ಕೂಡಿಗೆ, ಆ. ೧೨: ಮಳೆಯಿಂದಾಗಿ ಮನೆ ಬಿದ್ದು ಸೌದೆ ಕೊಟ್ಟಿಗೆಯಲ್ಲಿ ಜೀವನ ಸಾಗಿಸುತ್ತಿದ್ದ ಕಡುಬಡತನದ ಸಂಸಾರಕ್ಕಾಗಿ ಕುಶಾಲನಗರ ರೋಟರಿ ಸಂಸ್ಥೆ ಇದೀಗ ಮನೆ ನಿರ್ಮಾಣಕ್ಕೆ ಮುಂದಾಗಿದೆ. ಮನೆ ನಿರ್ಮಾಣಕ್ಕಾಗಿ ಭೂಮಿಪೂಜೆ ಗಣ್ಯರ ಸಮ್ಮುಖದಲ್ಲಿ ನೆರವೇರಿತು.
ಕೂಡಿಗೆ ಬಳಿಯ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವತ್ತೂರು ಗ್ರಾಮದಲ್ಲಿ ವಾಸವಾಗಿದ್ದ ಜೇನುಕುರುಬರ ರಾಜಣ್ಣ, ನಾಗಮ್ಮ ದಂಪತಿಗೆ ಕಡುಬಡತನದಲ್ಲಿ ವಾಸಿಸುತ್ತಿದ್ದರು. ಜೂನ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಈ ದಂಪತಿ ಇದ್ದ ಮನೆ ಕುಸಿದು ಬಿದ್ದಿತು. ಅದೃಷ್ಟವಶಾತ್ ರಾಜಣ್ಣ, ನಾಗಮ್ಮ ಮತ್ತು ೭ ವರ್ಷದ ಮೊಮ್ಮಗಳು ಪವಿತ್ರ ಜೀವ ಉಳಿಸಿಕೊಂಡಿದ್ದರು.
ಸೌದೆ ಕೊಟ್ಟಿಗೆಯಲ್ಲಿ ಕಷ್ಟಕರ ಸನ್ನಿವೇಶದಲ್ಲಿ ಜೀವನ ಸಾಗಿಸುತ್ತಿದ್ದ ಈ ದಂಪತಿಯನ್ನು ಗಮನಿಸಿದ ‘ಶಕ್ತಿ’ ಪತ್ರಿಕೆಯಲ್ಲಿ ಈ ಕುರಿತು ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ವಿಚಾರವನ್ನು ಕುಶಾಲನಗರ ರೋಟರಿ ಅಧ್ಯಕ್ಷ ರಂಗಸ್ವಾಮಿ ಗಮನಕ್ಕೆ ತರಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ರಂಗಸ್ವಾಮಿ ದಂಪತಿಗೆ ಮನೆ ನಿರ್ಮಾಣಮಾಡುವ ಭರವಸೆ ನೀಡಿದರಲ್ಲದೆ ಅಗತ್ಯ ಸಹಕಾರ ನೀಡಿದರು.
ಇದೀಗ ರಾಜಣ್ಣ ದಂಪತಿಗೆ ರೋಟರಿ ಕುಶಾಲನಗರದಿಂದ ಮನೆ ಕೂಡಿಗೆ, ಆ. ೧೨: ಮಳೆಯಿಂದಾಗಿ ಮನೆ ಬಿದ್ದು ಸೌದೆ ಕೊಟ್ಟಿಗೆಯಲ್ಲಿ ಜೀವನ ಸಾಗಿಸುತ್ತಿದ್ದ ಕಡುಬಡತನದ ಸಂಸಾರಕ್ಕಾಗಿ ಕುಶಾಲನಗರ ರೋಟರಿ ಸಂಸ್ಥೆ ಇದೀಗ ಮನೆ ನಿರ್ಮಾಣಕ್ಕೆ ಮುಂದಾಗಿದೆ. ಮನೆ ನಿರ್ಮಾಣಕ್ಕಾಗಿ ಭೂಮಿಪೂಜೆ ಗಣ್ಯರ ಸಮ್ಮುಖದಲ್ಲಿ ನೆರವೇರಿತು.
ಕೂಡಿಗೆ ಬಳಿಯ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವತ್ತೂರು ಗ್ರಾಮದಲ್ಲಿ ವಾಸವಾಗಿದ್ದ ಜೇನುಕುರುಬರ ರಾಜಣ್ಣ, ನಾಗಮ್ಮ ದಂಪತಿಗೆ ಕಡುಬಡತನದಲ್ಲಿ ವಾಸಿಸುತ್ತಿದ್ದರು. ಜೂನ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಈ ದಂಪತಿ ಇದ್ದ ಮನೆ ಕುಸಿದು ಬಿದ್ದಿತು. ಅದೃಷ್ಟವಶಾತ್ ರಾಜಣ್ಣ, ನಾಗಮ್ಮ ಮತ್ತು ೭ ವರ್ಷದ ಮೊಮ್ಮಗಳು ಪವಿತ್ರ ಜೀವ ಉಳಿಸಿಕೊಂಡಿದ್ದರು.
