? ಕಾಯಪಂಡ ಶಶಿ ಸೋಮಯ್ಯ

ಮ, ಆ. ೧೪: ದೇಶವ್ಯಾಪ್ತಿಯಾಗಿ ಆಗಸ್ಟ್ ೧೫ ರಂದು (ಇಂದು) ೭೫ ಸ್ವಾತಂತ್ರೊö್ಯÃತ್ಸವದ ಸಂಭ್ರಮ, ಸಡಗರ. ಪ್ರಸ್ತುತದ ಸನ್ನಿವೇಶದಲ್ಲಿ ಈ ಸಂಭ್ರಮಾಚರಣೆಗೆ ಅದ್ಧೂರಿಯ ಸ್ಪರ್ಶ ನೀಡಲು ಕ್ಲಿಷ್ಟಕರವಾದ ಪರಿಸ್ಥಿತಿ ದೇಶದಲ್ಲಿ ಕೊರೊನಾ ಕಾರಣದಿಂದಾಗಿ ಎದುರಾಗಿದೆ. ಆದರೂ ದೇಶಕ್ಕೆ ಸ್ವಾತಂತ್ರö್ಯ ಲಭಿಸಿ ೭೫ ವರ್ಷಗಳಾಗುತ್ತಿರುವ ಸಂತಸ ಜನತೆಯಲ್ಲಿದೆ.

ಇಂದು ಅಮೃತ ಮಹೋತ್ಸವ.... ಅಂದು

ಬ್ರಿಟಿಷರ ಆಡಳಿತ ಸ್ವಾತಂತ್ರö್ಯಕ್ಕಾಗಿ ಭಾರತ ದೇಶದಲ್ಲಿ ನಡೆದ ಹೋರಾಟ. ಹತ್ತು ಹಲವಾರು ಪ್ರತಿಭಟನೆಗಳು, ವಿವಿಧ ರೀತಿಯ ಸತ್ಯಾಗ್ರಹಗಳು. ದೇಶವನ್ನು ಬ್ರಿಟಿಷರ ಆಡಳಿತದಿಂದ ಮುಕ್ತಗೊಳಿಸಲು ದೇಶಾದ್ಯಂತ ನಡೆದ ಹೋರಾಟಗಳು. ಮುಂಚೂಣಿ ನಾಯಕರು ಇವೆಲ್ಲವೂ ಇದೀಗ ಇತಿಹಾಸದ ಪುಟಗಳಲ್ಲಿ ಸೇರಿಹೋಗಿವೆ. ಅದೆಷ್ಟೋ ಸ್ವಾತಂತ್ರö್ಯ ಹೋರಾಟಗಾರರು ಕಣ್ಮರೆಯಾಗಿದ್ದರೆ. ಅಲ್ಲೋ..., ಇಲ್ಲೋ ಬೆರಳೆಣಿಕೆಯ ಮಂದಿ ಮಾತ್ರ ವೃದ್ಧಾಪ್ಯ ಜೀವನದಲ್ಲಿದ್ದಾರೆ. ಸ್ವಾತಂತ್ರö್ಯ ಹೋರಾಟದ ಕಿಚ್ಚು ಕೊಡಗಿ ನಲ್ಲಿಯೂ ಆ ದಿನಗಳಲ್ಲಿದ್ದು ಹಲವಾರು ಮಂದಿ ಕೆಚ್ಚೆೆ್ಟದೆಯ ಹೋರಾಟ ನಡೆಸಿದ್ದಾರೆ. ಇವರೆಲ್ಲರ ತ್ಯಾಗ-ಬಲಿದಾನಗಳ ಪೈಕಿ ಕೊನೆಗೂ ೧೯೪೭ ರಲ್ಲಿ ಆಗಸ್ಟ್ ೧೪ ರ ಮಧ್ಯ ರಾತ್ರಿಯ ನಂತರ ಭಾರತ ದೇಶ ಸ್ವತಂತ್ರವನ್ನು ಪಡೆಯಿತು. ಮರು ದಿನವಾದ ಆಗಸ್ಟ್ ೧೫ ರಂದು ದೇಶದೆಲ್ಲೆಡೆ ಈ ಸ್ವಾತಂತ್ರö್ಯದ ಸಂಭ್ರಮಾಚರಣೆಗಳು ಜರುಗಿವೆ. ಆ ಸಂದರ್ಭದಲ್ಲಿ ಅದೂ ಸ್ವಾತಂತ್ರö್ಯ ಲಭಿಸಿದ ಆರಂಭದ ವರ್ಷ ಕೊಡಗಿನಲ್ಲಿಯೂ ಇದರ ಸಂಭ್ರಮೋಲ್ಲಾಸಗಳು ನೆರವೇರಿವೆ. ಆದರೆ ಪ್ರಸ್ತುತ ಪೀಳಿಗೆಗೆ ಆ ದಿನಗಳ ಅನುಭವ ಇಲ್ಲ. ಕೊಡಗಿನಲ್ಲಿ ಆರಂಭದ ವರ್ಷದ ಸ್ವಾತಂತ್ರö್ಯ ಸಂಭ್ರಮವನ್ನು ನೆನಪು ಮಾಡಿಕೊಡುವ ಬೆರಳೆಣಿಕೆಯ ಹಿರಿಯ ಜೀವಗಳು ಮಾತ್ರ ಈಗ ಇದ್ದಾರೆ. ಪ್ರಸ್ತುತ ದೇಶ ೭೫ನೆಯ ವರ್ಷದ ಅಮೃತ ಮಹೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ೧೯೪೭ರ ಆಗಸ್ಟ್ ೧೫ರ ದಿನದ ನೆನಪು ಹೊಂದಿರುವ ಕೆಲವು ಹಿರಿಯ ವ್ಯಕ್ತಿಗಳು ‘ಶಕ್ತಿ’ಯ ಸಂಪರ್ಕಕ್ಕೆ ಸಿಕ್ಕಿದ್ದು, ಅವರುಗಳಿಗೆ ನೆನಪಿನಲ್ಲಿರುವಂತೆ ಆರಂಭದ ವರುಷದ ಸಂತಸವನ್ನು ಇಲ್ಲಿ ಮೆಲುಕು ಹಾಕುವ ಪ್ರಯತ್ನ ನಡೆಸಲಾಗಿದೆ.

