ಕಣಿವೆ, ಆ. ೧೪: ಇಲ್ಲಿಗೆ ಸಮೀಪದ ಚಿಕ್ಕಅಳುವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಶಾಲನಗರದ ಸರ್ಕಾರಿ ಆಯುರ್ವೇದ ಹಾಗೂ ಹೋಮಿ ಯೋಪತಿ ಆಸ್ಪತ್ರೆ ವತಿಯಿಂದ ರಾಷ್ಟಿçÃಯ ಆರೋಗ್ಯ ಅಭಿಯಾನ ಯೋಜನೆಯಡಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಹಿರಿಯರಾದ ಬೋಜಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಶೋಭಾ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಪಂಚಾಯಿತಿ ಸದಸ್ಯೆ ಶೋಭಾ, ಆಯುರ್ವೇದ ಆಸ್ಪತ್ರೆ ವತಿಯಿಂದ ಗ್ರಾಮದಲ್ಲಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ಶಿಬಿರ ಅತ್ಯುಪಯುಕ್ತ ವಾದುದು. ಇದರಿಂದಾಗಿ ಗ್ರಾಮದ ಬಡ ನಿವಾಸಿಗಳಿಗೆ ಅನುಕೂಲವಾಗಿದೆ ಎಂದರು.

ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ಸರಸ್ವತಿ ಮಾತನಾಡಿ, ಗ್ರಾಮೀಣ ಜನರಿಗೆ ಸರ್ಕಾರದ ಉಚಿತ ಆರೋಗ್ಯ ಸೇವೆಗಳು ಕಡ್ಡಾಯವಾಗಿ ತಲುಪಬೇಕೆಂಬ ಅಪೇಕ್ಷೆಯಿಂದ ಗ್ರಾಮೀಣ ಪ್ರದೇಶಗಲ್ಲಿ ಉಚಿತ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.

ಮತ್ತೋರ್ವ ವೈದ್ಯೆ ಹೋಮಿಯೋಪತಿ ವಿಭಾಗದ ಡಾ. ಸೌಪರ್ಣಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು, ಮಹದೇವ್, ಆಸ್ಪತ್ರೆಯ ಸಿಬ್ಬಂದಿಗಳಾದ ರಾಜಕುಮಾರ್, ಪುಷ್ಪ, ರಾಜಕುಮಾರ್ ಮೊದಲಾದವರಿದ್ದರು.

ಇದೇ ಸಂದರ್ಭ ಈ ಭಾಗದ ೧೫೦ಕ್ಕೂ ಹೆಚ್ಚಿನ ಆಶಾ ಕಾರ್ಯಕರ್ತೆಯರು ಪಾಲ್ಗೊಂಡು ಪೂರಕ ಔಷಧಿಗಳನ್ನು ಉಚಿತವಾಗಿ ಪಡೆದುಕೊಂಡರು.