ನಾಪೋಕ್ಲು, ಆ. ೧೧: ನಾಪೋಕ್ಲುವಿನಿಂದ ವೀರಾಜಪೇಟೆಗೆ ಹೋಗುವ ರಾಜ್ಯ ಹೆದ್ದಾರಿಯ ಕೋಟೇರಿ ಬಳಿಯಲ್ಲಿ ರಸ್ತೆಯು ಗುಂಡಿಬಿದ್ದು ತೀರಾ ಹದಗೆಟ್ಟಿದ್ದು, ಇದನ್ನು ಸರಿಪಡಿಸಲಾಯಿತು. ರಸ್ತೆ ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆಯವರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನು ಮನಗಂಡ ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ. ಕಾರ್ಯಕರ್ತರು ಪುಡಿಕಲ್ಲನ್ನು ತಂದು ರಸ್ತೆಯಲ್ಲಿನ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ ಮಾಡಬೇಕಾದ ಕೆಲಸವನ್ನು ಈ ಸಂಘಟನೆಯವರು ಮಾಡಿರುವುದಕ್ಕೆ ನಾಗರಿಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ನಾಪೋಕ್ಲು ಗ್ರಾಮ ಪಂಚಾಯತ್ ಸದಸ್ಯ ಕೆ.ಯು. ಅಶ್ರಫ್, ಪಿ.ಎಫ್.ಐ ನ ವಲಯಾಧ್ಯಕ್ಷ ಅಶ್ರಫ್ ಕುಂಜಿಲ, ಎಸ್.ಡಿ.ಪಿ.ಐ. ಕಾರ್ಯಕರ್ತರು, ಮತ್ತಿತರರು ಭಾಗವಹಿಸಿದ್ದರು. - ದುಗ್ಗಳ