ಸುಂಟಿಕೊಪ್ಪ, ಆ. ೧೪: ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಸಭಾಂಗಣದಲ್ಲಿ ೨೦೨೧ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಗೆ ಗೌರವ ಸಮರ್ಪಿಸಿ ಮಾತನಾಡಿದ ಸಂತ ಅಂತೋಣಿ ದೇವಾಲಯದ ಧರ್ಮ ಗುರುಗಳಾದ ರೆ.ಫಾ. ಅರುಳ್ ಸೆಲ್ವಕುಮಾರ್ ಕೊರೊನಾ ಸಂದರ್ಭ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟು ಆನ್‌ಲೈನ್ ತರಗತಿಗಳನ್ನು ನಡೆಸಿ ಮಕ್ಕಳಲ್ಲಿ ಪರೀಕ್ಷೆ ಮತ್ತು ಮಾನಸಿಕ ದೃಢತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿತ್ತು. ೧೦೮ ವಿದ್ಯಾರ್ಥಿಗಳು ಕಠಿಣ ಪರೀಕ್ಷೆಯನ್ನು ಎದುರಿಸಿದ್ದು ೮೮ ವಿದ್ಯಾರ್ಥಿಗಳು ಅತ್ತುö್ಯನ್ನತ್ತ ಶ್ರೇಣಿಯಲ್ಲಿ ತೇರ್ಗಡೆಯಾದರೆ ೨೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಈ ಸಾಧನೆಗೆ ಪೋಷಕರ ಸಹಕಾರ ಕಾರಣವಾಗಿದೆ ಎಂದರು.
ಕಾಲೇಜಿನ ಉಪನ್ಯಾಸಕಿ ಪುಷ್ಪಲತಾ ಮಾತನಾಡಿ, ನಿಮಗೆ ಸಹಾಯವಾಗುವ ಐಚ್ಛಿಕ ವಿಷಯದ ಬಗ್ಗೆ ಆರಿತು ಮುಂದಾಲೋಚಿಸಿ ಆಯ್ಕೆ ಮಾಡಬೇಕು ಎಂದರು. ಅತಿ ಹೆಚ್ಚು ಅಂಕಗಳಿಸಿದ ಗ್ಲಾನಿಯಾ ಡಿಸೋಜ (೬೨೧), ದಿಯಾ ಮಾರ್ಗರೇಟ್ (೬೧೧), ಎಂ.ಎ. ಆಶೀಫಾ (೬೧೧) ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಬಿಜು ವರ್ಗೀಸ್, ಹಮೀದ್, ಚಂದ್ರ, ಮುಖೇಶ್, ದಿನೇಶ್, ಲಕ್ಷಿö್ಮ, ಸೆವರಿನ್ ಡಿಸೋಜ, ಜುಬೇದ, ಲಕ್ಷಿö್ಮ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.