ಕೂಡಿಗೆ, ಆ. ೧೦: ಕೂಡಿಗೆ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ಬೆಳೆಸಲಾದ ವಿವಿಧ ಬಗೆಯ ತೋಟಗಾರಿಕಾ ಗಿಡಗಳನ್ನು ತಾ. ೧೬ ರಿಂದ ವಿತರಣೆ ಮಾಡಲಾಗುವುದು ಎಂದು ತಾಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.
ಕೂಡಿಗೆ ತೋಟಗಾರಿಕಾ ಕ್ಷೇತ್ರದಲ್ಲಿ ರಾಷ್ಟಿçÃಯ ತೋಟಗಾರಿಕಾ ಮಿಷನ್ ಯೋಜನೆಯ ಅಡಿಯಲ್ಲಿ ಅಡಿಕೆ, ಕಾಳುಮೆಣಸು ಕಡ್ಡಿ, ನಿಂಬೆ, ಕಿತ್ತಳೆ ಗಿಡ ಸೇರಿದಂತೆ ವಿವಿಧ ಬಗೆಯ ತೋಟಗಾರಿಕಾ ಬೆಳೆಯ ಗಿಡಗಳನ್ನು ಸರಕಾರ ನಿಗದಿಪಡಿಸಿದ ದರದಲ್ಲಿ ವಿತರಣೆ ಮಾಡಲಾಗುವುದು. ಇದರ ಜೊತೆಯಲ್ಲಿ ಸೋಮವಾರಪೇಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ೧೨ ರೈತ ಫಲಾನುಭವಿಗಳಿಗೆ ಅವರುಗಳ ಜಮೀನಿನ ದಾಖಲೆಗಳ ಆಧಾರದ ಮೇಲೆ ತೋಟಗಾರಿಕಾ ಪುನರ್ಚೇತನ ಯೋಜನೆಯ ಅಡಿಯಲ್ಲಿ ಉಚಿತವಾಗಿ ವಿವಿಧ ಬಗೆಯ ಗಿಡಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.