ಗೋಣಿಕೊಪ್ಪ ವರದಿ, ಆ. ೧೦: ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ತಾಯಿ, ಮಗ ಒಟ್ಟಿಗೆ ತೇರ್ಗಡೆಯಾಗಿದ್ದಾರೆ. ಸಮಾಜ ಸೇವಕಿ ಕೈಕೇರಿ ಗ್ರಾಮದ ಪಡಿಕಲ್ ಕುಸುಮ ಚಂದ್ರಶೇಖರ್ ಹಾಗೂ ಅವರ ಮಗ ಗೌತಮ್ ತೇರ್ಗಡೆಯಾದವರು.
ಗೋಣಿಕೊಪ್ಪ ಪ್ರೌಢಶಾಲೆ ವಿದ್ಯಾರ್ಥಿಯಾಗಿರುವ ಪಿ. ಗೌತಮ್ ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಅನುತ್ತೀರ್ಣರಾಗಿದ್ದ ಕಾರಣ ಈ ಬಾರಿ ಪರೀಕ್ಷೆ ಬರೆದಿದ್ದ. ತಾಯಿ ಪಡಿಕಲ್ ಕುಸುಮ ಮಡಿಕೇರಿಯಲ್ಲಿ ಪರೀಕ್ಷೆ ಬರೆದಿದ್ದರು.
ಕುಸುಮಾವತಿ ೧೮ ವರ್ಷಗಳ ಹಿಂದೆ ಟಿ. ಶೆಟ್ಟಿಗೇರಿ ಗ್ರಾಮದ ಮಾಯಣಮಾಡ ಮಂದಣ್ಣ ಪ್ರೌಢಶಾಲೆಯಲ್ಲಿ ೯ನೇ ತರಗತಿ ಸಂದರ್ಭ ವಿವಾಹವಾಗಿದ್ದರು. ಇದರಿಂದಾಗಿ ವಿದ್ಯಾಭ್ಯಾಸಕ್ಕೆ ಕಡಿವಾಣ ಬಿತ್ತು. ಇದೀಗ ಪರೀಕ್ಷೆ ಬರೆದು ಪಾಸ್ ಮಾಡಿಕೊಂಡಿದ್ದಾರೆ.
ಜನಪ್ರತಿನಿಧಿಯಾಗಿ ತೊಡಗಿಕೊಳ್ಳಲು ಎಸ್ಎಸ್ಎಲ್ಸಿ ತೇರ್ಗಡೆ ಹೊಂದುವುದು ಅಗತ್ಯವೆನಿಸಿ ಈ ನಿಟ್ಟಿನಲ್ಲಿ ಪರೀಕ್ಷೆ ಬರೆದೆ. ಫಲಿತಾಂಶದಿAದ ಮತ್ತಷ್ಟು ಸಮಾಜ ಸೇವೆ ಮಾಡಬೇಕೆಂಬ ಹಂಬಲ ಹೆಚ್ಚಾಗಿದೆ ಎಂದು ಕುಸುಮಾವತಿ ಅಭಿಪ್ರಾಯ ವ್ಯಕ್ತಪಡಿಸಿದರು.