*ಗೋಣಿಕೊಪ್ಪ, ಆ. ೧೦: ಕಸ ಸಮಸ್ಯೆ ಬಗೆಹರಿಸುವುದನ್ನು ಸವಾಲಾಗಿ ಸ್ವೀಕರಿಸಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮೈಸೂರು ಮಹಾನಗರ ಪಾಲಿಕೆಯ ಶೂನ್ಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಮಾದರಿಯನ್ನು ತಿಳಿದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮಹಾನಗರಪಾಲಿಕೆಯ ಹಳೆ ಕೆಸರೆ ಗ್ರಾಮದ ಮಾದರಿ ಪ್ರಯೋಗವನ್ನು ಗೋಣಿಕೊಪ್ಪ ಕಸ ವಿಲೇವಾರಿ ಘಟಕದಲ್ಲಿ ಅನುಸರಿಸಿ ಸಮಸ್ಯೆ ಬಗೆಹರಿಸುವ ನಿಲುವು ಹೊಂದಿದ್ದಾರೆ.
ಗೋಣಿಕೊಪ್ಪ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಕಸ ಸಮಸ್ಯೆಯೂ ಕಾಡುತ್ತಿದೆ. ಕೆಲ ವರ್ಷಗಳಿಂದ ಪಂಚಾಯಿತಿಗೆ ಕಸ ವಿಲೇವಾರಿ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಇದನ್ನು ಬಗೆಹರಿ ಸಬೇಕು ಎಂಬ ದಿಟ್ಟ ನಿಲುವನ್ನು ನೂತನ ಗ್ರಾಮ ಪಂಚಾಯಿತಿ ಸದಸ್ಯರುಗಳು ಹೊಂದಿದ್ದು, ಸ್ವಚ್ಛ ಗ್ರಾಮವಾಗಿಸಲು ಪಣತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯನಿರತರಾಗಿರುವ ಪಂಚಾಯಿತಿ ಸದಸ್ಯರುಗಳು ಮೊದಲ ಆರಂಭಿಕ ಪ್ರಗತಿಯ ಹೆಜ್ಜೆಯಾಗಿ ಕಸ ಸಮಸ್ಯೆಯನ್ನು ಬಗೆಹರಿಸುವ ಸವಾಲನ್ನು ಎದುರಿಸುತ್ತಿದ್ದಾರೆ.
ಮೈಸೂರಿನ ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಚೇತನ್ ಅವರು ಮೈಸೂರಿನ ನಗರಪಾಲಿಕೆ ಅನುಸರಿಸುವ ಕ್ರಮವನ್ನು ಗೋಣಿಕೊಪ್ಪದಲ್ಲಿಯೂ ಅನುಷ್ಠಾನ ಗೊಳಿಸುವ ಚಿಂತನೆ ಇದೆ. ಹಸಿ ಮತ್ತು ಒಣ ಕಸ ವಿಂಗಡಣೆಗೆ ಕ್ರಮ ಕೈಗೊಂಡು ಗೋಣಿಕೊಪ್ಪ ಭಾಗದ ಕಸವಿಲೇವಾರಿ ಸಮಸ್ಯೆಗೆ ಮುಕ್ತಿ ದೊರೆಕಿಸಿಕೊಡುವ ಕಾರ್ಯಕ್ಕೆ ಸರ್ವ ಸದಸ್ಯರ ಬಲದೊಂದಿಗೆ ಪಂಚಾಯಿತಿ ಮುಂದಾಗಿದೆ ಎಂದು ಹೇಳಿದರು.
ಸದಸ್ಯರುಗಳಾದ ನೂರೇರ ರತಿಅಚ್ಚಪ್ಪ, ಹಕೀಂ, ಗೀತಾ, ವಿವೇಕ್, ಮಂಜುಳಾ, ಶಾಹಿನ್, ಸುಲೈಖ, ಪುಷ್ಪ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಅಂಗಮ್ಮ, ಕಾರ್ಯದರ್ಶಿ ತನ್ಜೀಯ, ಸಹಕಾರ್ಯದರ್ಶಿ ಸೌಮ್ಯ ಸುಲೋಮಿತ, ಖಜಾಂಚಿ ಅನ್ನಪೂರ್ಣ, ಪದಾಧಿಕಾರಿಗಳಾದ ವರಲಕ್ಷಿ÷್ಮ, ಗೌರಿ, ಪ್ರಿಯ, ಲಕ್ಷಿ÷್ಮ, ಸಫಿನಾe಼ï, ಪ್ರಿಯ ಸೇರಿದಂತೆ ಸ್ವಚ್ಛ ಭಾರತ್ ವಿಷನ್ ಜಿಲ್ಲಾ ಸಂಯೋಜಕ ಅಜ್ಜಿಕುಟ್ಟೀರ ಸೂರಜ್ ಹಾಜರಿದ್ದರು.