ಕಣಿವೆ, ಆ. ೧೧: ಕೂಡ್ಲೂರು ಗ್ರಾಮದ ಮುಖ್ಯ ರಸ್ತೆಯ ಅಂಚಿನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣ ಇದೀಗ ಗ್ರಾಮದ ಜಾನುವಾರುಗಳ ಮೇವಿನ ತಾಣವಾಗಿ ಮಾರ್ಪಟ್ಟಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳು ಕಲಿತು ನಲಿಯಬೇಕಿದ್ದ ಶಾಲೆಯ ಆವರಣ ಜಗವನ್ನು ಕಾಡುತ್ತಿರುವ ಕೋವಿಡ್ ಭೀತಿಯ ಭೂತದಿಂದಾಗಿ ಮಕ್ಕಳ ಹಾಜರಿಗೆ ಬ್ರೇಕ್ ಬಿದ್ದಿರುವುದರಿಂದಾಗಿ ಗ್ರಾಮದ ಜಾನುವಾರುಗಳು ಅನಾಯಾಸವಾಗಿ ಶಾಲೆಯ ಆವರಣವನ್ನು ಹುಲ್ಲುಗಾವಲಾಗಿಸಿಕೊಂಡಿವೆ.
ಶಾಲೆಯ ಸುತ್ತ ಸೂಕ್ತ ತಡೆಗೋಡೆಯಾಗಲೀ, ಪ್ರವೇಶ ದ್ವಾರದಲ್ಲಿ ವ್ಯವಸ್ಥಿತ ಗೇಟ್ಗಳಾಲೀ ಇಲ್ಲದಿರುವುದರಿಂದ ಗ್ರಾಮಸ್ಥರು ತಮ್ಮ ಪಾಲನೆಯ ಜಾನುವಾರುಗಳನ್ನು ಮೇಯಲು ಹೀಗೆ ಶಾಲಾವರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಗ್ರಾಮದ ಸುಂದರ ಪರಿಸರದಲ್ಲಿ ಇರುವ ಈ ಶಾಲೆಯ ಸುತ್ತ ಆಕರ್ಷಕವಾದ ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸುವಲ್ಲಿ ಜಾನುವಾರುಗಳ ಕಾಟ ಇರುವುದರಿಂದ ಕೂಡಲೇ ಸೂಕ್ತ ತಡೆಗೋಡೆ ಅತ್ಯಗತ್ಯವಾಗಿದೆ. ಶಾಸಕರು ಶಾಲೆಯ ಸುತ್ತಲೂ ತಡೆಗೋಡೆ ಹಾಗೂ ಗೇಟು ಅಳವಡಿಸಲು ಮುಂದಾಗಬೇಕೆAದು ಗ್ರಾಮ ನಿವಾಸಿ ತಾ.ಪಂ. ಮಾಜಿ ಸದಸ್ಯ ಲಕ್ಷö್ಮಣ ರಾಜೇ ಅರಸು ಒತ್ತಾಯಿಸಿದ್ದಾರೆ.
ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಶಾಲೆಗೆ ಕಾಂಪೌAಡ್ ಹಾಗೂ ಗೇಟ್ ಬೇಕಾಗಿದೆ. ಗ್ರಾಮಸ್ಥರ ಸಹಕಾರ ಕೋರಲಾಗಿದೆ. ಹಾಗೆಯೇ ಸರ್ಕಾರದ ಅನುದಾನಕ್ಕೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದು ತಿಳಿಸಿದ್ದಾರೆ. -ಮೂರ್ತಿ