ಮಡಿಕೇರಿ, ಆ. ೧೧: ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ನೂತನ ಅಧ್ಯಕ್ಷರಾಗಿ ಎಂ.ಆರ್. ಮೋಹನ್ ಅವನ್ನು ನೇಮಕ ಮಾಡಲಾಯಿತು.
ಕೊಡಗು ಜಿ¯್ಲÁ ಮರಾಠ ಮರಾಟಿ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಭಾನುವಾರ ಸಂಘದ ಅಧ್ಯಕ್ಷ ಎಂ.ಎA. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನೇಮಕ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷೆಯಾಗಿ ರೇಖಾಸಂಪತ್, ಕಾರ್ಯದರ್ಶಿಯಾಗಿ ಆದರ್ಶ್ ಅದ್ಕಲೇಗಾರ್, ಸಹಕಾರ್ಯದರ್ಶಿಯಾಗಿ ಡಿ.ಪಿ. ವಿನಯ್ ಕುಮಾರ್, ಕೋಶಾಧಿಕಾರಿಯಾಗಿ ಕೆ. ಸಂತೋಷ್ ಮತ್ತು ಸದಸ್ಯರಾಗಿ ಎಂ.ಎಸ್. ಗಣೇಶ್, ಎಂ.ಆರ್.ಭರತ್, ಸಿ.ಎಸ್. ಮಿಥುನ್, ಎಂ.ಡಿ. ಪೃಥ್ವಿ, ಎಂ.ಜೆ. ಶಶಿಕಾಂತ್ ಅವರನ್ನು ಜಿಲ್ಲಾ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನೇಮಕ ಮಾಡಲಾಯಿತು. ಸಂಘದ ಸಲಹೆಗಾರರಾಗಿ ಎಂ.ಎA.ಪರಮೇಶ್ವರ್, ಯುವಕ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್.ದಿವ್ಯ ಕುಮಾರ್, ದೇವಕಿ ಜಿ.ಆರ್. ನಾಯ್ಕ, ಎಂ.ಎ. ಸಂಪತ್ಕುಮಾರ್, ಎಂ.ಎಸ್. ಕಾಂತಿ, ಪವನ್ ಕುಮಾರ್, ಎಂ.ಡಿ. ತೇಜಸ್ವಿ, ಎಂ.ಎಸ್. ಯೋಗೇಂದ್ರ ಹಾಗೂ ಎನ್. ಲತಾಶ್ರೀ ಆದರ್ಶ್ ಅವರನ್ನು ಲೆಕ್ಕಪರಿಶೋಧಕರಾಗಿ ಸರ್ವಾನುಮತದಿಂದ ನೇಮಕ ಮಾಡಲಾಯಿತು.
ನಂತರ ಮಾತನಾಡಿದ ಕೊಡಗು ಜಿ¯್ಲÁ ಮರಾಠ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಎಂ.ಎA. ಪರಮೇಶ್ವರ್, ಪ್ರತಿಯೊಬ್ಬ ಸದಸ್ಯರು ಸಂಘದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕಿದೆ. ಕ್ರೀಡಾಕೂಟ ಆಯೋಜಿಸಿದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಯುವ ಜನತೆ, ಸಂಘದ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಪ್ರತಿಯೊಬ್ಬರೂ ಸಂಘದ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಯಶಸ್ಸು ಸಾಧ್ಯ. ಮುಂದಿನ ದಿನಗಳಲ್ಲಿ ಯುವಕ ಸಂಘದ ಪದಾಧಿಕಾರಿಗಳು ಯುವಜನರನ್ನು ಒಗ್ಗೂಡಿಸುವ ಕೆಲಸ ಮಾಡುವುದರ ಮೂಲಕ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಸ್ಥಾಪಕಾಧ್ಯಕ್ಷ ವಾಮನ ನಾಯಕ್, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇAದ್ರ, ಕೋಶಾಧಿಕಾರಿ ಕಾಂತಿ ಯೋಗೇಂದ್ರ, ಪ್ರಮುಖರಾದ ಕುಮಾರ, ನರಸಿಂಹ, ಸುರೇಶ್, ಎಂ.ಟಿ.ದೇವಪ್ಪ, ಎಂ.ಟಿ.ರಾಘವ್, ಪೂವಪ್ಪ ಹಾಗೂ ಪದಾಧಿಕಾರಿಗಳು ಇದ್ದರು.