ಪೊನ್ನಂಪೇಟೆ, ಆ. ೧೨: ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ನಯನಾ ತಮ್ಮಯ್ಯ ಸಂಶೋಧನಾ ಬರಹದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದೆಹಲಿಯ ಫಾರ್ಚೂನ್ ಇನ್ಸಿ÷್ಟಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಬಿಸ್ನೆಸ್ ಸಂಸ್ಥೆ ಆಯೋಜಿಸಿದ್ದ ದ್ವಿತೀಯ ಸಂಶೋಧನಾ ಮತ್ತು ಡಾಕ್ಟೋರಲ್ ಒಕ್ಕೂಟದಲ್ಲಿ ಇವರು ಮಂಡಿಸಿದ ‘ರೋಲ್ ಆಫ್ ಮೈಂಡ್ಫುಲ್ನೆಸ್ ಆನ್ ಆರ್ಗನೈಜೇಷನಲ್ ರೋಲ್ ಸ್ಟೆçಸ್ ಲೆವೆಲ್ ಆಫ್ ಅಸೆಂಬ್ಲಿ ಲೈನ್ ವರ್ಕರ್ಸ್' ಶೀರ್ಷಿಕೆಯ ಸಂಶೋಧನಾ ಪ್ರಸ್ತಾಪಕ್ಕೆ ಪ್ರಥಮ ಬಹುಮಾನ ದೊರೆತಿದೆ. ಈ ಹಿಂದೆ ಇದೇ ಸಂಸ್ಥೆ ಆಯೋಜಿಸಿದ್ದ ಮೂರು ದಿನಗಳ ರಾಷ್ಟçಮಟ್ಟದ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅತ್ಯುತ್ತಮ ಡಾಕ್ಟೋರಲ್ ಪತ್ರಿಕೆ ಪ್ರಶಸ್ತಿಗೆ ಭಾಜನರಾಗಿದ್ದರು. ೧೫ ದೇಶಗಳ ಸಂಶೋಧನಾರ್ಥಿಗಳು ಭಾಗವಹಿಸಿದ್ದ ಈ ವಿಚಾರ ಸಂಕಿರಣದಲ್ಲಿ ೪೦೯ ಸಂಶೋಧನಾ ಲೇಖನಗಳು ಮಂಡನೆಯಾಗಿದ್ದವು. ನಯನಾ ಪ್ರಸ್ತುತ ಪಡಿಸಿದ ‘ಡಸ್ ಮೈಂಡ್ ಫುಲ್ ನೆಸ್ ಎಫೆಕ್ಟ್ ಆರ್ಗನೈಜೇಷನಲ್ ರೋಲ್ ಸ್ಟೆçಸ್ ಲೆವೆಲ್ ಆಫ್ ಅಸೆಂಬ್ಲಿ ಲೈನ್ ವರ್ಕರ್ಸ್'' ಲೇಖನವು ಎಮರಾಲ್ಡ್ ನಿಯತಕಾಲಿಕೆಯಲ್ಲಿ ಪ್ರಕಟಗೊಳ್ಳಲಿದೆ. ಎಸ್.ಸಿ.ಎಂ.ಎಸ್. ಜೈನ್ ವಿಶ್ವವಿದ್ಯಾನಿಲಯವು ಆಯೋಜಿಸಿದ್ದ ೪ನೇ ಅಂರ್ರಾಷ್ಟಿçÃಯ ವಿಚಾರ ಸಂಕಿರಣದಲ್ಲೂ ಈ ಲೇಖನವು ಪ್ರಥಮ ಬಹುಮಾನಗಳಿಸಿದೆ ಹಾಗೂ ಸ್ಟಡೀಸ್ ಇನ್ ಇಂಡಿಯನ್ ಪ್ಲೇಸ್ ನೇಮ್ಸ್ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.
ವೀರಾಜಪೇಟೆಯ ಬೊಳ್ತಂಡ ಚೇತನ್ ಮುತ್ತಣ್ಣ ಅವರ ಪತ್ನಿಯಾದ ನಯನ ಕಾಂಚೇರಿರ ತಮ್ಮಯ್ಯ ಮತ್ತು ನಳಿನಿ ದಂಪತಿಗಳ ಪುತ್ರಿ. ನಯನಾ ಅವರಿಗೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಕಾಲೇಜಿನ ಪರವಾಗಿ ಪುಷ್ಪಗುಚ್ಛ ನೀಡಿ ಗೌರವಿಸಿದರು.