*ಸಿದ್ದಾಪುರ ಆ. ೧೦: ತ್ಯಾಗತ್ತೂರು ಕೃಷ್ಣಪುರ ಭಾಗದ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಗ್ರಾಮದ ಕೃಷಿಕರು ಈಗಷ್ಟೇ ನಾಟಿ ಕಾರ್ಯ ಪೂರ್ಣಗೊಳಿಸಿದ್ದು, ಇವುಗಳ ಮೇಲೆಯೇ ಕಾಡಾನೆಗಳ ಸವಾರಿ ನಿರಂತರವಾಗಿದೆ.

ಗ್ರಾಮದಲ್ಲಿ ಉತ್ತಮ ಮಳೆಯಾಗಿದ್ದು, ಹೆಚ್ಚು ಬೆಳೆ ತೆಗೆಯಬಹುದೆನ್ನುವ ವಿಶ್ವಾಸದಿಂದ ಮಾಡಿರುವ ನಾಟಿಕಾರ್ಯವೆಲ್ಲವು ನಿಷ್ಪçಯೋಜಕವಾಗಿದೆ. ಬೆಳೆ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ಗದ್ದೆಗಳು ಹಾಳಾಗಿವೆ. ನಿತ್ಯ ದಾಂಧಲೆ ನಡೆಸುತ್ತಿರುವ ಆನೆಗಳಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪರಿಹಾರ ಘೋಷಿಸಬೇಕೆಂದು ಸ್ಥಳೀಯ ರೈತರು ಹಾಗೂ ಬೆಳೆಗಾರರು ಒತ್ತಾಯಿಸಿದ್ದಾರೆ.