ಮಡಿಕೇರಿ, ಆ. ೧೩: ಗುಜರಾತ್ ಟೂರಿಸಂ ಕಾರ್ಪೋರೇಷನ್ನ ಕರ್ನಾಟಕ ವಿಭಾಗದ ಮುಖ್ಯಸ್ಥ ಗೋಪಿ ವಿಶ್ರೋಲಿಯಾ ಅವರು ಕೊಡಗು ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರು ಗುಜರಾತ್ ಪ್ರವಾಸೀ ತಾಣಗಳಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.
ಮಡಿಕೇರಿಯಲ್ಲಿ ವಿವಿಧ ಪ್ರವಾಸೋದ್ಯಮಗಳ ಸಂಘಟನೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ಪ್ರವಾಸೋದ್ಯಮದಲ್ಲಿ ಶರವೇಗದಿಂದ ಬೆಳಯುತ್ತಿದೆ ಎಂದರು. ಇಲ್ಲಿನ ಹೋಂ ಸ್ಟೇಗಳು ಹಾಗೂ ಹೊಟೇಲ್ಗಳನ್ನೂ ಗುಜರಾತಿನಲ್ಲಿ ಪರಿಚಯಿಸುವ, ಪರಸ್ಪರರ ಸಂಸ್ಕೃತಿ, ಕಲೆ, ಆಹಾರ ಪದ್ಧತಿಗಳನ್ನು ವಿನಿಮಯ ಮಾಡುವ ಕಾರ್ಯಕ್ರಮ ರೂಪಿಸುವುದಾಗಿ ಹೇಳಿದರು.
ಸಭೆಯಲ್ಲಿ ಟರ್ಸ್ ಅಯಿಂಡ್ ಟ್ರಾವಲ್ಸ್ನ ಚೀಯಂಡ ಸತ್ಯ, ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತಶಯನ, ಹೊಟೇಲಿರ್ಸ್ ಅಸೋಸಿ ಯೇಷನ್ನ ಮಣಿ, ಜಾಹಿರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ. ದೇವಯ್ಯ, ಕಾರ್ಯದರ್ಶಿ, ನವೀನ್, ಮಾದೇಟಿರ ತಿಮ್ಮಯ್ಯ, ನೀಲ ಮೇದಪ್ಪ, ಶಾಂತಿ ದೇವರಾಜ್, ಜಯಾ ಚಿಣ್ಣಪ್ಪ, ಪಿ.ಸಿ. ಅಚ್ಚಯ್ಯ, ಕೆ.ಎಂ. ಕರುಂಬಯ್ಯ, ಮೋಂತಿ ಗಣೇಶ್, ಕಾರ್ಯಪ್ಪ, ಪಿ.ಎಸ್. ಕಾಳಪ್ಪ, ಕುಟ್ಟಪ್ಪ ಹಾಗೂ ಇತರರು ಹಾಜರಿದ್ದರು.