ಮಡಿಕೇರಿ, ಆ. ೧೧: ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ನಿಂದನೆ ಮಾಡುವುದನ್ನು ನಿಲ್ಲಿಸಿ ಅವರ ಕುಟುಂಬ ದೇಶಕ್ಕೆ ನೀಡಿದ ಕೊಡುಗೆ ಮತ್ತು ಬಲಿದಾನಗಳನ್ನು ಸ್ಮರಿಸಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಮನವಿ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ೭೯ನೇ ಕ್ವಿಟ್ ಇಂಡಿಯಾ ಚಳುವಳಿಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ÷್ಯ ಹೋರಾಟದ ಸಂದರ್ಭದಲ್ಲಿ ಆಗರ್ಭ ಶ್ರೀಮಂತವಾಗಿದ್ದ ನೆಹರು ಕುಟುಂಬ ತನ್ನೆಲ್ಲಾ ಐಶ್ವರ್ಯವನ್ನು ಸ್ವಾತಂತ್ರ÷್ಯ ಹೋರಾಟಕ್ಕೆ ಮೀಸಲಿಟ್ಟು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿತು. ರಾಷ್ಟçಪಿತ ಮಹಾತ್ಮ ಗಾಂಧಿ ಹಾಗೂ ಅನೇಕ ನಾಯಕರÀ ನೇತೃತ್ವದಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿ ಭಾರತ ಸ್ವಾತಂತ್ರö್ಯ ಹೊಂದಲು ಕಾರಣವಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಮಾತನಾಡಿ, ದೇಶದ ಸ್ವಾತಂತ್ರö್ಯಕ್ಕೆ ತ್ಯಾಗಬಲಿದಾನ ಮಾಡಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ನಾವೆಲ್ಲರೂ ಸಮಾಜ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಚಾರ ಎಂದರು. ಕೆಪಿಸಿಸಿ ಮುಖಂಡ ಟಿ.ಪಿ. ರಮೇಶ್ ಮಾತನಾಡಿ, ಸ್ವಾತಂತ್ರö್ಯ ಹೋರಾಟದ ದಿನಗಳನ್ನು ವಿವರಿಸಿದರು. ಸ್ವಾತಂತ್ರö್ಯ ಉತ್ಸವದ ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಸಲಹೆ ನೀಡಿದರು. ಕೆಪಿಸಿಸಿ ಸಂಯೋಜಕ ಹೆಚ್.ಎಂ. ನಂದಕುಮಾರ್ “ಇತಿಹಾಸ ಅರಿಯದವರು ಇತಿಹಾಸವನ್ನು ನಿರ್ಮಿಸಲಾರರು” ಎಂಬ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ ಮಾತನಾಡಿದರು.
ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಮುಖಂಡ ಎಂ.ಇ.ಹನೀಫ್ ಅವರಿಗೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು. ಅಲ್ಲದೆ ಒಲಂಪಿಕ್ ಕ್ರೀಡೆಯಲ್ಲಿ ಪದಕ ವಿಜೇತರು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಭಾರತದ ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಕೆಪಿಸಿಸಿ ಪ್ರಮುಖರಾದ ಕೆ.ಪಿ. ಚಂದ್ರಕಲಾ, ಮಾಜಿ ಕಾರ್ಯದರ್ಶಿ ಟಿ.ಎಂ. ಶಾಹಿದ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಹೆಚ್.ಎ. ಹಂಸ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ ಪಂಕಜ, ಜಿ.ಪಂ ಮಾಜಿ ಸದಸ್ಯೆ ಸರಿತಾ ಪೂಣಚ್ವ, ಮಾಜಿ ನಗರ ಸಭಾ ಅಧ್ಯಕ್ಷೆ ಜುಲೇಕಾಬಿ, ಮಾಜಿ ಮೂಡ ಅಧ್ಯಕ್ಷ ಚುಮ್ಮಿ ದೇವಯ್ಯ. ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಪ್ರಕಾಶ್ ಆಚಾರ್ಯ, ಟಿ.ಹೆಚ್ ಉದಯ್ ಕುಮಾರ್, ಹೆಚ್.ಪಿ. ಚಂದ್ರು, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್, ಪ್ರಮುಖರಾದ ಬೊಳ್ಳಿಯಂಡ ಗಣೇಶ್, ಮುಕ್ಕಾಟಿರ ಸಂದೀಪ್, ಫ್ಯಾನ್ಸಿ ಪಾರ್ವತಿ, ಮೀನಾಜ್ ಪ್ರವೀಣ್, ಮುದ್ದುರಾಜ್, ಬಷೀರ್, ಪಿಯೂಸ್ ಫೆರೆರಾ, ಮಂದ್ರೀರ ಮೋಹನ್ ದಾಸ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್ ಸ್ವಾಗತಿಸಿ, ಆರ್.ಪಿ. ಚಂದ್ರಶೇಖರ್ ವಂದಿಸಿದರು.