ಸೋಮವಾರಪೇಟೆ, ಆ. ೧೧: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಕಚೇರಿಗೆ ಕಾರ್ಯದರ್ಶಿ ಯನ್ನು ನೇಮಿಸದ ಹಿನ್ನೆಲೆ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಇದರೊಂದಿಗೆ ಕಂಪ್ಯೂಟರ್ ಆಪರೇಟರ್ ಸಹ ಇಲ್ಲದಿರುವುದರಿಂದ ಪಂಚಾಯಿತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಗ್ರಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ದೂರಿದ್ದಾರೆ.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಮಹತ್ವಾಕಾಂಕ್ಷೆಯ ಮಹಾತ್ಮಾ ಗಾಂಧೀಜಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲೂ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಂಚಾಯಿತಿಗೆ ಖಾಯಂ ಕಾರ್ಯದರ್ಶಿಯನ್ನು ನಿಯೋಜಿಸು ವಂತೆ ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಈವರೆಗೆ ಸ್ಪಂದಿಸಿಲ್ಲ ಎಂದು ಗ್ರಾ.ಪಂ. ಸದಸ್ಯರುಗಳು ದೂರಿದ್ದಾರೆ.

ದೊಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೫೦೦ಕ್ಕೂ ಅಧಿಕ ಜನಸಂಖ್ಯೆಯಿದ್ದು, ೯ ವಾರ್ಡ್ಗಳಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ದೊಡ್ಡಮಳ್ತೆ, ವಳಗುಂದ, ಕೂಗೇಕೋಡಿ, ಹೊನ್ನವಳ್ಳಿ, ಗೆಜ್ಜೆಹಣಕೋಡು, ದೊಡ್ಡಹಣಕೋಡು, ಜೇನಿಗರಕೊಪ್ಪ, ಸಬ್ಬನಕೊಪ್ಪಲು, ಸುಳಿಮಳ್ತೆ, ಹಾರೋಹಳ್ಳಿ, ಕಾಗಡಿಕಟ್ಟೆ, ಹೊನ್ನಹಣಕೋಡು ಗ್ರಾಮಗಳು ಒಳಪಡುತ್ತಿದ್ದು, ೯ ಮಂದಿ ಗ್ರಾ.ಪಂ. ಸದಸ್ಯರಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಷ್ಟು ಸಮಸ್ಯೆಗಳಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಎದುರು ನೋಡುತ್ತಿದೆ. ಬಹುತೇಕ ಕಾಮಗಾರಿಗಳನ್ನು ಎನ್‌ಆರ್‌ಇಜಿ ಯೋಜನೆಯಡಿ ನಿರ್ವಹಿಸಬಹುದಾಗಿದ್ದರೂ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿ ಹಾಗೂ ಕಂಪ್ಯೂಟರ್ ಆಪರೇಟರ್ ಇಲ್ಲದೇ ಸಮಸ್ಯೆಯಾಗಿದೆ. ಇದರೊಂದಿಗೆ ಹೆಚ್ಚಿನ ಕುಟುಂಬಗಳನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವ್ಯಾಪ್ತಿಗೆ ತಂದು ಜಾಬ್ ಕಾರ್ಡ್ ಮಾಡಿಸಲೂ ತೊಡ ಕಾಗಿದೆ.

ಪರಿಣಾಮ ಎನ್‌ಆರ್‌ಇಜಿ ಕಾಯಕ ಮಿತ್ರ ಸಿಬ್ಬಂದಿಯ ನಿಯೋಜನೆಯಿಂದ ಪಂಚಾಯಿತಿ ಹೊರಗುಳಿಯುವಂತಾಗಿದೆ ಎಂದು ಗ್ರಾ.ಪಂ.ನ ನೂತನ ಸದಸ್ಯರುಗಳು ಅಸಮಾಧಾನ ಹೊರಹಾಕುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಎನ್‌ಆರ್‌ಇಜಿ ಯೋಜನೆಯಡಿ ಕಾಮಗಾರಿ ತೆಗೆದುಕೊಳ್ಳಲು, ಜಾಬ್ ಕಾರ್ಡ್ ಮಾಡಿಸಲು ಒತ್ತಾಯಿಸಿದರೆ “ಪಂಚಾಯಿತಿಗೆ ಕಾರ್ಯದರ್ಶಿ ಹಾಗೂ ಕಂಪ್ಯೂಟರ್ ಆಪರೇಟರ್‌ನ್ನು ಕರೆತನ್ನಿ, ಒಬ್ಬರಿಂದಲೇ ಎಲ್ಲಾ ಕೆಲಸ ಮಾಡೋಕೆ ಆಗಲ್ಲ” ಎಂದು ಸಬೂಬು ನೀಡುತ್ತಿದ್ದಾರೆ. ಮಳ್ತೆ, ವಳಗುಂದ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಆ ಭಾಗದ ಸದಸ್ಯರು ದೂರಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಹಾಗೂ ಕಂಪ್ಯೂಟರ್ ಆಪರೇಟರ್ ಇಲ್ಲದೇ ಇರುವುದರಿಂದ ಪಂಚತAತ್ರದ ಕೆಲಸ ಕಾರ್ಯಗಳು ಹಾಗೆಯೇ ಉಳಿದಿವೆ. ಪ್ರಸ್ತುತ ಪಂಚಾಯಿತಿಯ ಬಹುತೇಕ ಎಲ್ಲಾ ಕೆಲಸಗಳೂ ಗಣಕಯಂತ್ರದ ಮೂಲಕವೇ ನಿರ್ವಹಣೆಗೊಳ್ಳುತ್ತಿದ್ದು, ನಮ್ಮ ಪಂಚಾಯಿತಿಯಲ್ಲಿ ಆಪರೇಟರ್ ಇಲ್ಲದೇ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ತಾಲೂಕು ಪಂಚಾ ಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಗಮನ ಹರಿಸಿ ಅಗತ್ಯ ಸಿಬ್ಬಂದಿಗಳ ನಿಯೋಜನೆಗೆ ಕ್ರಮಕೈಗೊಳ್ಳಬೇಕು. ತಪ್ಪಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಸದಸ್ಯರುಗಳು ಎಚ್ಚರಿಸಿದ್ದಾರೆ.