ಮಡಿಕೇರಿ, ಆ. ೧೪: ಕೊಡವಾಮೆರ ಕೊಂಡಾಟ ಸಂಘಟನೆಯ ಎರಡನೇ ವಾರ್ಷಿಕೋತ್ಸವ ಪ್ರಯುಕ್ತ ಸಣ್ಣಮಕ್ಕಳಿಗೆ ವಾಲಗತಾಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಅವರು ತಿಳಿಸಿದ್ದಾರೆ.
ಸಾಮಾಜಿಕ ಮಾದ್ಯಮ ವಾಟ್ಸಾಪ್ ಗುಂಪಾಗಿ ಪ್ರಾರಂಭವಾಗಿ, ನಂತರ ಒಂದು ಸಂಘಟನೆಯಾಗಿ, ಅವ್ವಪಾಜೆರ ಉಳಿಕೆ ಬೊಳ್ಚೆಕಾಯಿತ್ ಎಂಬ ಘೋಷವಾಕ್ಯದೊಂದಿಗೆ ಕೊಡವ ಭಾಷೆ, ಕಲೆ, ಸಾಹಿತ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಿರುವ ಕೊಡವಾಮೆರ ಕೊಂಡಾಟ ಸಂಘಟನೆ ತಾ. ೨೩ಕ್ಕೆ ಎರಡು ವರ್ಷಗಳು ಪೂರೈಸಲಿದೆ. ಈ ಸವಿ ನೆನಪಿಗಾಗಿ ಸಣ್ಣ ಮಕ್ಕಳಿಗೆ ವಾಲಗತಾಟ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಐದು ವರ್ಷದೊಳಗಿನ ಮಕ್ಕಳು ಗಂಡು ಹೆಣ್ಣು ಎಂಬ ಭೇದವಿಲ್ಲದೆ, ಯಾವುದೇ ವಸ್ತçಸಂಹಿತೆ ಇಲ್ಲದೆ ಐದು ನಿಮಿಷಕ್ಕೆ ಮೀರದಂತೆ ವಾಲಗತಾಟ್ ಆಡಿ ವೀಡಿಯೋ ಮಾಡಿ ಕಳುಹಿಸಬೇಕು. ವೀಡಿಯೋ ಮಾಡುವಾಗ ಮನೆಹೆಸರು, ಹೆ¸
Àರು, ಕೊಡವಾಮೆರ ಕೊಂಡಾಟ ಸಂಘಟನೆಯ ಎರಡನೇ ವರ್ಷದ ಸವಿನೆನಪಿನ ಸ್ಪರ್ಧೆಗೆ ಎಂದು ಕಡ್ಡಾಯವಾಗಿ ಹೇಳಬೇಕು. ಹೀಗೆ ಹೇಳುವುದು ಮಕ್ಕಳಿಗೆ ಕಷ್ಟವಾದರೆ, ಪೋಷಕರು ಹೇಳಬಹುದು. ಸ್ಪರ್ಧಿಗಳ ವಯಸ್ಸಿಗೆ ಆಧಾರವಾಗಿ ಜನನ ದೃಡೀಕರಣ ಪತ್ರ, ಇಲ್ಲವೇ ಆಧಾರ್ ಕಾರ್ಡ್ ಲಗತ್ತಿಸಬೇಕು. ಗೆಲ್ಲುವವರಿಗೆ ಪ್ರಥಮ ೧೫೦೦, ದ್ವಿತೀಯ ೧೦೦೦, ತೃತೀಯ ೫೦೦ರೂ ನಗದು ಹಾಗೂ ಅಭಿನಂದನಾ ಪತ್ರ ಇರಲಿದೆ. ಅಲ್ಲದೆ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನಾ ಪತ್ರ ನೀಡಲಾಗುವುದು. ಸ್ಪರ್ಧೆಯ ನಗದು ಬಹುಮಾನವನ್ನು ಮಾಳೇಟಿರ ಸೀತಮ್ಮ ವಿವೇಕ್ ಅವರು ಪ್ರಾಯೋಜಿಸಿದ್ದಾರೆ.
ಸ್ಪರ್ಧಿಗಳು ತಮ್ಮ ವೀಡಿಯೋವನ್ನು ಸ್ಪರ್ಧಾ ಸಂಚಾಲಕಿ ನೂರೇರ ಬಬಿತ ಅವರ ೯೩೯೮೯೨೭೬೦೭ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ತಾ. ೨೦ರ ರಾತ್ರಿ ಹತ್ತುಗಂಟೆಯ ಒಳಗೆ ತಲುಪಿಸಬೇಕೆಂದು ಸಂಘಟನೆಯ ಪದಾಧಿಕಾರಿಗಳು ಕೋರಿದ್ದಾರೆ.