಡಿಜಿಟಲ್ ಕಾರ್ಡ್ ನೀಡಲಾಗಿದ್ದು, ಇದರ ಅವಧಿ ಮುಕ್ತಾಯವಾಗಿರುವುದರಿಂದ ಸಮಸ್ಯೆ ಉಂಟಾಗಿತ್ತು. ಬೆಂಗಳೂರಿಗೆ ಡಿಜಿಟಲ್ ಕಾರ್ಡ್ ಕಳುಹಿಸಲಾಗಿದ್ದು, ಅಪ್‌ಡೇಟ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರೊಂದಿಗೆ ಟೆಂಡರ್ ಅವಧಿಯೂ ಮುಕ್ತಾಯವಾಗಿರುವುದರಿಂದ ಸಾರ್ವಜನಿಕರಿಗೆ ಆರ್‌ಟಿಸಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಚೇರಿ ಸಿಬ್ಬಂದಿಗಳು ಹೇಳುತ್ತಿದ್ದರು.

ಇದೀಗ ಬೆಂಗಳೂರಿನಿAದ ಡಿಜಿಟಲ್ ಕಾರ್ಡ್ ಬಂದಿದ್ದು, ಇಂದು ಪೂರ್ವಾಹ್ನ ೧೧.೩೦ರಿಂದ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ರೈತರಿಗೆ ಆರ್‌ಟಿಸಿ ನೀಡಲಾಗುತ್ತಿದೆ. ಕಳೆದ ಒಂದು ತಿಂಗಳಿನಿAದ ಆರ್‌ಟಿಸಿ, ಮ್ಯೂಟೇಷನ್ ಕಾಪಿ ಸಿಗದೇ ರೈತರು ಹಾಗೂ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದರು. ರೈತಪರ ಸಂಘಟನೆಗಳೂ ಸಹ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದವು. ಆರ್‌ಟಿಸಿ ಸಿಗದೇ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಾ.೧೩ರ ‘ಶಕ್ತಿ’ಯಲ್ಲಿ ವರದಿಯ ಮೂಲಕ ಬೆಳಕು ಚೆಲ್ಲಲಾಗಿತ್ತು.

ಇದೀಗ ತಾಲೂಕು ಕಚೇರಿಯಲ್ಲಿ ಆರ್‌ಟಿಸಿ ನೀಡಲಾಗುತ್ತಿದ್ದು, ಆ ಮೂಲಕ ರೈತರ ಆರ್‌ಟಿಸಿ ಸಮಸ್ಯೆ ಬಗೆಹರಿದಿದೆ. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಆರ್‌ಟಿಸಿ ಪಡೆಯುತ್ತಿದ್ದಾರೆ.