ಗೋಣಿಕೊಪ್ಪಲು, ಆ. ೧೦: ದೇಶದ ಜನತೆಗೆ ಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಸೇವಾ ಸಾಧಕರ ಹೆಸರುಗಳನ್ನು ಹುಡುಕುವ ಕಾರ್ಯದಲ್ಲಿ ಬಿಜೆಪಿ ನಿರತವಾಗಿದ್ದು, ಕೀಳುಮಟ್ಟದ ರಾಜಕಾರಣದ ವಿರುದ್ಧ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆಕ್ಷೇಪ ಮಾಡಿದ್ದಾರೆ.
ಈ ದೇಶಕ್ಕೆ ಅಪಾರ ಯೋಜನೆಗಳು, ಕೊಡುಗೆಗಳನ್ನು ನೀಡಿದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಮಹಾನ್ ನಾಯಕರುಗಳ ಹೆಸರುಗಳನ್ನು ಅಳಿಸಲು ಮುಂದಾಗಿದೆ ಎಂದು ಖಂಡಿಸಿದ್ದಾರೆ.