ಮಡಿಕೇರಿ, ಆ. ೧೧ : ಮಡಿಕೇರಿ ನಗರ ಸಭೆ ಸಾರ್ವಜನಿಕರ ಪಾಲಿನ ಕಪ್ಪ ಸಲ್ಲಿಕೆಯ ಕೇಂದ್ರವಾಗಿದೆ. ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ದೊಡ್ಡ ಕೆಲಸಗಳವರೆಗೂ ಎಲ್ಲದಕ್ಕೂ ಕಪ್ಪ ಸಲ್ಲಿಕೆಯಾಗಲೇಯಾಗಲೇಬೇಕೆಂದು ರಾಜಿವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆರೋಪಿಸಿದ್ದು, ಈ ಸಂಬAಧ ನಗರಸಭಾ ಆಯುಕ್ತರನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ತೆನ್ನಿರಾ ಮೈನಾ ಅವರು, ನಗರಸಭೆ ಯಲ್ಲಿ ಫಾರಂ ೩, ಕಟ್ಟಡ ಪರವಾನಗಿ ನವೀಕರಣ ಸೇರಿದಂತೆ ಎಲ್ಲಾ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಇಂತಿಷ್ಟು ಹಣ ಕೊಡಲೇಬೇಕೆಂಬ ಅಲಿಖಿತ ನಿಯಮಗಳಿವೆ. ನಗರಸಭೆಗೆ ಆಯುಕ್ತರಾಗಿ ಬಂದಿರುವವರು ಪ್ರಭಾವಿಗಳಿಗೆ ಭಾರೀ ಮೊತ್ತದ ಕಪ್ಪ ಸಲ್ಲಿಸಿ ಬಂದಿದ್ದಾರೆ ಎಂದು ತಿಳಿದು ಬಂದಿದ್ದು, ಇದರಿಂದಾಗಿ ನಗರಸಭೆಯಲ್ಲಿ ಕುರುಡು ಕಾಂಚಾಣ ಎಗ್ಗಿಲ್ಲದೆ ನಲಿದಾಡುತ್ತಿದ್ದು, ಯಾವದೇ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲವೆಂದು ಆಪಾದಿಸಿದರು.
ಇತ್ತೀಚೆಗೆ ನಗರಸಭೆಯಲ್ಲಿ ವಿಲೇವಾರಿಯಾದ ಎಲ್ಲ ಕಡತಗಳಿಗೆ ಸಂಬAಧಿಸಿದAತೆ ಭ್ರಷ್ಟಾಚಾರ ನಡೆದಿರುವ ಶಂಕೆಯಿದ್ದು, ಉನ್ನತ ಆಯುಕ್ತರಾಗಿ ಬಂದಿರುವವರು ಪ್ರಭಾವಿಗಳಿಗೆ ಭಾರೀ ಮೊತ್ತದ ಕಪ್ಪ ಸಲ್ಲಿಸಿ ಬಂದಿದ್ದಾರೆ ಎಂದು ತಿಳಿದು ಬಂದಿದ್ದು, ಇದರಿಂದಾಗಿ ನಗರಸಭೆಯಲ್ಲಿ ಕುರುಡು ಕಾಂಚಾಣ ಎಗ್ಗಿಲ್ಲದೆ ನಲಿದಾಡುತ್ತಿದ್ದು, ಯಾವದೇ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲವೆಂದು ಆಪಾದಿಸಿದರು.
ಇತ್ತೀಚೆಗೆ ನಗರಸಭೆಯಲ್ಲಿ ವಿಲೇವಾರಿಯಾದ ಎಲ್ಲ ಕಡತಗಳಿಗೆ ಸಂಬAಧಿಸಿದAತೆ ಭ್ರಷ್ಟಾಚಾರ ನಡೆದಿರುವ ಶಂಕೆಯಿದ್ದು, ಉನ್ನತ ಮೇ ಎರಡನೇ ವಾರದಲ್ಲಿ ಪೆರೆಡ್ ನಡೆಸಿ ಮಾಧ್ಯಮಕ್ಕೆ ಫೋಸ್ ಕೊಟ್ಟ ಉದ್ದೇಶವಾದರೂ ಏನೂ..? ಎಂದು ಪ್ರಶ್ನಿಸಿದರು.
ಇದರೊಂದಿಗೆ ನಗರಸಭಾ ಸದಸ್ಯ ರೋರ್ವರು ಗುತ್ತಿಗೆದಾರ ರೊಂದಿಗೆ ಮಾತನಾಡಿರುವ ಆಡಿಯೋ ಹರಿದಾಡುತ್ತಿದ್ದು, ಇದರಲ್ಲಿ ಬಿಜೆಪಿ ದಲಿತ ಹಾಗೂ ಮುಸ್ಲಿಂ ವಿರೋಧಿ ಎಂಬದು ಬಹಿರಂಗಗೊAಡಿದೆ. ಇದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು. ಅಲ್ಲದೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗ ಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಮಡಿಕೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿಗೌಡ ಇದ್ದರು.