ದಿಢೀರ್ ಮಾಹಿತಿ... ಅಲ್ಲಲ್ಲಿ ಸಂಭ್ರಮ.... ಮೆರವಣಿಗೆ

ದೇಶಕ್ಕೆ ಸ್ವಾತಂತ್ರö್ಯ ಲಭಿಸುತ್ತಿರುವ ಮಾಹಿತಿ ಕೊಡಗಿನಂತಹ ಪ್ರದೇಶದಲ್ಲಿ ಬಹುಶ: ಎಲ್ಲರಿಗೂ ತಿಳಿದು ಬಂದಿರಲಿಲ್ಲ. ಆದರೂ ಸ್ವಾತಂತ್ರö್ಯಕ್ಕಾಗಿ ಹೋರಾಟ ನಡೆಸುತ್ತಿದ್ದವರಿಗೆ ಈ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದವರಿಗೆ ದಿಢೀರನೆ ಆದರೂ ಈ ಮಾಹಿತಿ ಲಭ್ಯವಾಗಿತ್ತು. ೭೫ ವರ್ಷದ ಹಿಂದೆ ಅದೂ ಆಗಸ್ಟ್ ತಿಂಗಳು ಪ್ರಸ್ತುತದ ವರ್ಷದ ಮಳೆಗಾಲವನ್ನು ಅವಲೋಕಿಸಿದರೆ ಕೊಡಗು ಹೇಗಿದ್ದಿರಬಹುದು.....? ಮಳೆಗಾಲವಾದ್ದರಿಂದ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಕೂಡ ಇತ್ತಂತೆ. ಆದರೂ ಇದೊಂದು ವಿಶೇಷ ಸಂಭ್ರಮವಲ್ಲವೇ... ಅತ್ತಿಂದಿತ್ತ ಸಾಧ್ಯವಾದಷ್ಟು ಮಾಹಿತಿಗಳು ಹರಿದಾಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಈ ಸಂಭ್ರಮಾಚರಣೆ ನಡೆಯದಿದ್ದರೂ ಆ ಸಂದರ್ಭದ ಪಟ್ಟಣ ಪ್ರದೇಶಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಸಂಭ್ರಮವೋ ಸಂಭ್ರಮ ನಡೆದಿವೆಯಂತೆ. ಅಲ್ಲಲ್ಲಿ ಮೆರವಣಿಗೆಗಳು ಪರಸ್ಪರ ಹಸ್ತಲಾಘವದೊಂದಿಗೆ ಹರ್ಷ, ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ದೇಶದ ಪರ ಹಾಗೂ ಹೋರಾಟಗಾರರ ಪರವಾದ ಘೋಷಣೆಗಳು “ಅವಲಕ್ಕಿ ಪಾಕ”ದ ಸಿಹಿ ಹಂಚುವಿಕೆ. ಇಂತಹ ಲವಲವಿಕೆಯ ವಾತಾವರಣ ದೊಂದಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಆರಂಭದ ವರ್ಷದ ಸವಿ ಸವಿ ನೆನಪುಗಳನ್ನು ಈ ಹಿರಿಯರು ‘ಶಕ್ತಿ’ ಯೊಂದಿಗೆ ಆ ದಿನವನ್ನು ತಮ್ಮದೇ ಅನುಭವದ ಮಾತಿನೊಂದಿಗೆ ಮೆಲುಕು ಹಾಕಿದರು.

