ಮೂಲತಃ ಜಿಲ್ಲೆಯ ಹೊದ್ದೂರು ನಿವಾಸಿ, ಪುತ್ತೂರಿನಲ್ಲಿ ನೆಲೆಸಿದ್ದ ಶಾಂತಿ ರವಿ (೫೫-ತವರುಮನೆ ಬಾಚುರ) ಅವರು ತಾ. ೧೧ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೨ ರಂದು (ಇಂದು) ಹೊದ್ದೂರಿನ ಐನ್‌ಮನೆಯಲ್ಲಿ ನೆರವೇರಲಿದೆ.

*ಕೋಣನಕುಂಟೆ-ಧನುಗಾಲ ನಿವಾಸಿ ಟಿ.ವಿ. ಬಾಲಕೃಷ್ಣ (ಕುಟ್ಟ-೪೭) ಅವರು ತಾ. ೧೧ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೨ ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.

*ಮಡಿಕೇರಿ, ಗಾಳಿಬೀಡು ನಿವಾಸಿ ದಿ. ಜೆ.ಜೆ. ಮಸ್ಕರೇನಸ್ ಅವರ ಪತ್ನಿ ಫಿಲೋಮಿನಾ ಮಸ್ಕರೇನಸ್ (೮೦) ಅವರು ತಾ. ೧೧ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೨ ರಂದು (ಇಂದು) ಸಂತ ಮೈಕಲರ ಚರ್ಚ್ನಲ್ಲಿ ನೆರವೇರಲಿದೆ. ಮೃತರು ಐವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

*ಗುಡ್ಡೆಹೊಸೂರು ಗ್ರಾಮದ ನಿವಾಸಿ ದಿ. ಅಣ್ಣು ಪೂಜಾರಿ ಅವರ ಪತ್ನಿ ಪುಷ್ಪವತಿ (೭೭) ತಾ. ೧೦ ರಂದು ನಿಧನರಾದರು. ಮೃತರು ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

*ಸುಂಟಿಕೊಪ್ಪ ನಿವಾಸಿ ಪ್ರದೀಪ್ (೫೦) ತಾ. ೧೦ರಂದು ನಿಧನರಾದರು.