ಸೋಮವಾರಪೇಟೆ, ಆ. ೧೨: ತಾಲೂಕಿನ ಗೆಜ್ಜೆಹಣಕೋಡು ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಹಾಗೂ ಕಸವಿಲೇವಾರಿಗೆ ಸಂಬAಧಿಸಿ ದಂತೆ ಉದ್ಭವಿಸಿದ್ದ ಸಮಸ್ಯೆಗೆ ತಹಶೀಲ್ದಾರ್ ಗೋವಿಂದರಾಜು ಹಾಗೂ ಅಧಿಕಾರಿಗಳ ತಂಡ ಪರಿಹಾರ ಕಲ್ಪಿಸಿದೆ.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಜ್ಜೆ ಹಣಕೋಡು ಗ್ರಾಮಸ್ಥರು ನೂರಾರು ವರ್ಷಗಳಿಂದ ಬಳಸುತ್ತಿದ್ದ ಸ್ಮಶಾನದ ಜಾಗದಲ್ಲಿ ಪಂಚಾಯ್ತಿಯವರು ಕಸವಿಲೇವಾರಿ ಘಟಕ ಮಾಡಲು ಹೊರಟಿದ್ದು ವಿವಾದಕ್ಕೆ ಕಾರಣವಾಗಿತ್ತು.

ಈ ಹಿಂದೆ ಇದೇ ಜಾಗವನ್ನು ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದ ಸಂದರ್ಭ ಗ್ರಾಮಸ್ಥರು ನ್ಯಾಯಾಲಯ ದಲ್ಲಿ ಹೋರಾಟ ನಡೆಸಿ ಸ್ಮಶಾನವನ್ನಾಗಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಂತರ ೧೯೯೩ರಲ್ಲಿ ಈ ಜಾಗದ ಸರ್ವೆ ನಡೆಸಿ ಸ್ಕೆಚ್ ಕೂಡ ಮಾಡಲಾಗಿದೆ. ಇದೀಗ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಸಾರ್ವಜನಿಕ ಸ್ಮಶಾನದಲ್ಲಿ ಕಸವಿಲೇವಾರಿ ಘಟಕ ಮಾಡಲು ಹೊರಟಿರುವುದು ಎಷ್ಟು ಸರಿ? ಇದರ ಪಕ್ಕದಲ್ಲೇ ಸಾಕಷ್ಟು ಪೈಸಾರಿ ಜಾಗವಿದ್ದು, ಅಲ್ಲೇ ಘಟಕ ನಿರ್ಮಿಸಲಿ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ, ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಂತೆ ತಹಶೀಲ್ದಾರ್ ಗೋವಿಂದರಾಜು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಕಂದಾಯ ಮತ್ತು ಪಂಚಾಯಿತಿ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಗ್ರಾಮಸ್ಥರ ಅಭಿಪ್ರಾಯ ಆಲಿಸಿತು. ನಂತರ ತಹಶೀಲ್ದಾರ್ ಗೋವಿಂದರಾಜು ಅವರು, ಹಾಲಿ ಸ್ಮಶಾನವನ್ನಾಗಿ ಬಳಸುತ್ತಿರುವ ೧.೫೫ ಎಕರೆ ಪ್ರದೇಶವನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ಕಸವಿಲೇವಾರಿ ಘಟಕ ಮಾಡುವಂತೆ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಕಸವಿಲೇವಾರಿ ಯೋಜನೆಗೆ ಸಂಬAಧಿಸಿದAತೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ದರಾದರೂ ಹಿಂದಿನAತೆ ಕಸದ ರಾಶಿ ಹಾಕುವುದಿಲ್ಲ, ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಲಾಗುವುದು. ಆದ್ದರಿಂದ ಯೋಜನೆಗೆ ಸಹಕರಿಸ ಬೇಕೆಂದರು. ನಂತರ ಸ್ಮಶಾನದ ಮುಂದಿನ ಜಾಗದಲ್ಲಿ ಕಸವಿಲೇವಾರಿ ಘಟಕಕ್ಕೆ ಸ್ಥಳ ನಿಗದಿ ಪಡಿಸಿ ವಿವಾದಕ್ಕೆ ತೆರೆ ಎಳೆಯಲಾಯಿತು.

ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಬಿಂದು, ಉಪಾಧ್ಯಕ್ಷೆ ರಶೀದಾ, ಅಭಿವೃದ್ದಿ ಅಧಿಕಾರಿ ಹೇಮಲತಾ, ಸೋಮೇಶ್ವರ ಯುವಕ ಸಂಘದ ಅಧ್ಯಕ್ಷ ನವೀನ್, ಕಾರ್ಯದರ್ಶಿ ರಾಜಶೇಖರ್, ಅಂಬೇಡ್ಕರ್ ಯುವಕ ಸಂಘದ ಕೊಮಾರಪ್ಪ, ತ್ಯಾಗರಾಜು, ಗ್ರಾಮದ ಪ್ರಮುಖರಾದ ದಯಾನಂದ, ವೇದಾಂತಯ್ಯ, ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.