ಮಡಿಕೇರಿ ಕೋಟೆಯಲ್ಲಿ ಧ್ವಜಾರೋಹಣ

ಮಡಿಕೇರಿಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮಂದಿ ಜಮಾವಣೆಗೊಂಡಿದ್ದರAತೆ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಬಳಿಕ ಚೌಕಿ, ಮಹದೇವಪೇಟೆ ಮಾರ್ಗವಾಗಿ ಮೆರವಣಿಗೆ ನಡೆಸಿ ಕೋಟೆಯಲ್ಲಿ ಧ್ವಜಾರೋಹಣ.(ಮೊದಲ ಪುಟದಿಂದ) ಇದಾದ ಬಳಿಕ ಟೌನ್‌ಹಾಲ್‌ನಲ್ಲಿ ಸಮಾರಂಭ ನಡೆಸಲಾಯಿತು. ಆಗಿನ ಚೀಫ್ ಕಮೀಷನರ್ ಕೇಟೋಳಿರ ಚಂಗಪ್ಪ ಅವರಿದ್ದರು. ಜನತೆ ಅಪಾರ ಸಂತಸದಲ್ಲಿದ್ದರು.

ಉಗ್ಗಪ್ಪ- ಅಚ್ಚಣ್ಣ ಅವರುಗಳು ವಂದೇ ಮಾತರಂ ಹಾಡುತ್ತಿದ್ದರು. ಬಳಿಕ ಭಾಗಮಂಡಲ - ತಲಕಾವೇರಿಗಳಲ್ಲೂ ಪೂಜೆ ನಡೆಸಲಾಯಿತು.ಹೋರಾಟ ಪ್ರಮುಖರಾದ ಕೊಳ್ಳಿಮಾಡ ಕರುಂಬಯ್ಯ, ಪಂದ್ಯAಡ ಬೆಳ್ಯಪ್ಪ, ಬಿದ್ದಂಡ ಕಾರ್ಯಪ್ಪ, ಬಾಚಮಾಡ ಗಣಪತಿ, ಚೌಡ್ಲು ಕಾಳಪ್ಪ, ನಿಡ್ಯಮಲೆ ಸೋಮಣ್ಣ, ಕಾಕಮಾಡ ನಾಣಯ್ಯ, ಶನಿವಾರಸಂತೆಯ ಮಲ್ಲಪ್ಪ, ಚೆಪ್ಪುಡಿರ ಪೂಣಚ್ಚ. ಎಸ್. ಎಸ್. ನಾರಾಯಣಮೂರ್ತಿ ಅವರು ಗಳಂತವರು ಭಾಗಿಗಳಾಗಿದ್ದರು ಎಂದು ಹಿರಿಯೊಬ್ಬರು ಸ್ಮರಿಸಿದರು. (ಪ್ರಸ್ತುತ ಇವರು ದೈವಾಧೀನರಾಗಿದ್ದಾರೆ)