ಮಡಿಕೇರಿ, ಆ. ೧೦: ಓಂಕಾರೇಶ್ವರ ದೇವಾಲಯದ ವತಿಯಿಂದ ದೇವಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ಸಹಯೋಗದೊಂದಿಗೆ ನಾಟಿ ಕಾರ್ಯ ನಡೆಯಿತು. ಸಂಪ್ರದಾಯದAತೆ ಗದ್ದೆಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ನೆರವೇರಿಸಿದ ಬಳಿಕ ನಾಟಿ ಕಾರ್ಯ ಕೈಗೊಳ್ಳಲಾಯಿತು.

ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಪುಲಿಯಂಡ ಜಗದೀಶ್, ಮಾಜಿ ಸದಸ್ಯರಾದ ಪ್ರಕಾಶ್ ಆಚಾರ್ಯ, ಸುನಿಲ್ ಕುಮಾರ್, ಪ್ರಭು ರೈ, ತೆನ್ನೀರಾ ಮೈನಾ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಉಪಾಧ್ಯಕ್ಷರಾದ ಕಾಶಿ ಅಚ್ಚಯ್ಯ, ರಾಣಿ ಮಾಚಯ್ಯ, ಕುಶಾಲಪ್ಪ, ಖಜಾಂಚಿ ಸಂಪತ್ ಕುಮಾರ್, ಕಾರ್ಯದರ್ಶಿ ಉಜ್ವಲ್ ರಂಜಿತ್, ಮೂರ್ನಾಡು ಘಟಕದ ಕಾರ್ಯದರ್ಶಿ ಕಿಗ್ಗಾಲು ಹರೀಶ್, ಮಡಿಕೇರಿ ತಾಲೂಕು ಘಟಕದ ಖಜಾಂಚಿ ಅಂಬೆಕಲ್ ನವೀನ್, ಸದಸ್ಯರಾದ ರೇವತಿ ರಮೇಶ್, ವೀಣಾಕ್ಷಿ, ಸಂಗೀತ ಪ್ರಸನ್ನ, ಗೀತಾ, ಸಾಹಿತಿ ಆಶಾಹೆಗ್ಡೆ, ವೈದ್ಯೆ ಅನುಶ್ರೀ ಮತ್ತಿತರರು ನಾಟಿ ಕಾರ್ಯದಲ್ಲಿ ಭಾಗಿಯಾದರು.

ಹುತ್ತರಿ ಹಬ್ಬದ ಸಂದರ್ಭ ಇಲ್ಲಿ ಬೆಳೆದ ಪೈರನ್ನು ಕಟಾವು ಮಾಡಿ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.

೩೦ ವರ್ಷಗಳ ಸೇವೆ

ಓಂಕಾರೇಶ್ವರ ದೇವಾಲಯ ದಲ್ಲಿ ನಡೆಯುವ ನಾಟಿ ಕಾರ್ಯಕ್ಕೆ ಕಳೆದ ೩೦ ವರ್ಷಗಳಿಂದ ಭತ್ತದ ಸಸಿಗಳನ್ನು ಮ್ಯಾನ್ಸ್ ಕಾಂಪೌAಡ್ ನಿವಾಸಿ ವಾಸುದೇವ ಅವರು ಉಚಿತವಾಗಿ ಒದಗಿಸುತ್ತಾ ಬಂದಿದ್ದಾರೆ.