ಸೌದೆ ಕೊಟ್ಟಿಗೆಯಲ್ಲಿ ಕಷ್ಟಕರ ಸನ್ನಿವೇಶದಲ್ಲಿ ಜೀವನ ಸಾಗಿಸುತ್ತಿದ್ದ ಈ ದಂಪತಿಯನ್ನು ಗಮನಿಸಿದ ‘ಶಕ್ತಿ’ ಪತ್ರಿಕೆಯಲ್ಲಿ ಈ ಕುರಿತು ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ವಿಚಾರವನ್ನು ಕುಶಾಲನಗರ ರೋಟರಿ ಅಧ್ಯಕ್ಷ ರಂಗಸ್ವಾಮಿ ಗಮನಕ್ಕೆ ತರಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ರಂಗಸ್ವಾಮಿ ದಂಪತಿಗೆ ಮನೆ ನಿರ್ಮಾಣಮಾಡುವ ಭರವಸೆ ನೀಡಿದರಲ್ಲದೆ ಅಗತ್ಯ ಸಹಕಾರ ನೀಡಿದರು.
ಇದೀಗ ರಾಜಣ್ಣ ದಂಪತಿಗೆ ರೋಟರಿ ಕುಶಾಲನಗರದಿಂದ ಮನೆ ಅಧಿಕಾರ ಸ್ವೀಕಾರ ಕಾರ್ಯಕ್ರಮ ನೆರವೇರಿಸಿ ಅದಕ್ಕಾಗಿ ಮೀಸಲಿಟ್ಟ ಹಣವನ್ನು ಮನೆ ನಿರ್ಮಾಣದಂತ ಯೋಗ್ಯ ಕೆಲಸಕ್ಕೆ ವಿನಿಯೋಗಿಸಿದ್ದು ಸಾರ್ಥಕತೆ ಮೂಡಿಸಿದೆ ಎಂದರು. ಇದೇ ಸಂದರ್ಭ ದಂಪತಿಯ ಕಷ್ಟದ ಬಗ್ಗೆ ಗಮನ ಸೆಳೆದ ಪತ್ರಕರ್ತ ನಾಗರಾಜ ಶೆಟ್ಟಿ ಅವರನ್ನೂ ಅನಿಲ್ ಶ್ಲಾಘಿಸಿದರು.
ಕುಶಾಲನಗರ ರೋಟರಿ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಕಷ್ಟದಲ್ಲಿದ್ದವರ ನೆರವಿಗೆ ಧಾವಿಸುವುದೇ ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಕುಶಾಲನಗರ ರೋಟರಿಯಿಂದ ಸಂಕಷ್ಟದಲ್ಲಿದ್ದವರ ನೆರವಿಗೆ ವಿವಿಧ ಯೋಜನೆ ರೂಪಿಸಲಾಗುತ್ತದೆ. ಮುಂದಿನ ೩ ತಿಂಗಳಲ್ಲಿ ರಾಜಣ್ಣ, ನಾಗಮ್ಮ ದಂಪತಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ. ಈ ಮನೆಗೆ ‘ಹೌಸ್ ನಂ. ೧’ ಎಂದು ನಾಮಕರಣ ಮಾಡಲಾಗುತ್ತದೆ ಎಂದರು. ಈ ರೀತಿ ಕಷ್ಟದಲ್ಲಿದ್ದವರ ಬಗ್ಗೆ ಗಮನ ಸೆಳೆದ ಪತ್ರಕರ್ತ ಕೆ.ಕೆ. ನಾಗರಾಜಶೆಟ್ಟಿ ಕಾರ್ಯಕ್ಷಮತೆಯನ್ನೂ ರಂಗಸ್ವಾಮಿ ಶ್ಲಾಘಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಮ್ಮ ಮಾತನಾಡಿ, ರೋಟರಿ ಸಂಸ್ಥೆಯು ಜನರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಪಂಚಾಯಿತಿ ಸದಸ್ಯರಾದ ಫಿಲೋಮಿನಾ, ದಿನೇಶ್ ರೋಟರಿ ಸಂಸ್ಥೆಯ ವಲಯ ಸೇನಾನಿ ಅಶೋಕ್, ಪ್ರಮುಖರಾದ ಎಸ್.ಕೆ. ಸತೀಶ್, ಮಹೇಶ್ ನಲ್ವಾಡೆ, ಕುಮಾರಿ ದೇವಯ್ಯ, ಪ್ರಕಾಶ್, ನವೀನ್, ಪ್ರೇಮ್ ಚಂದನ್, ರವೀಂದ್ರ ರೈ, ಗ್ರಾಮದ ಪ್ರಮುಖರಾದ ಪ್ರಮೀಣ್ ಆರ್.ಕೆ. ಕೃಷ್ಣ, ಕೇಶವ ರೈ, ಸುಬ್ಬಯ್ಯ, ಲೋಕೇಶ್, ವರದರಾಜ್, ದಾಸ್ ಸೇರಿದಂತೆ ಹಲವಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿದ್ದರು.