ಮಡಿಕೇರಿ, ಆ.೧೩ : ಕೊಡಗು ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸಂಬAಧಿಸಿದAತೆ ಜಿಲ್ಲಾಡಳಿತ ಸರ್ಕಾರದ ನಿರ್ದೇಶನದಂತೆ ಕಾಲ ಕಾಲಕ್ಕೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಆದೇಶದಂತೆ ಕೋವಿಡ್ ೧೯ ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಹೆಚ್ಚುವರಿ ಕ್ರಮ, ನಿರ್ಬಂಧಗಳನ್ನು ವಿಧಿಸಿ ಆದೇಶಿಸಲಾಗಿದೆ.

ತಾ. ೧೪ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆ ವರೆಗೆ ‘ಮೆಗಾ ಲೋಕ ಅದಾಲತ್’ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳ ಆಯಾಯ ನ್ಯಾಯಾಲಯದಲ್ಲಿ ನಡೆಸಲು ಎನ್‌ಎಎಲ್‌ಎಸ್‌ಎ ಮತ್ತು ಕೆಎಸ್‌ಎಲ್‌ಎಸ್‌ಎ ದಿಂದ ನಿರ್ದೇಶನವಿರುವುದರಿಂದ ತಾ. ೧೪ ರಂದು (ಇಂದು) ನಡೆಯಲಿರುವ ಮೆಗಾಲೋಕ್ ಅದಾಲತ್‌ಗೆ ಹಾಜರಾಗುವ ಪಕ್ಷಕಾರರು, ದಾವೆದಾರರಿಗೆ ಮಾತ್ರ ವಾರಾಂತ್ಯ ಕರ್ಫ್ಯೂನಿಂದ ವಿನಾಯಿತಿ ನೀಡುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಕೋರಿದ್ದಾರೆ.

ಅದರಂತೆ, ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ತಾ. ೧೪ ರಂದು ಕೊಡಗು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಆಯಾಯ ನ್ಯಾಯಾಲಯದ ಆವರಣದಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿರುವ ‘ಮೆಗಾ ಲೋಕ ಅದಾಲತ್’ ಗೆ ಪಕ್ಷಕಾರರು, ದಾವೆದಾರರು ಅಧಿಕೃತ ಗುರುತಿನ ಚೀಟಿ ಹೊಂದಿಕೊAಡವರಿಗೆ ಮಾತ್ರ ಹಾಜರಾಗುವ ಬಗ್ಗೆ ಸಂಚರಿಸಲು ಅನುಮತಿ ನೀಡಲು ತಿಳಿಸಿದೆ. ನೆರೆಯ ಕೇರಳ ರಾಜ್ಯದಿಂದ ಮೆಗಾ ಲೋಕ್ ಅದಾಲತ್ ಉದ್ದೇಶಕ್ಕೆ ಪಕ್ಷಕಾರರು, ದಾವೆದಾರರು ಕೋವಿಡ್ ಲಸಿಕೆ ಪಡೆದಿದ್ದರೂ (೨ ಡೋಸ್ ಆಗಿದ್ದರೂ) ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹಾಜರುಪಡಿಸಿ ನಂತರವೇ ಪ್ರವೇಶಿಸಲು ಅನುಮತಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ಈ ಆದೇಶದ ಉಲ್ಲಂಘನೆ, ದುರುಪಯೋಗವೂ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಆಕ್ಟ್-೨೦೦೫ ರ ಕಲಂ ೫೧ ರಿಂದ ೬೦, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್ -೨೦೨೦ರ ಕಲಂ ೯, ಭಾರತೀಯ ದಂಡ ಸಂಹಿತೆ ೧೮೬೦ ರ ಕಲಂ ೧೮೮ ಮತ್ತು ಇನ್ನಿತರೆ ಸಂಬAಧಿತ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.